This page features a video of the poem “ಮಸಾಲೆ ದೋಸೆ (Masale Dose)”, prescribed under the Karnataka State Syllabus for 3rd Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ದೋಸೆ ದೋಸೆ ಮಸಾಲೆ ದೋಸೆ
ಹೆಂಚಿನ ಮೇಲೆ ಚುಂಯ್ ಚುಂಯ್ ದೋಸೆ
ಅಮ್ಮನು ಹುಯ್ಯುವ ಹೂವಿನ ದೋಸೆ
ಅಚ್ಚುಮೆಚ್ಚಿನ ತುಪ್ಪದ ದೋಸೆ
ದೋಸೆ ದೋಸೆ ಮಸಾಲೆ ದೋಸೆ
ಹೆಂಚಿನ ಮೇಲೆ ಚುಂಯ್ ಚುಂಯ್ ದೋಸೆ
ಅಮ್ಮನು ಹುಯ್ಯುವ ಹೂವಿನ ದೋಸೆ
ಅಚ್ಚುಮೆಚ್ಚಿನ ತುಪ್ಪದ ದೋಸೆ
ಹಿಟ್ಟನು ಸೌಟಲಿ ಸರ್ರನೆ ಹುಯ್ಯಲು
ಕರ್ರನೆ ಹೆಂಚಲಿ ಬೆಳ್ಳಿಯ ದೋಸೆ
ಕಂಡರೆ ಕುಣಿವುದು ಅಪ್ಪನ ಮೀಸೆ
ತಂಗಿಗು ನನಗು ಬಲು ಆಸೆ
ಹಿಟ್ಟನು ಸೌಟಲಿ ಸರ್ರನೆ ಹುಯ್ಯಲು
ಕರ್ರನೆ ಹೆಂಚಲಿ ಬೆಳ್ಳಿಯ ದೋಸೆ
ಕಂಡರೆ ಕುಣಿವುದು ಅಪ್ಪನ ಮೀಸೆ
ತಂಗಿಗು ನನಗು ಬಲು ಆಸೆ
ಮಿರುಗುವ ಬಿಸಿಬಿಸಿ ಪಲ್ಯದ ದೋಸೆ
ಮೇಲೊಂದಿಷ್ಟು ಬೆಣ್ಣೆಯ ಪೂಸೆ
ಘಮಘಮ ಪರಿಮಳ ಸೂಸುವ ದೋಸೆ
ಮೆಲ್ಲನೆ ಮೆಲ್ಲುವ ದುಂಡನೆ ದೋಸೆ
ಮಿರುಗುವ ಬಿಸಿಬಿಸಿ ಪಲ್ಯದ ದೋಸೆ
ಮೇಲೊಂದಿಷ್ಟು ಬೆಣ್ಣೆಯ ಪೂಸೆ
ಘಮಘಮ ಪರಿಮಳ ಸೂಸುವ ದೋಸೆ
ಮೆಲ್ಲನೆ ಮೆಲ್ಲುವ ದುಂಡನೆ ದೋಸೆ
ಇಷ್ಟ ಪಟ್ಟು ಎಷ್ಟೇ ತಿಂದರು
ಇಷ್ಟ ತೀರದ ಪುಷ್ಟಿಯ ದೋಸೆ
ಹೊಟ್ಟೆ ಮೀರಿ ಬಕಬಕ ತಿಂದರೆ
ಅರಗದೆ ಕರಗದೆ ಕಾಡುವ ದೋಸೆ
ಇಷ್ಟ ಪಟ್ಟು ಎಷ್ಟೇ ತಿಂದರು
ಇಷ್ಟ ತೀರದ ಪುಷ್ಟಿಯ ದೋಸೆ
ಹೊಟ್ಟೆ ಮೀರಿ ಬಕಬಕ ತಿಂದರೆ
ಅರಗದೆ ಕರಗದೆ ಕಾಡುವ ದೋಸೆ
ಹೆಂಚಿನ ಮೇಲೆ ಚುಂಯ್ ಚುಂಯ್ ದೋಸೆ
ಅಮ್ಮನು ಹುಯ್ಯುವ ಹೂವಿನ ದೋಸೆ
ಅಚ್ಚುಮೆಚ್ಚಿನ ತುಪ್ಪದ ದೋಸೆ
ದೋಸೆ ದೋಸೆ ಮಸಾಲೆ ದೋಸೆ
ಹೆಂಚಿನ ಮೇಲೆ ಚುಂಯ್ ಚುಂಯ್ ದೋಸೆ
ಅಮ್ಮನು ಹುಯ್ಯುವ ಹೂವಿನ ದೋಸೆ
ಅಚ್ಚುಮೆಚ್ಚಿನ ತುಪ್ಪದ ದೋಸೆ
ಹಿಟ್ಟನು ಸೌಟಲಿ ಸರ್ರನೆ ಹುಯ್ಯಲು
ಕರ್ರನೆ ಹೆಂಚಲಿ ಬೆಳ್ಳಿಯ ದೋಸೆ
ಕಂಡರೆ ಕುಣಿವುದು ಅಪ್ಪನ ಮೀಸೆ
ತಂಗಿಗು ನನಗು ಬಲು ಆಸೆ
ಹಿಟ್ಟನು ಸೌಟಲಿ ಸರ್ರನೆ ಹುಯ್ಯಲು
ಕರ್ರನೆ ಹೆಂಚಲಿ ಬೆಳ್ಳಿಯ ದೋಸೆ
ಕಂಡರೆ ಕುಣಿವುದು ಅಪ್ಪನ ಮೀಸೆ
ತಂಗಿಗು ನನಗು ಬಲು ಆಸೆ
ಮಿರುಗುವ ಬಿಸಿಬಿಸಿ ಪಲ್ಯದ ದೋಸೆ
ಮೇಲೊಂದಿಷ್ಟು ಬೆಣ್ಣೆಯ ಪೂಸೆ
ಘಮಘಮ ಪರಿಮಳ ಸೂಸುವ ದೋಸೆ
ಮೆಲ್ಲನೆ ಮೆಲ್ಲುವ ದುಂಡನೆ ದೋಸೆ
ಮಿರುಗುವ ಬಿಸಿಬಿಸಿ ಪಲ್ಯದ ದೋಸೆ
ಮೇಲೊಂದಿಷ್ಟು ಬೆಣ್ಣೆಯ ಪೂಸೆ
ಘಮಘಮ ಪರಿಮಳ ಸೂಸುವ ದೋಸೆ
ಮೆಲ್ಲನೆ ಮೆಲ್ಲುವ ದುಂಡನೆ ದೋಸೆ
ಇಷ್ಟ ಪಟ್ಟು ಎಷ್ಟೇ ತಿಂದರು
ಇಷ್ಟ ತೀರದ ಪುಷ್ಟಿಯ ದೋಸೆ
ಹೊಟ್ಟೆ ಮೀರಿ ಬಕಬಕ ತಿಂದರೆ
ಅರಗದೆ ಕರಗದೆ ಕಾಡುವ ದೋಸೆ
ಇಷ್ಟ ಪಟ್ಟು ಎಷ್ಟೇ ತಿಂದರು
ಇಷ್ಟ ತೀರದ ಪುಷ್ಟಿಯ ದೋಸೆ
ಹೊಟ್ಟೆ ಮೀರಿ ಬಕಬಕ ತಿಂದರೆ
ಅರಗದೆ ಕರಗದೆ ಕಾಡುವ ದೋಸೆ
Summary
ಈ ಪದ್ಯವು ಮಸಾಲೆ ದೋಸೆಯ ರುಚಿ, ಸುವಾಸನೆ ಮತ್ತು ಅದರ ಮೇಲಿನ ಮಕ್ಕಳ ಆಸೆಯನ್ನು ಉಲ್ಲಾಸದಿಂದ ವರ್ಣಿಸುತ್ತದೆ. ಅಮ್ಮನು ಹೆಂಚಿನ ಮೇಲೆ ಬಿಸಿ ಬಿಸಿ ದೋಸೆ ಹುಯ್ಯುವಾಗ ಅದು ಚುಂಯ್ ಚುಂಯ್ ಎಂದು ಸದ್ದು ಮಾಡುತ್ತದೆ. ದೋಸೆಯ ಮೇಲೆ ಬೆಣ್ಣೆ, ಪಲ್ಯ ಮತ್ತು ತುಪ್ಪ ಇರುವುದರಿಂದ ಅದರ ಪರಿಮಳ ಎಲ್ಲೆಡೆ ಹರಡುತ್ತದೆ. ಅಪ್ಪನಿಗೂ ಮಕ್ಕಳು ಮತ್ತು ತಂಗಿಗೂ ದೋಸೆ ತಿನ್ನುವ ಆಸೆ ತುಂಬಾ ಇರುತ್ತದೆ. ಆದರೆ ಮಿತಿಮೀರಿಸಿ ತಿಂದರೆ ಜೀರ್ಣವಾಗದೆ ತೊಂದರೆ ಉಂಟಾಗುತ್ತದೆ ಎಂದು ಪದ್ಯವು ಕೊನೆಯಲ್ಲಿ ಎಚ್ಚರಿಸುತ್ತದೆ.
Author
ಟಿ.ಎಸ್. ನಾಗರಾಜ ಶೆಟ್ಟಿ