This page features a video of the poem “ವಸಂತ ಮುಖ ತೋರಲಿಲ್ಲ (Vasanta Mukha Toralilla)”, prescribed under the Karnataka State Syllabus for 10th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಒಡೆಯನ ಅಂಗಳದಲಿ
ಮೈ ತುಂಬಿ ನಿಂತ ಮಾವಿನ ಮರಗಳು
ರೆಕ್ಕೆ ಬಿಚ್ಚಿ ಹಾರುವ ಹಕ್ಕಿಗಳು
ಮನದುಂಬಿ ಹಾಡುವ ಕೋಗಿಲೆಗಳು
ಕಡಲುಕ್ಕಿ ಹರಿಯುವ ಸಂಭ್ರಮ ಇಳೆಗೆ
ಇದಕೇನಾಗಿದೆ ಈ ಪುಟ್ಟ ಪೋರಿಗೆ
ಒಳ-ಹೊರಗಿನ ಸಂಭ್ರಮದಲ್ಲಿ
ಬಟ್ಟೆ ಮೇಲೆ ಬಣ್ಣದ ಚಿಟ್ಟೆ
ಚಿತ್ತಾರ ಬಿಡಿಸಿದ ನವಿಲು
ಹೊರಗೆ ಇವಳು
ಹಾಲುಗಲ್ಲದ ಹಸುಳೆ
ಮುಸುರೆ ತಿಕ್ಕುತ್ತಿದ್ದಾಳೆ
ಬಾಗಿಲಲಿ ಬಳುಕುವ
ಮಾವಿನೆಲೆಯ ತೋರಣ
ಮಲ್ಲಿಗೆ ಹೂವಲಿ
ಬೀರುವ ಮುಗುಳು ನಗೆ!
ಹೊಳೆವ ರಂಗೋಲಿಯಲಿ
ಥಳಥಳಿಸುವ ಬಾಲ ರವಿಯ
ಕಂಡು ಮೂಕವಿಸ್ಮಿತಳಾದ ಪುಟ್ಟಿ
ಮತ್ತೆ ಮತ್ತೆ ನೋಡುತ್ತಿದ್ದಾಳೆ.
ಗುಡಿಸಲಿನಲಿ ಗೂರುತ್ತ ಅಮ್ಮ ಮಲಗಿದ್ದಾಳೆ
ತೂತು ಬಿದ್ದ ಸೀರೆಯಲಿ ಬಾಲ ರವಿ ಸೊರಗಿದ್ದಾನೆ
ಸುಣ್ಣ ಕಾಣದ ಗೋಡೆಗಳು ಮುಖ ಮುಚ್ಚಿಕೊಂಡಿವೆ
ಕತ್ತಲೆ ಗವ್ವೆನ್ನುವ ಗುಡಿಸಲೊಳಗೆ
ಬರಲು ವಸಂತನಿಗೂ ಹೆದರಿಕೆ!
ಕಮ್ಮಾರನ ಕುಲುಮೆ ಉರಿಯಲಿಲ್ಲ
ಕುಂಬಾರನ ತಿಗುರಿ ತಿರುಗಲಿಲ್ಲ
ನೇಕಾರನ ಮಗ್ಗ ಉಸಿರಾಡಲಿಲ್ಲ
ಕೇರಿಯ ಮಾರನ ಒಲೆ ಹೊತ್ತಲಿಲ್ಲ
ಇವರಾರಿಗೂ ವಸಂತ ಮುಖ ತೋರಲಿಲ್ಲ!
ಗುಡಿಸಲೊಳಗೆ ಬರಲು
ವಸಂತ ಹೆದರಿದನೆ?
ಹರಿದ ಚಿಂದಿ ಬಟ್ಟೆಗಳ ಕಂಡು
ಅವನು ಮರುಗಿದನೆ?
ಪ್ರಶ್ನಿಸಿಕೊಳ್ಳುತ್ತಾಳೆ ಪುಟ್ಟಿ
ಮತ್ತೆ ಮತ್ತೆ ನೆಲವ ತಟ್ಟಿ!
ಮೈ ತುಂಬಿ ನಿಂತ ಮಾವಿನ ಮರಗಳು
ರೆಕ್ಕೆ ಬಿಚ್ಚಿ ಹಾರುವ ಹಕ್ಕಿಗಳು
ಮನದುಂಬಿ ಹಾಡುವ ಕೋಗಿಲೆಗಳು
ಕಡಲುಕ್ಕಿ ಹರಿಯುವ ಸಂಭ್ರಮ ಇಳೆಗೆ
ಇದಕೇನಾಗಿದೆ ಈ ಪುಟ್ಟ ಪೋರಿಗೆ
ಒಳ-ಹೊರಗಿನ ಸಂಭ್ರಮದಲ್ಲಿ
ಬಟ್ಟೆ ಮೇಲೆ ಬಣ್ಣದ ಚಿಟ್ಟೆ
ಚಿತ್ತಾರ ಬಿಡಿಸಿದ ನವಿಲು
ಹೊರಗೆ ಇವಳು
ಹಾಲುಗಲ್ಲದ ಹಸುಳೆ
ಮುಸುರೆ ತಿಕ್ಕುತ್ತಿದ್ದಾಳೆ
ಬಾಗಿಲಲಿ ಬಳುಕುವ
ಮಾವಿನೆಲೆಯ ತೋರಣ
ಮಲ್ಲಿಗೆ ಹೂವಲಿ
ಬೀರುವ ಮುಗುಳು ನಗೆ!
ಹೊಳೆವ ರಂಗೋಲಿಯಲಿ
ಥಳಥಳಿಸುವ ಬಾಲ ರವಿಯ
ಕಂಡು ಮೂಕವಿಸ್ಮಿತಳಾದ ಪುಟ್ಟಿ
ಮತ್ತೆ ಮತ್ತೆ ನೋಡುತ್ತಿದ್ದಾಳೆ.
ಗುಡಿಸಲಿನಲಿ ಗೂರುತ್ತ ಅಮ್ಮ ಮಲಗಿದ್ದಾಳೆ
ತೂತು ಬಿದ್ದ ಸೀರೆಯಲಿ ಬಾಲ ರವಿ ಸೊರಗಿದ್ದಾನೆ
ಸುಣ್ಣ ಕಾಣದ ಗೋಡೆಗಳು ಮುಖ ಮುಚ್ಚಿಕೊಂಡಿವೆ
ಕತ್ತಲೆ ಗವ್ವೆನ್ನುವ ಗುಡಿಸಲೊಳಗೆ
ಬರಲು ವಸಂತನಿಗೂ ಹೆದರಿಕೆ!
ಕಮ್ಮಾರನ ಕುಲುಮೆ ಉರಿಯಲಿಲ್ಲ
ಕುಂಬಾರನ ತಿಗುರಿ ತಿರುಗಲಿಲ್ಲ
ನೇಕಾರನ ಮಗ್ಗ ಉಸಿರಾಡಲಿಲ್ಲ
ಕೇರಿಯ ಮಾರನ ಒಲೆ ಹೊತ್ತಲಿಲ್ಲ
ಇವರಾರಿಗೂ ವಸಂತ ಮುಖ ತೋರಲಿಲ್ಲ!
ಗುಡಿಸಲೊಳಗೆ ಬರಲು
ವಸಂತ ಹೆದರಿದನೆ?
ಹರಿದ ಚಿಂದಿ ಬಟ್ಟೆಗಳ ಕಂಡು
ಅವನು ಮರುಗಿದನೆ?
ಪ್ರಶ್ನಿಸಿಕೊಳ್ಳುತ್ತಾಳೆ ಪುಟ್ಟಿ
ಮತ್ತೆ ಮತ್ತೆ ನೆಲವ ತಟ್ಟಿ!
Summary
ಈ ಕವಿತೆ ಹೊರಗಡೆ ಕಾಣಿಸುವ ವಸಂತದ ಸಂಭ್ರಮ ಮತ್ತು ಒಂದು ಪುಟ್ಟ ಗುಡಿಸಲಿನೊಳಗಿನ ಬಡತನ ಹಾಗೂ ಕತ್ತಲೆಯ ನಡುವಿನ ವ್ಯತ್ಯಾಸವನ್ನು ತೋರಿಸುತ್ತದೆ. ಹೊರಗೆ ಮಾವಿನ ಮರಗಳು, ಹಾರುವ ಹಕ್ಕಿಗಳು, ಹಾಡುವ ಕೋಗಿಲೆಗಳು, ಬಣ್ಣದ ಚಿಟ್ಟೆಗಳು ಮತ್ತು ಹಬ್ಬದ ಅಲಂಕಾರಗಳು ಸಂತೋಷದ ವಾತಾವರಣವನ್ನು ಸೃಷ್ಟಿಸಿವೆ. ಒಂದು ಪುಟ್ಟ ಬಾಲಕಿ ಈ ದೃಶ್ಯಗಳನ್ನು ಆಶ್ಚರ್ಯದಿಂದ ನೋಡುತ್ತಿದ್ದಾಳೆ, ಆದರೆ ಅವಳ ತಾಯಿ ಬಡ ಗುಡಿಸಲಿನೊಳಗೆ ಇದ್ದಾಳೆ. ಗುಡಿಸಲಿನೊಳಗೆ ಹರಿದ ಬಟ್ಟೆಗಳು, ಸುಣ್ಣ ಕಾಣದ ಗೋಡೆಗಳು ಮತ್ತು ವಸಂತವೂ ಬರಲು ಹೆದರುವಂತಹ ಕತ್ತಲೆ ಇದೆ. ಕಮ್ಮಾರ, ಕುಂಬಾರ, ನೇಕಾರ ಮತ್ತು ಇತರ ಕಾರ್ಮಿಕರ ಕೆಲಸಗಳು ನಿಂತಿರುವುದು ಬಡತನವು ಇಡೀ ಸಮುದಾಯವನ್ನು ಹೇಗೆ ತಟ್ಟಿದೆ ಎಂಬುದನ್ನು ತೋರಿಸುತ್ತದೆ. ಕೊನೆಯಲ್ಲಿ ಪುಟ್ಟಿ ತನ್ನ ಮುಂದೆ ಕಾಣುವ ದುಃಖವನ್ನು ನೋಡಿ ವಸಂತವೂ ಹೆದರಿದೆಯೇ ಎಂದು ಮತ್ತೆ ಮತ್ತೆ ಪ್ರಶ್ನಿಸಿಕೊಳ್ಳುತ್ತಾಳೆ.
Author
ಡಾ. ವಿಜಯಶ್ರೀ ಸಬರದ