ಮುಳುಗುದ ಸೂರ್ಯ

This page features a video of the poem “ಮುಳುಗುದ ಸೂರ್ಯ (Muluguda Surya)”, prescribed under the Karnataka State Syllabus for 3rd Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಅಂಧರ ಬಾಳಿನ ಸುಂದರ ಚಂದಿರ
ಗದುಗಿನ ಗವಾಯಿ ಗಿರಿ ಶಿಖರ
ಬೆಟ್ಟದಾಚೆ ತಾ ಬೆಳೆದು ನಿಂತನು
ಪುಟ್ಟರಾಜ ಕವಿ ಪ್ರಭಾಕರ

ಕಣ್ಣುಗಳಿದ್ದೂ ಇಲ್ಲದ ಹಾಗೆ
ಬದುಕುತ್ತಿರುವರು ಹಲವು ಜನ
ಇರದೇ ಇದ್ದರು ಇದ್ದಂತಿಹರು
ಸಾಧಕರಾಗಿ ಕೆಲವು ಜನ

ಕಟ್ಟಿ ಬೆಳೆಸಿ ತಾ ಹುಟ್ಟುಹಾಕಿದ
ಗಾನಯೋಗಿಯು ಸ್ವರಲೋಕ
ಸಾವಿರ ಸಾವಿರ ಅಂಧ ಮಕ್ಕಳಿಗೆ
ಸಜ್ಜಾಯಿತು ಈ ಭೂಲೋಕ

ಬರೆದರು ನಾಟಕ ಪುರಾಣ ಚರಿತೆ
ಅಳೆಯಲಿಕ್ಕಾಗದು ಪಾಂಡಿತ್ಯ
ಸೂಸುತ್ತಿರುವುದು ಎಲ್ಲೆಡೆ ಸೌರಭ
ಇವರದೆ ಆದ ಸಾಹಿತ್ಯ

ಹಕ್ಕಿಗಳುಲಿದವು ನಲಿದವು ಒಡನೆ
ಕಿನ್ನರಿ ನುಡಿಸಲು ತನ್ನೊಳಗೆ
ರಾಜ ರಾಜ ಕವಿ ಮಹಾರಾಜ
ಮುಳುಗದ ಸೂರ್ಯ ಧರೆಯೊಳಗೆ
Summary
ಈ ಪದ್ಯವು ಗದುಗಿನ ಪುಟ್ಟರಾಜ ಕವಿ ಗವಾಯಿಯ ಸಾಧನೆ ಮತ್ತು ಸೇವೆಯನ್ನು ಕೊಂಡಾಡುತ್ತದೆ. ಅವರು ಅಂಧರ ಬದುಕಿಗೆ ಸುಂದರ ಚಂದಿರನಂತೆ ಬೆಳಕನ್ನು ನೀಡಿದ ಮಹಾನ್ ಸಾಧಕರಾಗಿ ಚಿತ್ರಿಸಲ್ಪಟ್ಟಿದ್ದಾರೆ. ಕಣ್ಣುಗಳಿದ್ದರೂ ದಿಕ್ಕಿಲ್ಲದಂತೆ ಬದುಕುವವರಿಗಿಂತ ಕಣ್ಣುಗಳಿಲ್ಲದಿದ್ದರೂ ಸಾಧನೆ ಮಾಡುವವರ ಮಹತ್ವವನ್ನು ಕವಿ ಎತ್ತಿಹಿಡಿಯುತ್ತಾರೆ. ಪುಟ್ಟರಾಜರು ಅಂಧ ಮಕ್ಕಳನ್ನು ಬೆಳೆಸಿ ಅವರಿಗೆ ಸಂಗೀತದ ಲೋಕವನ್ನು ಪರಿಚಯಿಸಿ ಅನೇಕ ಮಕ್ಕಳ ಬದುಕಿಗೆ ಹೊಸ ದಾರಿ ತೋರಿಸಿದರು. ನಾಟಕ, ಪುರಾಣ ಮತ್ತು ಚರಿತ್ರೆಗಳನ್ನು ರಚಿಸಿ ಅಪಾರ ಪಾಂಡಿತ್ಯ ಮತ್ತು ಸಾಹಿತ್ಯದ ಸೌರಭವನ್ನು ಹರಡಿದ ಅವರನ್ನು ಮುಳುಗದ ಸೂರ್ಯನಂತೆ ಕವಿ ಗೌರವಿಸುತ್ತಾರೆ.
Author
ಕವಿ: ಪ.ಗು.ಸಿದ್ದಾಪುರ