ಅಭಿಮನ್ಯು ಪರಾಕ್ರಮ

This page features a video of the poem “ಅಭಿಮನ್ಯು ಪರಾಕ್ರಮ (Abhimanyu Parakrama)”, prescribed under the Karnataka State Syllabus for 7th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಜನಪನಂಘ್ರಿಗೆ ಮಣಿದು ಕೈ ಮುಗಿ
ದೆನಗೆ ಬೆಸಸೈ ಬೊಪ್ಪ ತಾ ಬ
ಲ್ಲೆನು ಮಹಾಹವದೊಳಗೆ ಪದ್ಮವ್ಯೂಹ ಭೇದನವ
ಅನುವರವ ಗೆಲುವೆನು ಕೃತಾಂತನ
ಮನೆಗೆ ಕಳುಹುವೆನಹಿತರನು ನೀ
ನಿನಿತು ಚಿಂತಿಸಲೇಕೆ ಕಾಳಗಕೆನ್ನ ಕಳುಹೆಂದ

ಹಸುಳೆಯದಟಿನ ನುಡಿಯಕೇಳಿದು
ನಸುನಗುತ ಧರ್ಮಜನು ಘನ ಪೌ
ರುಷವು ನಿನಗುಂಟೆಂದು ಕಂದನ ತೆಗೆದು ಬಿಗಿಯಪ್ಪಿ
ಶಿಶುವು ನೀನೆಲೆ ಮಗನೆ ಕಾದುವ
ರಸಮಬಲರು ಕಣಾ ಮಹಾರಥ
ರೆÀಸುಗೆಯನು ನೀನೆಂತು ಸೈರಿಸಲಾಪೆ ಹೇಳೆಂದ

ಬಿಡು ಮರೀಚಿಯ ತೊರೆಗೆ ಹರುಗೋ
ಲಿಡುವರುಂಟೇ ಲೆಪ್ಪದುರುಗನ
ಹಿಡಿಯಲೇತಕೆ ಗರುಡ ಮಂತ್ರವು ಚಪಲನೆನ್ನದಿರು
ಕೊಡನ ಮಗನ ಕುಮಂತ್ರದೊಡ್ಡಿನ
ಕಡಿತಕಾನಂಜುವೆನೆ ವೆಗ್ಗಳ
ನುಡಿಯಲಮ್ಮೆನು ತನ್ನನೀಗಳೆ ಬಿಟ್ಟು ನೋಡೆಂದ

ಕಂದ ವೈರಿವ್ಯೂಹವಸದಳ
ವೆಂದೆನಿಪುದದರೊಳಗೆ ಕೃಪ ಗುರು
ನಂದನರು ರಾಧೇಯ ಭೂರಿಶ್ರವ ಜಯದ್ರಥರು
ಇಂದುಧರನಡಹಾಯ್ದರೊಮ್ಮಿಗೆ
ಹಿಂದುಮುಂದೆನಿಸುವರು ನೀಗೆಲು
ವಂದವೆಂತೈ ಸಮರವಿದು ಸಾಮಾನ್ಯವಲ್ಲೆಂದ

ಗಾಳಿಬೆಮರುವುದುಂಟೆ ವಹ್ನಿ
ಜ್ವಾಲೆ ಹಿಮಕಂಜುವುದೆ ಮಂಜಿನ
ಮೇಲುಗಾಳೆಗವುಂಟೆ ಬಲುಬೇಸಗೆಯ ಬಿಸಿಲೊಳಗೆ
ಬಾಲನಿವನೆನ್ನದಿರು ದುಗುಡವ
ತಾಳಲಾಗದು ಬೊಪ್ಪ ನಿಮ್ಮಡಿ
ಯಾಲಿಗಳಿಗೌತಣವನಿಕ್ಕುವೆನೊರಸಿ ರಿಪುಬಲವ

ಅರಿಬಲವ ನೀ ಖಂಡಿಗೆಳೆ ಮೋ
ಹರಸಹಿತ ನಾ ಬಹೆನು ನಡೆ ಯೆಂ
ದರಸನಭಿಮನ್ಯುವಿಗೆ ನೇಮವ ಕೊಟ್ಟನಾಹವಕೆ
ಜನಪನಂಘ್ರಿಗೆ ಮಣಿದು ಕೈ ಮುಗಿದೆನಗೆ
ಬೆಸಸೈ ಬೊಪ್ಪ ತಾ
ಬಲ್ಲೆನು ಮಹಾಹವದೊಳಗೆ ಪದ್ಮವ್ಯೂಹ ಭೇದನವ
Summary
ಈ ಕವನದಲ್ಲಿ ಅಭಿಮನ್ಯುವನ್ನು ಯುದ್ಧಕ್ಕೆ ಕಳುಹಿಸುವ ಸಂದರ್ಭದಲ್ಲಿ ಅವನ ಧೈರ್ಯ ಮತ್ತು ಪದ್ಮವ್ಯೂಹ ಭೇದಿಸುವ ಸಾಮರ್ಥ್ಯದ ಕುರಿತು ವಿವರಿಸಲಾಗಿದೆ. ಧರ್ಮಜನು ಬಾಲಕನಾದ ಅಭಿಮನ್ಯುವಿನ ಶೌರ್ಯವನ್ನು ಮೆಚ್ಚಿದರೂ, ಮಹಾರಥಿಗಳ ಎದುರಿನ ಯುದ್ಧದ ಅಪಾಯವನ್ನು ಕುರಿತು ಚಿಂತಿಸುತ್ತಾನೆ. ಅಭಿಮನ್ಯು ತಾನು ಪದ್ಮವ್ಯೂಹವನ್ನು ಭೇದಿಸಬಲ್ಲೆನೆಂದು ದೃಢವಾಗಿ ಹೇಳಿ ಯುದ್ಧಕ್ಕೆ ಸಿದ್ಧನಾಗುತ್ತಾನೆ. ಶತ್ರುಪಡೆಯಲ್ಲಿರುವ ಕೃಪ, ಕರ್ಣ, ಭೂರಿಶ್ರವ ಮತ್ತು ಜಯದ್ರಥ ಮುಂತಾದ ಮಹಾರಥಿಗಳು ಇರುವುದರಿಂದ ಈ ಸಮರ ಸಾಮಾನ್ಯವಲ್ಲ ಎಂದು ತಿಳಿಸಲಾಗುತ್ತದೆ. ಆದರೂ ಅಭಿಮನ್ಯುವಿನ ಧೈರ್ಯ, ಕರ್ತವ್ಯನಿಷ್ಠೆ ಮತ್ತು ಯುದ್ಧಸಿದ್ಧತೆ ಈ ಕವನದ ಪ್ರಮುಖ ಅಂಶಗಳಾಗಿ ಮೂಡಿಬರುತ್ತವೆ.
Author
ಕವಿ: ಕುಮಾರವ್ಯಾಸ