ಸಂತಮ್ಮಣ್ಣ

This page features a video of the poem “ಸಂತಮ್ಮಣ್ಣ (Santammanna)”, prescribed under the Karnataka State Syllabus for 5th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಕಲ್ಯಾಣ ಸೇವೆ ಜೇಬಿನ ಬುಡದಲಿ,
ಪುಟ್ಟಾಣಿಯ ಪುರಿ ಮೇಲೊಂದಿಷ್ಟು,
ಗೋಲಿ ಬಳಪ ಮತ್ತೊಂದಿಷ್ಟು,
ಬಂದ, ಬಂದ, ಸಣ್ಣ ತಮ್ಮಣ್ಣ.

ಪಠಾಸು ಪೆಟ್ಟು ಒಳಜೇಬಲ್ಲಿ,
ಕಾಸಿನ ಸಾಲು ಕಳ್ಳ ಜೇಬಲ್ಲಿ,
ಚೆಂಡು ದಾಂಡು ಎಡಬಲದಲ್ಲಿ,
ಬಂದ, ಬಂದ, ಸಂತಮ್ಮಣ್ಣ.

ಅಮ್ಮನ ಹಾರ ಉಬ್ಬಿದ ಎದೆಗೆ,
ಬಿದಿರಿನ ಕೊಳಲು ಗೆಜ್ಜೆಯೊಳಗೆ
ಹದ್ದಿನ ರೆಕ್ಕೆ ಎತ್ತಿದ ತಲೆಗೆ,
ಬಂದ, ಬಂದ, ಸಂತಮ್ಮಣ್ಣ.

ಕತ್ತುರಿ ಚಂದ್ರ ಹಣೆಯಲ್ಲಿಹುದು,
ಸಂಜೆಯ ಶುಕ್ರ ಕಣ್ಣಲ್ಲಿಹುದು,
ಬೆಳುಬೆಳ್ದಿಂಗಳು ಗಲ್ಲದ ಮೇಲೆ,
ಬಂದ, ಬಂದ, ಸಂತಮ್ಮಣ್ಣ.

ಮೊದಲನೆ ಮಾತು ಹೂವಿನ ಮುತ್ತು,
ಮರು ಮಾತಾಡಲು ಸಿಡಿಲು ಗುಡುಗು,
ಮೂರನೆ ಬಾರಿಗೆ ಆನೆಯ ಕಲ್ಮಳೆ,
ಬಂದ, ಬಂದ, ಸಂತಮ್ಮಣ್ಣ.

ಬಾರೋ, ಬಾರೋ, ಸಿಡಿಲಿನ ಮರಿಯೆ!
ಬಾರೋ, ನಾಡಿನ ಸುಂಟರಗಾಳಿ!
ತೋರೋ ಸಿರಿಮೊಗ, ತುಂಟರ ಗುರುವೆ !
ಬಂದ, ಬಂದ, ಸಂತಮ್ಮಣ್ಣ.
Summary
ಈ ಪದ್ಯವು ಸಂತಮ್ಮಣ್ಣ ಎಂಬ ತುಂಟ ಮತ್ತು ಚುರುಕು ಹುಡುಗನ ರೂಪವನ್ನು ಹಾಸ್ಯಮಯವಾಗಿ ಚಿತ್ರಿಸುತ್ತದೆ. ಅವನ ಜೇಬುಗಳಲ್ಲಿ ಆಟಿಕೆಗಳು, ಹಣ, ಪಟಾಕಿಗಳು ಮತ್ತು ಇನ್ನಿತರ ವಸ್ತುಗಳು ತುಂಬಿರುವಂತೆ ವಿವರಿಸಲಾಗಿದೆ. ಅವನ ಎದೆ, ತಲೆ ಮತ್ತು ಮುಖದ ಸೌಂದರ್ಯವನ್ನು ವಿವಿಧ ಕಲ್ಪನಾತ್ಮಕ ಉಪಮಾನಗಳಿಂದ ವರ್ಣಿಸಲಾಗಿದೆ. ಅವನ ಮೊದಲ ಮಾತು ಹೂವಿನ ಮುತ್ತಿನಂತೆ ಮಧುರವಾಗಿದ್ದರೂ, ಎರಡನೇ ಮಾತು ಸಿಡಿಲು-ಗುಡುಗಿನಂತೆ ತೀವ್ರವಾಗಿರುತ್ತದೆ. ಅವನ ತುಂಟತನ ಮತ್ತು ಚುರುಕುತನವನ್ನು ಸಿಡಿಲಿನ ಮರಿಯೆ ಹಾಗೂ ನಾಡಿನ ಸುಂಟರಗಾಳಿ ಎಂದು ಕರೆದಿರುವುದು ಅವನ ವ್ಯಕ್ತಿತ್ವವನ್ನು ಉಲ್ಲಾಸಭರಿತವಾಗಿ ತೋರಿಸುತ್ತದೆ.
Author
ಕವಿ: ಹೊಯಿಸಳ