This page features a video of the poem “ಕನ್ನಡ ನುಡಿ (Kannada Nudi)”, prescribed under the Karnataka State Syllabus for 5th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಮಕ್ಕಳೆ ಬನ್ನಿರಿ ಮಾತೊಂದು ಹೇಳುವೆ
ಚಿತ್ತವನಿಟ್ಟು ಆಲಿಸಿರಿ ॥ ಪ ॥
ಕನ್ನಡ ನುಡಿಯಲಿ ಕನ್ನಡ ಗುಡಿಯಲಿ
ಹೃದಯದ ಒಲುಮೆಯು ತುಂಬಿಹುದು
ಹಾಲಿನ ತೊರೆಯು ಸಕ್ಕರೆ ಮಳಲು
ಜೇನಿನ ಹನಿಯು ಅಲ್ಲಿಹುದು
ಪುಣ್ಯಕೋಟಿಯ ಬದುಕಿನ ಚರಿತೆಯು
ಜನಪದದಲ್ಲಿ ಮೂಡಿಹುದು
ಸಂಚಿಹೊನ್ನಮ್ಮನ ಹದಿಬದೆಧರ್ಮವು
ಥಳಥಳ ಅದರಲಿ ಹೊಳೆಯುವುದು
ಶರಣರು ರಚಿಸಿದ ವಚನಗಳೆಲ್ಲವು
ಬದುಕಿನ ಅಮೃತ ಕಣಜಗಳು
ದಾಸರ ನುಡಿಯಲಿ ಅರಳಿದ ಚೆಲುವು
ಕನ್ನಡದೊಲುಮೆಯ ಹವಳಗಳು
ಬನ್ನಿರಿ ಮಕ್ಕಳೆ ಕನ್ನಡ ಕಲಿಯಿರಿ
ಬದುಕಿನ ತಿರುಳನು ಅರಿಯುತ್ತ
ನಮ್ಮಯ ನಾಡಿನ ಪುಣ್ಯದ ಬೀಡಿನ
ನನ್ನಿಯ ಕಥೆಯನು ಬರೆಯುತ್ತ.
ಮಕ್ಕಳೆ ಬನ್ನಿರಿ ಮಾತೊಂದು ಹೇಳುವೆ
ಚಿತ್ತವನಿಟ್ಟು ಆಲಿಸಿರಿ
ಚಿತ್ತವನಿಟ್ಟು ಆಲಿಸಿರಿ ॥ ಪ ॥
ಕನ್ನಡ ನುಡಿಯಲಿ ಕನ್ನಡ ಗುಡಿಯಲಿ
ಹೃದಯದ ಒಲುಮೆಯು ತುಂಬಿಹುದು
ಹಾಲಿನ ತೊರೆಯು ಸಕ್ಕರೆ ಮಳಲು
ಜೇನಿನ ಹನಿಯು ಅಲ್ಲಿಹುದು
ಪುಣ್ಯಕೋಟಿಯ ಬದುಕಿನ ಚರಿತೆಯು
ಜನಪದದಲ್ಲಿ ಮೂಡಿಹುದು
ಸಂಚಿಹೊನ್ನಮ್ಮನ ಹದಿಬದೆಧರ್ಮವು
ಥಳಥಳ ಅದರಲಿ ಹೊಳೆಯುವುದು
ಶರಣರು ರಚಿಸಿದ ವಚನಗಳೆಲ್ಲವು
ಬದುಕಿನ ಅಮೃತ ಕಣಜಗಳು
ದಾಸರ ನುಡಿಯಲಿ ಅರಳಿದ ಚೆಲುವು
ಕನ್ನಡದೊಲುಮೆಯ ಹವಳಗಳು
ಬನ್ನಿರಿ ಮಕ್ಕಳೆ ಕನ್ನಡ ಕಲಿಯಿರಿ
ಬದುಕಿನ ತಿರುಳನು ಅರಿಯುತ್ತ
ನಮ್ಮಯ ನಾಡಿನ ಪುಣ್ಯದ ಬೀಡಿನ
ನನ್ನಿಯ ಕಥೆಯನು ಬರೆಯುತ್ತ.
ಮಕ್ಕಳೆ ಬನ್ನಿರಿ ಮಾತೊಂದು ಹೇಳುವೆ
ಚಿತ್ತವನಿಟ್ಟು ಆಲಿಸಿರಿ
Summary
ಈ ಗೀತೆಯು ಮಕ್ಕಳಿಗೆ ಕನ್ನಡ ಭಾಷೆಯ ಸೌಂದರ್ಯ ಮತ್ತು ಅದರಲ್ಲಿರುವ ಜ್ಞಾನವನ್ನು ಪರಿಚಯಿಸುತ್ತದೆ. ಕನ್ನಡ ನುಡಿಯು ಜೇನು ಮತ್ತು ಹಾಲಿನಂತೆ ಸಿಹಿಯಾಗಿದ್ದು, ಕನ್ನಡದ ನಾಡು ಮತ್ತು ಸಂಸ್ಕೃತಿಯ ಮೇಲೆ ಹೃದಯದ ಒಲುಮೆ ತುಂಬಿದೆ ಎಂದು ಹೇಳುತ್ತದೆ. ಪುಣ್ಯಕೋಟಿಯ ಕಥೆ ಮತ್ತು ಸಂಚಿಹೊನ್ನಮ್ಮನ ಧರ್ಮದಂತಹ ಜನಪದ ಪರಂಪರೆಗಳ ಮಹತ್ವವನ್ನು ಗೀತೆ ನೆನಪಿಸುತ್ತದೆ. ಶರಣರ ವಚನಗಳು ಬದುಕಿನ ಅಮೃತ ಕಣಜಗಳಾಗಿದ್ದು, ದಾಸರ ನುಡಿಗಳು ಕನ್ನಡದ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂದು ಕವಿ ಹೇಳುತ್ತಾರೆ. ಆದ್ದರಿಂದ ಮಕ್ಕಳು ಕನ್ನಡ ಕಲಿತು ಅದರಲ್ಲಿರುವ ಬದುಕಿನ ತಿರುಳನ್ನು ಅರಿತು, ತಮ್ಮ ನಾಡಿನ ಕಥೆಗಳನ್ನು ಬರೆಯಬೇಕು ಎಂಬ ಸಂದೇಶವನ್ನು ಗೀತೆ ನೀಡುತ್ತದೆ.
Author
ಎ. ಕೆ. ರಾಮೇಶ್ವರ