ಅಕ್ಟೋಬರ್ ಎರಡು

This page features a video of the poem “ಅಕ್ಟೋಬರ್ ಎರಡು (Aktobar Eradu)”, prescribed under the Karnataka State Syllabus for 3rd Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಅಕ್ಟೋಬರಿನ ಎರಡನೇ ದಿನವು
ಗಾಂಧಿ ಜಯಂತಿಯು ಅಂದು
ಬನ್ನಿರಿ ಎಲ್ಲರು ಕೂಡಿ ಹಾಡುವಾ
ಅವರನು ನೆನಪಿಗೆ ತಂದು

ಅಕ್ಟೋಬರಿನ ಎರಡನೇ ದಿನವು
ಗಾಂಧಿ ಜಯಂತಿಯು ಅಂದು
ಬನ್ನಿರಿ ಎಲ್ಲರು ಕೂಡಿ ಹಾಡುವಾ
ಅವರನು ನೆನಪಿಗೆ ತಂದು

ಸಣಕಲು ದೇಹದ, ಗಾಂಧೀಜಿಗೆ
ಸತ್ಯ - ಅಹಿಂಸೆಯೆ ಆಧಾರ
ಇವುಗಳ ಎದುರು ನಡೆಯದಾಯಿತು
ಆಂಗ್ಲರ ಆಳಿಕೆ ದರಬಾರ

ಸಣಕಲು ದೇಹದ, ಗಾಂಧೀಜಿಗೆ
ಸತ್ಯ - ಅಹಿಂಸೆಯೆ ಆಧಾರ
ಇವುಗಳ ಎದುರು ನಡೆಯದಾಯಿತು
ಆಂಗ್ಲರ ಆಳಿಕೆ ದರಬಾರ

ಅನೀತಿ ದಾರಿ ತುಳಿಯಲೇ ಇಲ್ಲ
ನುಡಿಯಲೆ ಇಲ್ಲ ಹುಸಿಯನ್ನು
ಪ್ರಾಣ ಹೋದರೂ ಲೆಕ್ಕಿಸಲಿಲ್ಲ
ಬಾಗಲೇ ಇಲ್ಲ ತಲೆಯನ್ನು

ಅನೀತಿ ದಾರಿ ತುಳಿಯಲೇ ಇಲ್ಲ
ನುಡಿಯಲೆ ಇಲ್ಲ ಹುಸಿಯನ್ನು
ಪ್ರಾಣ ಹೋದರೂ ಲೆಕ್ಕಿಸಲಿಲ್ಲ
ಬಾಗಲೇ ಇಲ್ಲ ತಲೆಯನ್ನು

ಶ್ರಮದ ಪಾಠವ ದೇಶಕ್ಕೆ ಕಲಿಸಿ
ಒಳ್ಳೆಯ ದಾರಿ ತೋರಿದರು
ಉಚ್ಚ - ನೀಚ ಭಾವವ ಅಳಿಸಿ
ಮಧುರ ಪ್ರೀತಿಯ ಬೀರಿದರು

ಶ್ರಮದ ಪಾಠವ ದೇಶಕ್ಕೆ ಕಲಿಸಿ
ಒಳ್ಳೆಯ ದಾರಿ ತೋರಿದರು
ಉಚ್ಚ - ನೀಚ ಭಾವವ ಅಳಿಸಿ
ಮಧುರ ಪ್ರೀತಿಯ ಬೀರಿದರು
Summary
ಈ ಗೀತೆಯು ಅಕ್ಟೋಬರ್ ಎರಡನೇ ದಿನ ಆಚರಿಸುವ ಗಾಂಧಿ ಜಯಂತಿಯ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯನ್ನು ನೆನಪಿಸಿಕೊಳ್ಳುತ್ತದೆ. ಗಾಂಧೀಜಿಯ ಜೀವನಕ್ಕೆ ಸತ್ಯ ಮತ್ತು ಅಹಿಂಸೆಯೇ ಮುಖ್ಯ ಆಧಾರವಾಗಿದ್ದವು ಎಂದು ಗೀತೆ ತಿಳಿಸುತ್ತದೆ. ಅವರು ಅನೀತಿಯ ದಾರಿಯಲ್ಲಿ ನಡೆಯದೆ ಸುಳ್ಳನ್ನು ಹೇಳದೆ ತಮ್ಮ ತತ್ವಗಳಿಗೆ ದೃಢವಾಗಿ ನಿಂತರು. ಪ್ರಾಣದ ಭಯವನ್ನೂ ಲೆಕ್ಕಿಸದೆ ಅವರು ಅನ್ಯಾಯದ ಮುಂದೆ ತಲೆಬಾಗಲಿಲ್ಲ. ದೇಶಕ್ಕೆ ಶ್ರಮದ ಪಾಠ ಕಲಿಸಿ, ಒಳ್ಳೆಯ ದಾರಿ ತೋರಿಸಿ, ಉಚ್ಚ-ನೀಚ ಭಾವನೆಗಳನ್ನು ಅಳಿಸಿ ಪ್ರೀತಿಯನ್ನು ಹರಡಿದ ಅವರ ಸೇವೆಯನ್ನು ಗೀತೆ ಕೊಂಡಾಡುತ್ತದೆ.
Author
ಕವಿ: ಗುರುರಾಜ ಬೆಣಕಲ್‌