This page features a video of the poem “ಕಡಲು (Kadalu)”, prescribed under the Karnataka State Syllabus for 2nd Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಹೋಗುವ ಬಾರ ಕಡಲಿನ ತೀರಕೆ
ಸುಂದರ ನೋಟವ ನೋಡಲಿಕೆ || ಪ ||
ತೀರದ ತುಂಬಾ ಮರಳಿನ ರಾಶಿ
ಹರಡಿದೆ ಕಪ್ಪೆಯ ಚಿಪ್ಪಿನ ರಾಶಿ
ಆಡುವ ಬಾ ಕುಣಿದಾಡುವ ಬಾ
ಕಪ್ಪೆಯ ಗೂಡನು ಕಟ್ಟುವ ಬಾ || ೧ ||
ಕಡಲಾಗಿದೆ ನೀರಿನ ಒಡಲು
ಬಾನಂಚಿನವರೆಗೂ ನೀರಿನ ಮಡಿಲು
ತೆರೆತೆರೆಯಾಗಿ ಹರಿದಿದೆ ಹೊನಲು
ಅಲೆಗಳ ಅಬ್ಬರ ತುಂಬಿದೆ ಮುಗಿಲು || ೨ ||
ಕಡಲಿನ ತುಂಬಾ ಜಲಚರ ಪ್ರಾಣಿ
ಕಡಲಿನಾಳದಲ್ಲಿ ರತ್ನದ ಗಣಿ
ಸುಂದರ ಸೊಬಗನು ನೀಡುವ ಖಣಿ
ನಿನಗೆ ನಾವು ಸದಾಋಣಿ || ೩ ||
ಸುಂದರ ನೋಟವ ನೋಡಲಿಕೆ || ಪ ||
ತೀರದ ತುಂಬಾ ಮರಳಿನ ರಾಶಿ
ಹರಡಿದೆ ಕಪ್ಪೆಯ ಚಿಪ್ಪಿನ ರಾಶಿ
ಆಡುವ ಬಾ ಕುಣಿದಾಡುವ ಬಾ
ಕಪ್ಪೆಯ ಗೂಡನು ಕಟ್ಟುವ ಬಾ || ೧ ||
ಕಡಲಾಗಿದೆ ನೀರಿನ ಒಡಲು
ಬಾನಂಚಿನವರೆಗೂ ನೀರಿನ ಮಡಿಲು
ತೆರೆತೆರೆಯಾಗಿ ಹರಿದಿದೆ ಹೊನಲು
ಅಲೆಗಳ ಅಬ್ಬರ ತುಂಬಿದೆ ಮುಗಿಲು || ೨ ||
ಕಡಲಿನ ತುಂಬಾ ಜಲಚರ ಪ್ರಾಣಿ
ಕಡಲಿನಾಳದಲ್ಲಿ ರತ್ನದ ಗಣಿ
ಸುಂದರ ಸೊಬಗನು ನೀಡುವ ಖಣಿ
ನಿನಗೆ ನಾವು ಸದಾಋಣಿ || ೩ ||
Summary
ಈ ಹಾಡು ಮಕ್ಕಳನ್ನು ಸಮುದ್ರತೀರಕ್ಕೆ ಹೋಗಿ ಅದರ ಸುಂದರ ದೃಶ್ಯವನ್ನು ಆನಂದಿಸಲು ಆಹ್ವಾನಿಸುತ್ತದೆ. ಮರಳು, ಚಿಪ್ಪುಗಳು, ಅಲೆಗಳು ಮತ್ತು ದಿಗಂತದವರೆಗೆ ಹರಡಿರುವ ವಿಶಾಲವಾದ ನೀರಿನ ವಿಸ್ತಾರವನ್ನು ಇದು ವರ್ಣಿಸುತ್ತದೆ. ಮಕ್ಕಳು ಆಟವಾಡಿ, ಕುಣಿದು, ಚಿಪ್ಪುಗಳಿಂದ ಸಣ್ಣ ಮನೆಗಳನ್ನು ಕಟ್ಟುವಂತೆ ಕರೆಯುತ್ತದೆ. ಸಮುದ್ರವು ಅನೇಕ ಜಲಚರ ಜೀವಿಗಳಿಗೆ ಆಶ್ರಯವಾಗಿದ್ದು ಅಮೂಲ್ಯ ರತ್ನಗಳ ಸಂಪತ್ತನ್ನೂ ಹೊಂದಿದೆ ಎಂದು ಹೇಳುತ್ತದೆ. ಸಮುದ್ರದ ಸೌಂದರ್ಯ ಮತ್ತು ಸಮೃದ್ಧಿಗೆ ಕೃತಜ್ಞತೆ ಹಾಗೂ ಮೆಚ್ಚುಗೆಯನ್ನು ಈ ಹಾಡು ವ್ಯಕ್ತಪಡಿಸುತ್ತದೆ.
Author
ವಾಣಿ ಸುಬ್ಬಯ್ಯ