This page features a video of the poem “ನವಿಲು (Navilu)”, prescribed under the Karnataka State Syllabus for 5th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ನವಿಲೆ ನವಿಲೆ
ನೀಲಿಯ ನವಿಲೆ
ಕಣ್ಣನು ಎಣಿಸುವೆ ಬಾ ಇಲ್ಲಿ
ಸಾವಿರ ಕಂಗಳ
ಹೊಳಪನು ತೋರುತ
ಓಡುವೆ ಏಕೆ ನೀ ಅಲ್ಲಿ
ನಿನ್ನಯ ಕೊರಳಿನ
ಬಣ್ಣವ ತುಂಬಿದೆ
ಸುಂದರ ನೀಲಿಯ ಬೆಳಕನ್ನು
ನಿನ್ನನು ಮಾಡಿದ
ಕೈಗಳ ಚೆಲುವು
ಎಲ್ಲಿ ಅಡಗಿದೆ ಹೇಳಿನ್ನು
ಅತ್ತಲು ಇತ್ತಲು
ಕತ್ತನು ತಿರುಗಿಸಿ
ಕರೆಯುವೆ ಯಾರನು ಆಟಕ್ಕೆ
ಹಾಲಿನ ಜೊತೆಯಲಿ
ಹಣ್ಣನು ನೀಡುವೆ
ಮರೆಯದೇ ಬಾ ನೀ ಊಟಕ್ಕೆ
ನೀಲಿಯ ನವಿಲೆ
ಕಣ್ಣನು ಎಣಿಸುವೆ ಬಾ ಇಲ್ಲಿ
ಸಾವಿರ ಕಂಗಳ
ಹೊಳಪನು ತೋರುತ
ಓಡುವೆ ಏಕೆ ನೀ ಅಲ್ಲಿ
ನಿನ್ನಯ ಕೊರಳಿನ
ಬಣ್ಣವ ತುಂಬಿದೆ
ಸುಂದರ ನೀಲಿಯ ಬೆಳಕನ್ನು
ನಿನ್ನನು ಮಾಡಿದ
ಕೈಗಳ ಚೆಲುವು
ಎಲ್ಲಿ ಅಡಗಿದೆ ಹೇಳಿನ್ನು
ಅತ್ತಲು ಇತ್ತಲು
ಕತ್ತನು ತಿರುಗಿಸಿ
ಕರೆಯುವೆ ಯಾರನು ಆಟಕ್ಕೆ
ಹಾಲಿನ ಜೊತೆಯಲಿ
ಹಣ್ಣನು ನೀಡುವೆ
ಮರೆಯದೇ ಬಾ ನೀ ಊಟಕ್ಕೆ
Summary
ಈ ಪದ್ಯದಲ್ಲಿ ಕವಿ ಸುಂದರವಾದ ನವಿಲನ್ನು ಹತ್ತಿರಕ್ಕೆ ಬರಲು ಪ್ರೀತಿಯಿಂದ ಕರೆಯುತ್ತಾರೆ. ನವಿಲಿನ ನೀಲಿ ಬಣ್ಣದ ಕಂಠ, ಹೊಳಪು ಮತ್ತು ಅದರ ಸೌಂದರ್ಯವನ್ನು ಕವಿ ಆಶ್ಚರ್ಯದಿಂದ ನೋಡುತ್ತಾರೆ. ನವಿಲನ್ನು ಮಾಡಿದ ಕೈಗಳ ಚೆಲುವು ಎಲ್ಲಿದೆ ಎಂದು ಕೇಳುವ ಮೂಲಕ ಅದರ ಸೃಷ್ಟಿಯ ಅದ್ಭುತತೆಯನ್ನು ವ್ಯಕ್ತಪಡಿಸುತ್ತಾರೆ. ಅದು ಓಡಿ ದೂರ ಹೋಗದೆ ತಮ್ಮ ಜೊತೆ ಆಟವಾಡಲು ಬರಲಿ ಎಂದು ಕವಿ ಆಹ್ವಾನಿಸುತ್ತಾರೆ. ಹಾಲು ಮತ್ತು ಹಣ್ಣು ಕೊಟ್ಟು ಊಟಕ್ಕೆ ಬರಲು ಕರೆಯುವ ಈ ಪದ್ಯವು ಮಕ್ಕಳಲ್ಲಿ ಪಕ್ಷಿಗಳ ಮೇಲಿನ ಮಮತೆ ಮತ್ತು ಪ್ರಕೃತಿಯ ಸೌಂದರ್ಯದ ಆಸಕ್ತಿಯನ್ನು ಬೆಳೆಸುತ್ತದೆ.
Author
ಅಯ್ಯಪ್ಪಯ್ಯ ಹುಡಾ