ಕಾಮನಬಿಲ್ಲು ಕಮಾನು ಕಟ್ಟಿದೆ

This page features a video of the poem “ಕಾಮನಬಿಲ್ಲು ಕಮಾನು ಕಟ್ಟಿದೆ (Kamanabillu Kamanu Kattide)”, prescribed under the Karnataka State Syllabus for 2nd Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಕಾಮನಬಿಲ್ಲು ಕಮಾನು ಕಟ್ಟಿದೆ
ಮೋಡದ ನಾಡಿನ ಬಾಗಿಲಿಗೆ!

ಬಣ್ಣಗಳೇಳನು ತೋರಣ ಮಾಡಿದೆ
ಕಂದನ ಕಣ್ಣಿಗೆ ಚೆಂದವನೂಡಿದೆ!

ಹಣ್ಣಿನ ಹೂವಿನ ಹೊನ್ನನು ಕೂಡಿದೆ
ಮಕ್ಕಳಿಗೋಕುಳಿಯಾಟವನೂಡಿದೆ!

ತೆಂಗಿನ ತೋಟದ ಬುಡದಲಿ ಮೂಡಿದೆ
ಭೂಮಿಗೆ ಬಾನಿಗೆ ಸೇತುವೆ ಹೂಡಿದೆ!

ಕಾಮನಬಿಲ್ಲು ಕಮಾನು ಕಟ್ಟಿದೆ
ಮೋಡದ ನಾಡಿನ ಬಾಗಿಲಿಗೆ!
Summary
ಈ ಹಾಡು ಕಾಮನಬಿಲ್ಲನ್ನು ಮೋಡಗಳ ನಾಡಿನ
ಬಾಗಿಲಲ್ಲಿ ಕಟ್ಟಿದ ಸುಂದರ ಕಮಾನು ಎಂದು ಕಲ್ಪಿಸುತ್ತದೆ. ಏಳು ಬಣ್ಣಗಳ ತೋರಣವು ಮಕ್ಕಳ ಕಣ್ಣಿಗೆ
ಚೆಲುವನ್ನು ನೀಡುತ್ತದೆ ಎಂದು ಹಾಡು ಹೇಳುತ್ತದೆ. ಹಣ್ಣು ಮತ್ತು ಹೂವಿನ ಸೌಂದರ್ಯವನ್ನೂ ಕಾಮನಬಿಲ್ಲಿನ
ಬಣ್ಣಗಳೊಂದಿಗೆ ಹೋಲಿಸಲಾಗಿದೆ. ತೆಂಗಿನ ತೋಟದ ಕೆಳಗೆ ಮೂಡುವ ಕಾಮನಬಿಲ್ಲು ಭೂಮಿ ಮತ್ತು ಬಾನಿನ ನಡುವೆ
ಸೇತುವೆಯಂತೆ ಕಾಣುತ್ತದೆ. ಪ್ರಕೃತಿಯ ಸೌಂದರ್ಯವನ್ನು ಮಕ್ಕಳ ಕಲ್ಪನೆ ಮತ್ತು ಆಟದ ಮನಸ್ಸಿನಿಂದ ಆನಂದಿಸುವ
ಭಾವನೆಯನ್ನು ಈ ಹಾಡು ಮೂಡಿಸುತ್ತದೆ.
Author
ಕವಿ: ಕುವೆಂಪು