ಗುರಿ

This page features a video of the poem “ಗುರಿ (Guri)”, prescribed under the Karnataka State Syllabus for 10th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಅಳಿಯಾಸೆಗಳ ಸುಳಿಗೆ ಸಿಲುಕಿದೆಲೆ ಮನವೇ
ನೆಲೆಯಿರದೆ ತೊಳಲುವುದು ಮನುಜ ಜೀವನವೇ?
ನನೆಬೇಕು, ಕೊನೆಬೇಕು ನರನ ಬಾಳುವೆಗೆ
ದಿನದ ಗೈಮೆಯ ಹೂವು ಫಲಿಸಿ ಬರುವುದಕೆ.

ಕೆಸರೊಳಿದ್ದರು ಮೇಲೆ ಬಾಂದಳವ ನೋಡಿ
ಮಿಸುಪ ರವಿಕಿರಣಗಳ ಸಿರಿಗೆ ಮೆರೆದಾಡಿ
ಮಸಗುವಂಬುಜದಂತೆ ಧ್ಯೇಯದಾಳ್ವೆಸಕೆ
ಬಸಮಾಗು, ಬಂದ ಮನುಜತೆಯ ಸಾರ್ಥಕತೆಗೆ.

ಗಾಳಿ ಬಂದೆಡೆ ತಿರುಗುವಾ ಹೇಡಿತನವು
ದಾಳಿ ಬಂದೊಡನೆ ಶರಣೆಂಬ ಹೆಣ್ತನವು
ಬೇಡ. ಹಿಡಿದೊಳ್ದಾರಿಯೊಳು ಕೊನೆಯವರೆಗೆ
ದೂಡು ಬಾಳ್ವೆಯನು ಪೌರುಷದ ಹೊನಲೊಳಗೆ.

ಒಂದು ಬಾಣಕೆ ಗುರಿಯು ಹಲವಿರುವುದುಂಟೆ?
ಒಂದು ದೇಹದೊಳಾತ್ಮವೆರಡಿರುವುದುಂಟೆ?
ಒಂದು ಜೀವನಕೇಕೆ ಹಲವು ಸಾಧ್ಯಗಳು?
ಒಂದೆ ಹೆಗ್ಗುರಿಗೆ ಹೋರಾಡು ಹಗಲಿರುಳು.

ನರನೊಳಗೆ ನಾರಾಯಣನ ರೂಪು ಕಂಡು,
ತಿರೆಯೊಳಗೆ ಸುರಪುರದ ಮೈಸಿರಿಯನುಂಡು
ಪರಹಿತಕೆ ಬಳಲುತಿರಲದುವೆ ಜೀವನವು;
ಪೆರತೇನನೆಸಗಿದರು ನಮಗೆ ಲಾಂಛನವು.
Summary
ಈ ಕವಿತೆ ಅಳಿಯದ ಆಸೆಗಳ ಸುಳಿಯಲ್ಲಿ ಸಿಲುಕಿದಾಗ ಮಾನವ ಜೀವನ ಹೇಗೆ ಅಸ್ಥಿರವಾಗುತ್ತದೆ ಎಂಬುದನ್ನು ಚಿಂತಿಸುತ್ತದೆ. ಬದುಕಿಗೆ ಸ್ಪಷ್ಟವಾದ ಗುರಿ ಇರಬೇಕು ಮತ್ತು ಗೊಂದಲದಲ್ಲಿ ಅಲೆದಾಡಬಾರದು ಎಂದು ಹೇಳುತ್ತದೆ. ಕೆಸರಿನೊಳಗಿದ್ದರೂ ಮೇಲಿನ ಆಕಾಶವನ್ನು ನೋಡಿ ಅರಳುವ ಕಮಲವು ಕಷ್ಟಗಳ ನಡುವೆಯೂ ಉನ್ನತ ಧ್ಯೇಯದ ಮೇಲೆ ನೆಲೆಸುವ ಸಂಕೇತವಾಗಿದೆ. ಕಷ್ಟಗಳು ಬಂದಾಗ ಹೇಡಿತನದಿಂದ ಶರಣಾಗದೆ ಧೈರ್ಯದಿಂದ ಮುಂದೆ ಸಾಗಬೇಕೆಂದು ಕವಿತೆ ಹೇಳುತ್ತದೆ. ಕೊನೆಯಲ್ಲಿ ನರನೊಳಗೆ ನಾರಾಯಣನ ರೂಪವನ್ನು ಕಂಡು ಪರಹಿತಕ್ಕಾಗಿ ಬದುಕನ್ನು ಅರ್ಪಿಸುವಂತೆ ಪ್ರೇರೇಪಿಸುತ್ತದೆ.
Author
ಕವಿ: ಎಂ. ಗೋಪಾಲಕೃಷ್ಣ ಅಡಿಗ