ಭರತ ಭೂಮಿ ನನ್ನ ತಾಯಿ

This page features a video of the poem “ಭರತ ಭೂಮಿ ನನ್ನ ತಾಯಿ (Bharata Bhumi Nanna Tayi)”, prescribed under the Karnataka State Syllabus for 7th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಭರತ ಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು

ತುಹಿನ ಗಿರಿಯ ಸಿರಿಯ ಮುಡಿಯ
ಹಿರಿಯ ಕಡಲು ತೊಳೆಯುವಡಿಯ
ಪೈರು ಪಚ್ಚೆ ಪಸುರಿನುಡೆಯ
ಭರತ ಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು

ಸಿಂಧು, ಯಮುನೆ, ದೇವಗಂಗೆ
ತಪತಿ, ಕೃಷ್ಣೆ, ಭದ್ರೆ, ತುಂಗೆ
ಸಲಿಲ ತೀರ್ಥ ಪುಣ್ಯರಂಗೆ
ಭರತ ಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು

ಮತದ ಬಿರುಕುಗಳನು ತೊರೆವೆ
ನುಡಿಗಳೊಡಕುಗಳನು ಮರೆವೆ
ತೊತ್ತ ತೊಡಕುಗಳನು ಬಿರಿವೆ
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು

ಭರತ ಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಸ್ವಾತಂತ್ರ್ಯದ ಸ್ವರ್ಗಕೇರೆ
ಪುಣ್ಯದೇಣಿ ಮೆಟ್ಟಲು!

ಭರತ ಭೂಮಿ ನನ್ನ ತಾಯಿ
ನನ್ನ ಪೊರೆವ ತೊಟ್ಟಿಲು
ಜೀವನವನೆ ದೇವಿಗೆರೆವೆ
ಬಿಡುತೆ ಗುಡಿಯ ಕಟ್ಟಲು
Summary
ಈ ಕವಿತೆ ಭಾರತಭೂಮಿಯನ್ನು ತಾಯಿಯಾಗಿ ಕಂಡು ಅವಳಿಗೆ ಪ್ರೀತಿ ಮತ್ತು ಸಮರ್ಪಣೆಯನ್ನು ವ್ಯಕ್ತಪಡಿಸುತ್ತದೆ. ಹಿಮಗಿರಿ, ಕಡಲು, ಹಸಿರು ಪೈರುಗಳು ಮತ್ತು ಪವಿತ್ರ ನದಿಗಳನ್ನು ಈ ತಾಯಿನಾಡಿನ ಸಿರಿಯಾಗಿ ಚಿತ್ರಿಸಲಾಗಿದೆ. ದೇಶಸೇವೆ ಮತ್ತು ಏಕತೆಯ ಗುಡಿಯನ್ನು ಕಟ್ಟಲು ಜೀವನವನ್ನೇ ಅರ್ಪಿಸಬೇಕೆಂಬ ಆಶಯ ವ್ಯಕ್ತವಾಗಿದೆ. ಮತದ ಬಿರುಕುಗಳು, ನುಡಿಗಳ ಒಡಕುಗಳು ಮತ್ತು ಇತರ ತೊಡಕುಗಳನ್ನು ತೊರೆದು ಒಂದಾಗಬೇಕು ಎಂದು ಕವಿತೆ ಕರೆ ನೀಡುತ್ತದೆ. ದೇಶಪ್ರೇಮವನ್ನು ಸ್ವಾತಂತ್ರ್ಯ, ಏಕತೆ ಮತ್ತು ಸೇವೆಯ ಭಾವನೆಯೊಂದಿಗೆ ಜೋಡಿಸಲಾಗಿದೆ.
Author
ಕವಿ: ಕುವೆಂಪು