ಇಳೆಗೆ ಬಂತು ಮಳೆ

This page features a video of the poem “ಇಳೆಗೆ ಬಂತು ಮಳೆ (Ilege Bantu Male)”, prescribed under the Karnataka State Syllabus for 2nd Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಗುಡು ಗುಡು ಗುಡು ಗುಡು
ಗುಡುಗಲು ಮುಗಿಲು ।
ತಕ ತಕ ತಕ ತಕ
ಕುಣಿವುದು ನವಿಲು ॥

ಜುಳು ಜುಳು ಜುಳು ಜುಳು
ಹರಿವುದು ಹೊಳೆಯು ।
ಫಳ ಫಳ ಫಳ ಫಳ
ಹೊಳೆವುದು ಫಸಲು ॥

ಸುಳು ಸುಳು ಸುಳು ಸುಳು
ಸೂಸಲು ಗಾಳಿ ।
ಬಿರಿದಾ ಕುಸುಮಕೆ
ದುಂಬಿಯ ದಾಳಿ ॥

ಬಾನಲಿ ಮೂಡಲು
ಕಾಮನಬಿಲ್ಲು ।
ಚಿಣ್ಣರ ಲೋಕದಿ
ಹರಡಿತು ಗುಲ್ಲು ॥

ಹೆಚ್ಚಿತು ಆಗಲೆ
ಭೂಮಿಯ ಕಳೆಯು ।
ತೊಳೆಯಿತು ಒಡನೆ
ಊರಿನ ಕೊಳೆಯು ॥
Summary
ಈ ಹಾಡು ಮಳೆ ಬಂದಾಗ ಪ್ರಕೃತಿಯಲ್ಲಿ ಕಾಣಿಸುವ ಚೈತನ್ಯಮಯ
ಬದಲಾವಣೆಗಳನ್ನು ಚಿತ್ರಿಸುತ್ತದೆ. ಗುಡುಗು, ಹರಿಯುವ ಹೊಳೆ ಮತ್ತು ಬೀಸುವ ಗಾಳಿಯ ಶಬ್ದಗಳನ್ನು
ಅನುಕರಣಾತ್ಮಕ ಪದಗಳಿಂದ ಮನೋಜ್ಞವಾಗಿ ಹೇಳಲಾಗಿದೆ. ನವಿಲು ಕುಣಿಯುತ್ತದೆ, ಬೆಳೆ ಹೊಳೆಯುತ್ತದೆ, ಹೂವುಗಳು
ಅರಳುತ್ತವೆ ಮತ್ತು ದುಂಬಿಗಳು ಅವುಗಳತ್ತ ಬರುತ್ತವೆ. ಬಾನಿನಲ್ಲಿ ಕಾಮನಬಿಲ್ಲು ಮೂಡಿದಾಗ ಚಿಣ್ಣರ ಲೋಕದಲ್ಲಿ
ಸಂತೋಷ ಮತ್ತು ಸಂಭ್ರಮ ಹರಡುತ್ತದೆ. ಮಳೆಯ ನಂತರ ಭೂಮಿಯ ಸೌಂದರ್ಯ ಹೆಚ್ಚಾಗಿ ಊರಿನ ಕೊಳೆ ತೊಳೆದುಹೋಗುತ್ತದೆ
ಎಂಬ ಸುಂದರ ಚಿತ್ರಣವನ್ನು ಹಾಡು ನೀಡುತ್ತದೆ.
Author
ಕವಿ: ಪ.ಗು. ಸಿದ್ಧಾಪುರ