This page features a video of the poem “ಸಂಕಲ್ಪಗೀತೆ (Sankalpagite)”, prescribed under the Karnataka State Syllabus for 10th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಸುತ್ತಲು ಕವಿಯುವ ಕತ್ತಲೆಯೊಳಗೆ
ಪ್ರೀತಿಯ ಹಣತೆಯ ಹಚ್ಚೋಣ.
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ.
ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ.
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ.
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ.
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ.
ಪ್ರೀತಿಯ ಹಣತೆಯ ಹಚ್ಚೋಣ.
ಬಿರುಗಾಳಿಗೆ ಹೊಯ್ದಾಡುವ ಹಡಗನು
ಎಚ್ಚರದಲಿ ಮುನ್ನಡೆಸೋಣ.
ಕಲುಷಿತವಾದೀ ನದೀಜಲಗಳಿಗೆ
ಮುಂಗಾರಿನ ಮಳೆಯಾಗೋಣ.
ಬರಡಾಗಿರುವೀ ಕಾಡುಮೇಡುಗಳ
ವಸಂತವಾಗುತ ಮುಟ್ಟೋಣ
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ
ಹೊಸ ಭರವಸೆಗಳ ಕಟ್ಟೋಣ.
ಮನುಜರ ನಡುವಣ ಅಡ್ಡಗೋಡೆಗಳ
ಕೆಡವುತ ಸೇತುವೆಯಾಗೋಣ.
ಮತಗಳೆಲ್ಲವೂ ಪಥಗಳು ಎನ್ನುವ
ಹೊಸ ಎಚ್ಚರದೊಳು ಬದುಕೋಣ
ಭಯ-ಸಂಶಯದೊಳು ಕಂದಿದ ಕಣ್ಣೊಳು
ನಾಳಿನ ಕನಸನು ಬಿತ್ತೋಣ.
Summary
ಈ ಕವಿತೆ ಕತ್ತಲೆಯಿಂದ ಸುತ್ತುವರಿದ ಲೋಕದಲ್ಲಿ ಪ್ರೀತಿ ಮತ್ತು ಭರವಸೆಯ ದೀಪವನ್ನು ಹಚ್ಚುವಂತೆ ಕರೆ ನೀಡುತ್ತದೆ. ಬಿರುಗಾಳಿಯಲ್ಲಿ ಅಲೆದಾಡುವ ಹಡಗಿನಂತೆ ಇರುವ ಬದುಕನ್ನು ಎಚ್ಚರಿಕೆಯಿಂದ ಮತ್ತು ಧೈರ್ಯದಿಂದ ಮುನ್ನಡೆಸುವ ಸಂದೇಶವನ್ನು ನೀಡುತ್ತದೆ. ಕಲುಷಿತ ನದಿಗಳಿಗೆ ಮಳೆಯಾಗಿ, ಬರಡಾದ ಕಾಡುಗಳಿಗೆ ವಸಂತವಾಗಿ ಬರುವಂತೆ ಕವಿತೆ ಪ್ರೇರೇಪಿಸುತ್ತದೆ. ಬಿದ್ದವರನ್ನು ಎಬ್ಬಿಸಿ ನಿಲ್ಲಿಸುವುದು, ಹೊಸ ಭರವಸೆಗಳನ್ನು ಕಟ್ಟುವುದು ಮತ್ತು ಮನುಷ್ಯರ ನಡುವಿನ ಅಡ್ಡಗೋಡೆಗಳನ್ನು ಕೆಡವಿ ಸೇತುವೆಯಾಗುವುದು ಇದರ ಮುಖ್ಯ ಆಶಯವಾಗಿದೆ. ವಿವಿಧ ಮತಗಳನ್ನು ವಿವಿಧ ಪಥಗಳೆಂದು ಒಪ್ಪಿಕೊಂಡು ಜಾಗೃತಿಯಿಂದ ಬದುಕಿ, ಭಯ ಮತ್ತು ಸಂಶಯದಿಂದ ಕಂದಿದ ಕಣ್ಣುಗಳಲ್ಲಿ ನಾಳಿನ ಕನಸುಗಳನ್ನು ಬಿತ್ತಬೇಕೆಂದು ಕವಿತೆ ಹೇಳುತ್ತದೆ.
Author
ಜಿ. ಎಸ್. ಶಿವರುದ್ರಪ್ಪ