This page features a video of the poem “ಅನ್ನದಾತ (Annadata)”, prescribed under the Karnataka State Syllabus for 7th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಇವನೆ ನೋಡು ಅನ್ನದಾತ
ಹೊಲದಿ ದುಡಿದೆ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು
ಮಳೆಯ ಗುಡುಗು ಚಳಿಯ ನಡುಗು
ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ
ಒಂದೆ ಸಮನೆ ದುಡಿಯುತ
ಗಟ್ಟಿ ದೇಹ ದೊಡ್ಡ ಮನಸು
ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ
ಅನ್ನ ನೀಡುತಿರುವನು
ಎತ್ತು ಎರಡು ಅವನ ಜೋಡು
ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೆ ಇರಲಿ
ಹೊಂದಿಕೊಂಡು ನಡೆವರು
ಇವನೆ ನೋಡು ಅನ್ನದಾತ
ಹೊಲದಿ ದುಡಿದೆ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು
ಹೊಲದಿ ದುಡಿದೆ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು
ಮಳೆಯ ಗುಡುಗು ಚಳಿಯ ನಡುಗು
ಬಿಸಿಲ ಬೇಗೆ ಸಹಿಸುತ
ಬೆವರು ಸುರಿಸಿ ಕಷ್ಟ ಸಹಿಸಿ
ಒಂದೆ ಸಮನೆ ದುಡಿಯುತ
ಗಟ್ಟಿ ದೇಹ ದೊಡ್ಡ ಮನಸು
ದೇವನಿಂದ ಪಡೆದನು
ಯೋಗಿಯಾಗಿ ತ್ಯಾಗಿಯಾಗಿ
ಅನ್ನ ನೀಡುತಿರುವನು
ಎತ್ತು ಎರಡು ಅವನ ಜೋಡು
ಕೂಡಿ ದುಡಿವ ಗೆಳೆಯರು
ಹಿಗ್ಗು ಕುಗ್ಗು ಏನೆ ಇರಲಿ
ಹೊಂದಿಕೊಂಡು ನಡೆವರು
ಇವನೆ ನೋಡು ಅನ್ನದಾತ
ಹೊಲದಿ ದುಡಿದೆ ದುಡಿವನು
ನಾಡ ಜನರು ಬದುಕಲೆಂದು
ದವಸ ಧಾನ್ಯ ಬೆಳೆವನು
Summary
ಈ ಕವಿತೆ ರೈತನನ್ನು ಅನ್ನದಾತನಾಗಿ ಗೌರವಿಸುತ್ತದೆ. ನಾಡಿನ ಜನರು ಬದುಕಲು ಅವನು ಹೊಲದಲ್ಲಿ ನಿರಂತರವಾಗಿ ದುಡಿದು ದವಸಧಾನ್ಯಗಳನ್ನು ಬೆಳೆಸುತ್ತಾನೆ. ಮಳೆ, ಚಳಿ ಮತ್ತು ಬಿಸಿಲಿನ ಕಷ್ಟಗಳನ್ನು ಸಹಿಸಿಕೊಂಡು ಅವನು ಶ್ರಮಿಸುತ್ತಾನೆ. ಗಟ್ಟಿದೇಹ ಮತ್ತು ದೊಡ್ಡ ಮನಸ್ಸು ಅವನ ಸೇವಾಭಾವವನ್ನು ತೋರಿಸುತ್ತವೆ. ಅವನೊಂದಿಗೆ ದುಡಿಯುವ ಎರಡು ಎತ್ತುಗಳನ್ನು ಅವನ ನಿಷ್ಠಾವಂತ ಗೆಳೆಯರಂತೆ ಚಿತ್ರಿಸಲಾಗಿದೆ.
Author
ಸತ್ಯಾರ್ಥಿ