This page features a video of the poem “ನನ್ನ ದೇವರು (Nanna Devaru)”, prescribed under the Karnataka State Syllabus for 2nd Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ನಿತ್ಯ ನಮಗೆ ಬೆಳಕು ಕೊಡುವ
ಸೂರ್ಯ ನನ್ನ ದೇವರು
ರಾತ್ರಿ ಹಾಲು ಬೆಳಕು ಕೊಡುವ
ಚಂದ್ರ ನನ್ನ ದೇವರು ॥೧॥
ಕೋಟಿ ತಾರೆ ಬೆಳ್ಳಿ ಚುಕ್ಕಿ
ಉಲ್ಕೆ ನನ್ನ ದೇವರು
ಬೆಂಕಿ ಗಾಳಿ ನೀರು ಗಗನ
ಎಲ್ಲ ನನ್ನ ದೇವರು ॥೨॥
ಹಚ್ಚ ಹಸಿರು ಹೊದ್ದು ನಿಂತ
ಭೂಮಿ ನನ್ನ ದೇವರು
ಗುಡ್ಡ - ಬೆಟ್ಟ ಕಾಡು ಮೇಡು
ಹೊಳೆಗಳೆನ್ನ ದೇವರು ॥೩॥
ಹೊಲದಿ ಬೆವರು ಸುರಿಸಿ ದುಡಿವ
ರೈತ ನನ್ನ ದೇವರು
ದೇಶಕಾಗಿ ಶ್ರಮಿಸುತಿರುವ
ಯೋಧ ನನ್ನ ದೇವರು ॥೪॥
ತಂದೆ – ತಾಯಿ ಬಂಧು ಬಳಗ-
ವೆಲ್ಲ ನನ್ನ ದೇವರು
ವಿದ್ಯೆ ಕಲಿಸಿ ಹಿತವ ನುಡಿವ
ಗುರುಗಳೆನ್ನ ದೇವರು ॥೫॥
ನನ್ನ ದೇವರಿವರು ನಿತ್ಯ
ನನಗೆ ಕಾಣುತಿರುವರು
ಶುದ್ಧ ಮನದಿ ಬೇಡಿದುದನು
ನೀಡಿ ಪೊರೆಯುತಿರುವರು ॥೬॥
ಸೂರ್ಯ ನನ್ನ ದೇವರು
ರಾತ್ರಿ ಹಾಲು ಬೆಳಕು ಕೊಡುವ
ಚಂದ್ರ ನನ್ನ ದೇವರು ॥೧॥
ಕೋಟಿ ತಾರೆ ಬೆಳ್ಳಿ ಚುಕ್ಕಿ
ಉಲ್ಕೆ ನನ್ನ ದೇವರು
ಬೆಂಕಿ ಗಾಳಿ ನೀರು ಗಗನ
ಎಲ್ಲ ನನ್ನ ದೇವರು ॥೨॥
ಹಚ್ಚ ಹಸಿರು ಹೊದ್ದು ನಿಂತ
ಭೂಮಿ ನನ್ನ ದೇವರು
ಗುಡ್ಡ - ಬೆಟ್ಟ ಕಾಡು ಮೇಡು
ಹೊಳೆಗಳೆನ್ನ ದೇವರು ॥೩॥
ಹೊಲದಿ ಬೆವರು ಸುರಿಸಿ ದುಡಿವ
ರೈತ ನನ್ನ ದೇವರು
ದೇಶಕಾಗಿ ಶ್ರಮಿಸುತಿರುವ
ಯೋಧ ನನ್ನ ದೇವರು ॥೪॥
ತಂದೆ – ತಾಯಿ ಬಂಧು ಬಳಗ-
ವೆಲ್ಲ ನನ್ನ ದೇವರು
ವಿದ್ಯೆ ಕಲಿಸಿ ಹಿತವ ನುಡಿವ
ಗುರುಗಳೆನ್ನ ದೇವರು ॥೫॥
ನನ್ನ ದೇವರಿವರು ನಿತ್ಯ
ನನಗೆ ಕಾಣುತಿರುವರು
ಶುದ್ಧ ಮನದಿ ಬೇಡಿದುದನು
ನೀಡಿ ಪೊರೆಯುತಿರುವರು ॥೬॥
Summary
ಈ ಹಾಡು ಪ್ರಕೃತಿಯ ಅನೇಕ ಅಂಶಗಳು ಮತ್ತು ಜನರನ್ನು ದೇವರಂತೆ ಗೌರವಿಸುವ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಸೂರ್ಯ, ಚಂದ್ರ, ನಕ್ಷತ್ರಗಳು, ಬೆಂಕಿ, ಗಾಳಿ, ನೀರು, ಆಕಾಶ, ಭೂಮಿ, ಬೆಟ್ಟಗಳು, ಕಾಡುಗಳು, ನದಿಗಳು, ರೈತರು ಮತ್ತು ಸೈನಿಕರನ್ನು ಇದು ಗೌರವಿಸುತ್ತದೆ. ತಂದೆತಾಯಿ, ಬಂಧುಬಳಗ ಮತ್ತು ಮಕ್ಕಳಿಗೆ ಮಾರ್ಗದರ್ಶನ ನೀಡುವ ಗುರುಗಳನ್ನೂ ದೇವರಂತೆ ಕಾಣುತ್ತದೆ. ಪ್ರಕೃತಿಯಲ್ಲಿಯೂ ಇತರರಿಗೆ ಸೇವೆ ಮಾಡುವ ಜನರಲ್ಲಿಯೂ ದೈವತ್ವವನ್ನು ಕಾಣಬಹುದು ಎಂಬುದನ್ನು ಹಾಡು ಕಲಿಸುತ್ತದೆ. ಕೃತಜ್ಞತೆ, ಗೌರವ ಮತ್ತು ಶುದ್ಧ ಮನಸ್ಸಿನಿಂದ ಬದುಕಲು ಇದು ಪ್ರೇರೇಪಿಸುತ್ತದೆ.
Author
ನೆಂಪು ನರಸಿಂಹಭಟ್ಟ