ತಾಯಿ

This page features a video of the poem “ತಾಯಿ (Tayi)”, prescribed under the Karnataka State Syllabus for 2nd Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ತಾಯಿ ತಾನು ಮಗುವ ಹಡೆದು
ಜಗವ ಮರೆತಳು
ಮಗುವ ತನ್ನ ಇಡಿಯ ಜಗವು
ಎಂದು ಬಗೆದಳು

ಮಗುವು ದಿನವು ಆಡಿ ಬರಲು
ಹೆಮ್ಮೆ ಪಡುವಳು
ಮಗುವು ಬೇಗ ಬಾರದಿರಲು
ಕೂಗಿ ಕರೆವಳು

ತನ್ನ ನೂರು ಕಷ್ಟ ಸಹಿಸಿ
ಮಗುವ ಪೊರೆವಳು
ಹಲವು ಕೆಲಸ ಇರಲು ಬಿಟ್ಟು
ತಿಂಡಿ ಕೊಡುವಳು

ಮಗುವು ತನ್ನ ಕರುಳ ಕುಡಿಯು
ಎಂದು ಬಗೆವಳು
ಮಗುವಿನೊಡನೆ ದಿನದ ಕೆಲಸ
ಮಾಡಿ ಬಿಡುವಳು

ಮಗುವು ಅಳಲು ನೊಂದು ತಾನು
ಮನದಿ ಕನಲುವಳು
ತನ್ನ ಮಗುವ ನೋಡಿ
ಎಲ್ಲ ಮರೆವಳು

ಮಗುವೆ ನಾಳೆ ನಾಡ ಪ್ರಜೆಯು
ಎಂದು ನೆನೆವಳು
ಜಗಕೆ ಮಗುವ ಕೊಟ್ಟು ತಾನು
ತಾಯಿ ಆದಳು
Summary
ಈ ಹಾಡು ಮಗುವಿನ ಮೇಲಿನ ತಾಯಿಯ ಆಳವಾದ ಪ್ರೀತಿ ಮತ್ತು ತ್ಯಾಗವನ್ನು ವರ್ಣಿಸುತ್ತದೆ. ಮಗುವಿಗೆ ಜನ್ಮ ನೀಡಿದ ನಂತರ ತಾಯಿ ಮಗುವನ್ನೇ ತನ್ನ ಇಡೀ ಜಗತ್ತು ಎಂದು ಭಾವಿಸಿ ಅದರ ದೈನಂದಿನ ಚಟುವಟಿಕೆಗಳಲ್ಲಿ ಹೆಮ್ಮೆಪಡುತ್ತಾಳೆ. ಅನೇಕ ಕಷ್ಟಗಳನ್ನು ಸಹಿಸಿಕೊಂಡು ಅಗತ್ಯವಿದ್ದಾಗ ಇತರ ಕೆಲಸಗಳನ್ನು ಬಿಟ್ಟು ಮಗುವಿಗೆ ಪ್ರೀತಿಯಿಂದ ಊಟ-ತಿಂಡಿ ನೀಡಿ ಆರೈಕೆ ಮಾಡುತ್ತಾಳೆ. ಮಗುವಿನ ಸಂತೋಷ ಮತ್ತು ದುಃಖಗಳು ತಾಯಿಯ ಮನಸ್ಸಿನ ಮೇಲೆ ಆಳವಾದ ಪರಿಣಾಮ ಬೀರುತ್ತವೆ ಮತ್ತು ಮಗುವನ್ನು ನೋಡಿದಾಗ ತನ್ನ ಚಿಂತೆಗಳನ್ನೆಲ್ಲ ಮರೆತುಬಿಡುತ್ತಾಳೆ. ಈ ಹಾಡು ಮಾತೃತ್ವವನ್ನು ಕೊಂಡಾಡುತ್ತಾ ಮಗು ಮುಂದೆ ದೇಶದ ಜವಾಬ್ದಾರಿಯುತ ನಾಗರಿಕನಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸುತ್ತದೆ.
Author
ಕವಿ: ಎ.ಕೆ. ರಾಮೇಶ್ವರ