ಕನಸಿನಲ್ಲಿ

This page features a video of the poem “ಕನಸಿನಲ್ಲಿ (Kanasinalli)”, prescribed under the Karnataka State Syllabus for 7th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಕಾಡಿಗೆ ಹೋದೆನು ಕನಸಿನಲಿ
ಒಯ್ದಿತು ನನ್ನನ್ನು ಪಟ್ಟೆಹುಲಿ
ಸೊಂಡಿಲಿನಲಿ ತಣ್ಣೀರನು ತಂದು
ಆನೆಯು ಜಳಕವ ಮಾಡಿಸಿತು
ಮರಗಳು ನೀಡಿದ ಹಣ್ಣುಗಳನ್ನು
ಸಿಂಹವು ಊಡಿಸಿತು

ಹಂಸಗಳೆಲ್ಲಾ ಹಾಸಿಗೆ ಮಾಡಿ
ಹಕ್ಕಿಗಳೆಲ್ಲಾ ಹಾಡನು ಹಾಡಿ
ಮೊಲಗಳು ಕತೆಯನು ಹೇಳಿದವು
ನಿಮ್ಮೂರಿನ ಮಳೆ ಬೆಳೆ ಹೇಗೆಂದು
ನರಿಗಳು ಕೇಳಿದವು

ಗಾಳಿಯ ಹಾಕಿತು ನವಿಲಿನ ಹಿಂಡು
ಇದನೆಲ್ಲಾ ನನ್ನಪ್ಪನು ಕಂಡು
ಕೈಯಲಿ ಛಡಿಯನು ಹಿಡಿದೇ ಬಂದು
`ನನ್ನನು ಕೇಳದೆ ಯಾತಕೆ ಬಂದೆ?’’

ಎಂದಬ್ಬರಿಸಲು ಹೆದರಿಕೆಯಿಂದ
ಪ್ರಾಣಿಗಳೆಲ್ಲಾ ಓಡಿದವು
ದೂರದಿ ಗವಿಯಲಿ ಸುಮ್ಮನೆ ನಿಂತು
ಅಪ್ಪನ ನೋಡಿದವು

ಬೆನ್ನಿಗೆ ಛಡಿಗಳು ಬೀಳಲು ಅಯ್ಯೋ
ಅಯ್ಯೋ ಎಂದತ್ತೆ
ಎಚ್ಚರವಾಯಿತು-ಅಪ್ಪನು ಇಲ್ಲ!
ಕಾಡಿಗೆ ಹೋಗಲು ಆಗಲೆ ಇಲ್ಲ
ಎಂದೆಂದೂ ಮತ್ತೆ
Summary
ಈ ಕವಿತೆಯಲ್ಲಿ ಕಾಡಿಗೆ ಹೋದ ಕನಸಿನಲ್ಲಿ ವಕ್ತಾರನಿಗೆ ಕಾಡುಪ್ರಾಣಿಗಳು ಪ್ರೀತಿಯಿಂದ ಆತಿಥ್ಯ ನೀಡುವ ದೃಶ್ಯವನ್ನು ಚಿತ್ರಿಸಲಾಗಿದೆ. ಪಟ್ಟೆಹುಲಿ ಅವನನ್ನು ಕರೆದೊಯ್ಯುತ್ತದೆ, ಆನೆ ಜಳಕ ಮಾಡಿಸುತ್ತದೆ ಮತ್ತು ಸಿಂಹ ಹಣ್ಣುಗಳನ್ನು ಊಡಿಸುತ್ತದೆ. ಹಂಸಗಳು, ಹಕ್ಕಿಗಳು, ಮೊಲಗಳು ಮತ್ತು ಇತರ ಪ್ರಾಣಿಗಳು ಸ್ನೇಹಪೂರ್ಣ ಹಾಗೂ ಸಂತೋಷದ ಲೋಕವನ್ನು ನಿರ್ಮಿಸುತ್ತವೆ. ನಂತರ ಅಪ್ಪನು ಕೈಯಲ್ಲಿ ಛಡಿಯೊಂದಿಗೆ ಬಂದು ಕೂಗಿದಾಗ ಪ್ರಾಣಿಗಳೆಲ್ಲಾ ಹೆದರಿ ಓಡಿಹೋಗುತ್ತವೆ. ಎಚ್ಚರವಾದ ಮೇಲೆ ಅದು ಕೇವಲ ಕನಸಾಗಿತ್ತು ಎಂದು ಅರಿತು ಮತ್ತೆ ಕಾಡಿಗೆ ಹೋಗಬಾರದೆಂದು ವಕ್ತಾರನು ಯೋಚಿಸುತ್ತಾನೆ.
Author
ಕವಿ: ವಿ.ಜಿ. ಭಟ್ಟ