ಬಿಡುಗಡೆಯ ಹಾಡು

This page features a video of the poem “ಬಿಡುಗಡೆಯ ಹಾಡು (Bidugadeya Hadu)”, prescribed under the Karnataka State Syllabus for 7th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಹಂಗಿನರಮನೆಯ ಮುಳ್ಳಿನೀ ಪಂಜರದಲ್ಲಿ
ರೆಕ್ಕೆಗಳ ಬಿಗಿ ಹಿಡಿದು ನರಳುತಿದೆ ಹಕ್ಕಿ
ಕದ ಮುರಿದು ಹೊರಬಂದು ಬಾನಾಡಿಯಾಗುತ್ತ
ವಿಹರಿಸಲಿ, ಹರ್ಷಿಸಲಿ ಹಿಗ್ಗಿನೊಳು ಸೊಕ್ಕಿ

ಮಡುಗಟ್ಟಿ ನಿಲ್ಲಿಸಿದ ನೀರು ತಾ ಕೊಳೆಗೊಂಡು
ಚಡಪಡಿಸುತಿದೆ ಮುನ್ನಡೆವ ಹಾದಿ ಹುಡುಕಿ
ಹಸಿದ ನೆಲವನು ತಣಿಸಿ ಹಸಿರು ವಸನವನುಡಿಸಿ
ಅಡೆತಡೆಯ ಗೋಡೆಗಳು ಕೆಡಹಲೈ ದುಡುಕಿ

ಸುತ್ತಿಟ್ಟು ಮೃಗರಾಜ ಹತ್ತಡಿಯ ಹದ್ದಿನೊಳು
ಗೊಣಗುತಿಹ - “ಇನ್ನು ಈ ಬಂಧನ ಸಾಕು”
ಕನಲಿ ಕೆಂಗಿಡಿಯುಗುಳಿ ಪಂಜರಗಳನೆತ್ತುತಿಹ-
“ಸೆರೆಯಿಂದ ನಾ ಜಿಗಿದು ಸದರೇರಬೇಕು”

ರವಿಕಿರಣಗಳ ಸೆರೆಯೊಳಡಗಿಸಿಹ ಕಾರಿರುಳೆ
ಹೊರಗೆ ಬಿಡು, ದೂರ ಸರಿ ಹರಡಲೀ ಬೆಳಕು;
ತೊಳೆದು ಹೋಗಲಿ ಸಕಲ ಮೈ ಮನದ ಕೊಳಕುಗಳು|
ಒಳ - ಹೊರಗು ತಿಳಿನೀರ ಮಳೆ ಸುರಿಯಬೇಕು

ಪ್ರಾಣ ಪಣಕಿಟ್ಟಿಹೆವು - ಸಿಡಿಲ ಮರಿಗಳು ನಾವು
ಪ್ರಳಯ ರುದ್ರರೆ ಹೌದು - ಭಾರತಿಯ ಆಣೆ.
ಇನ್ನು ನಿನಗುಳಿಗಾಲವಿಲ್ಲ - ನೀ ತೊಲಗು
ಇನ್ನೆಲ್ಲ ನೀನೇಳು ಕಡಲುಗಳ ರಾಣಿ.

ಜಾತಿಮತ ಪಂಥಗಳ ಹುಟ್ಟುರುಹಿ ಮನುಜಮತ
ಮೆರೆಸುವೆವು ಮೂರು ಬಣ್ಣದ ಗುಡಿಯ ಹಿಡಿದು,
ಸರ್ವರಿಗು ಸಮನಾವು, ಮನದುಂಬಿ ದನಿಯೆತ್ತಿ
ಹಾಡುವೆವು ಬಿಡುಗಡೆಯ ಒಕ್ಕೊರಲ ಹಾಡು.
Summary
ಈ ಕವನವು ಬಂಧನದಿಂದ ಮುಕ್ತವಾಗಿ ಸ್ವಾತಂತ್ರ್ಯವನ್ನು ಪಡೆಯುವ ಬಯಕೆಯನ್ನು ಶಕ್ತಿಯುತ ರೂಪಕಗಳ ಮೂಲಕ ವ್ಯಕ್ತಪಡಿಸುತ್ತದೆ. ಪಂಜರದಲ್ಲಿರುವ ಹಕ್ಕಿ ತನ್ನ ಬಂಧನವನ್ನು ಮುರಿದು ಆಕಾಶದಲ್ಲಿ ಹಾರಲು ಬಯಸುತ್ತದೆ. ನಿಂತ ನೀರು ಕೊಳೆಗೊಳ್ಳುವಂತೆ, ಜೀವನವೂ ಅಡೆತಡೆಗಳಿಂದ ನಿಂತರೆ ಕುಂಠಿತವಾಗುತ್ತದೆ; ಆದ್ದರಿಂದ ಅದು ಮುನ್ನಡೆಯಬೇಕು ಎಂಬ ಸಂದೇಶವಿದೆ. ಕತ್ತಲೆಯ ಬಂಧನದಿಂದ ಸೂರ್ಯಕಿರಣಗಳನ್ನು ಹೊರಬಿಟ್ಟು ಬೆಳಕು ಮತ್ತು ಶುದ್ಧತೆ ಹರಡಬೇಕು ಎಂದು ಕವಿ ಆಶಿಸುತ್ತಾನೆ. ಜಾತಿ, ಮತ ಮತ್ತು ಪಂಥಗಳ ಭೇದಗಳನ್ನು ಮೀರಿ ಎಲ್ಲರೂ ಸಮಾನರಾಗಿ ಒಂದಾಗಿ ಬಿಡುಗಡೆಯ ಹಾಡನ್ನು ಹಾಡಬೇಕು ಎಂಬುದು ಕವನದ ಮುಖ್ಯ ಆಶಯವಾಗಿದೆ.
Author
ಕವಿ: ಮುದೇನೂರು ಸಂಗಣ್ಣ