ಗೆಳೆತನ

This page features a video of the poem “ಗೆಳೆತನ (Geletana)”, prescribed under the Karnataka State Syllabus for 8th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ
ತಣ್ಣಿಳಲ ತಂಪಿನಲಿ ತಂಗಿರುವೆನು;
ಜೀವನದನಂತ ದುರ್ಭರ ಬವಣೆ ನೋವುಗಳ
ಕಾವುಗಳ ಮೌನದಲಿ ನುಂಗಿರುವೆನು
ಗೆಳೆತನವೆ ಇಹಲೋಕಕಿರುವ ಅಮೃತ
ಅದನುಳಿದರೇನಿಹುದು-ಜೀವನ್ಮತ!

ಇಲ್ಲಿ ವಂಚನೆಯಿಲ್ಲ ಚಂಚಲತೆಯಿನಿತಿಲ್ಲ
ಮೇಲು ಕೀಳುಗಳೆಂಬ ಭೇದವಿಲ್ಲ
ಅಹಮಿಕೆಯ ನೆವಮಿಲ್ಲ ದ್ವೇಷ ಗುಣಮಣಮಿಲ್ಲ
ಸಣ್ಣತನ ಸಂಕೋಚ ಮೊದಲಿಗಿಲ್ಲ
ಮನವು ಬಾನಗಲ, ಎದೆ ತಿಳಿಗೊಳದೊಲು
ಭಾವ ಶುದ್ಧ ಸ್ಪಟಿಕ - ಬೆಳದಿಂಗಳು!

ಉಪ್ಪಿಗಿಂತಲು ರುಚಿಯು ತಾಯಿಗಿಂತಲು ಬಂಧು
ಇಲ್ಲೆಂಬ ಗಾದೆನುಡಿ ಕೇಳಿರುವೆನು.
ಗೆಳೆತನದ ಶುಚಿರುಚಿಯು ಇದಕು ಮಿಗಿಲಾಗಿಹುದು
ಎಂಬ ಸಾಹಸ ಮಾಡೆ ದೋಷವೇನು?
ಕಂಡ ಕಂಡವರೇನು ಬಲ್ಲರಿದನು.
ಉಂಡವನು ಕಂಡಿಹನು ಇದರ ಹದನು.

ಹೇಗೊ ಹೇಗೋ ಹೆಗಲುಗೊಟ್ಟು ಬಂದಿಹ ಕೂರ್ಪು
ಆಗು ಹೋಗುಗಳಿಂಗೆ ಬಾಗದಂತೆ,
ಸುಖಕೆ ಸಂತಸಬಟ್ಟು ದು:ಖದಲಿ ಸಹಭಾಗಿ -
ಯಾಗೆ ಜೀವನ ರಸದ ಪಾಕದಂತೆ -
ಸರಸವಿರಸವನೆಲ್ಲ ಅಪ್ಪುಕಯ್ದು
ಬಾಳುವರು ಗಂಧದೊಲು ಜೀವ ತೆಯ್ದು!
Summary
ಈ ಕವನವು ನಿಜವಾದ ಗೆಳೆತನದ ಮಹತ್ವ ಮತ್ತು ಅದರ ಅಮೂಲ್ಯತೆಯನ್ನು ಕೊಂಡಾಡುತ್ತದೆ. ಗೆಳೆಯರ ನಡುವೆ ವಂಚನೆ, ಅಹಂಕಾರ, ದ್ವೇಷ, ಮೇಲುಕೀಳು ಮತ್ತು ಸಣ್ಣತನ ಇರಬಾರದು ಎಂದು ಕವಿ ಹೇಳುತ್ತಾನೆ. ನಿಜವಾದ ಸ್ನೇಹವು ಮನಸ್ಸನ್ನು ವಿಶಾಲಗೊಳಿಸಿ, ದುಃಖದಲ್ಲಿ ಜೊತೆ ನಿಂತು, ಸುಖದಲ್ಲಿ ಸಂತೋಷವನ್ನು ಹಂಚಿಕೊಳ್ಳುತ್ತದೆ. ಗೆಳೆತನವು ಜೀವನದ ಕಷ್ಟಗಳನ್ನು ಸಹಿಸಲು ಧೈರ್ಯ ನೀಡುವ ಅಮೃತದಂತೆ ಮತ್ತು ಜೀವನಕ್ಕೆ ರುಚಿ ನೀಡುವ ಸಿಹಿಯಂತೆ ಎಂದು ಕವನವು ವರ್ಣಿಸುತ್ತದೆ. ಪರಸ್ಪರ ಹೆಗಲುಕೊಟ್ಟು ಜೀವನದ ಏರುಪೇರುಗಳನ್ನು ಎದುರಿಸುವ ಸ್ನೇಹಿತರ ಬಾಂಧವ್ಯವೇ ಬದುಕನ್ನು ಸುಂದರಗೊಳಿಸುತ್ತದೆ ಎಂಬುದು ಕವನದ ಸಂದೇಶವಾಗಿದೆ.
Author
ಕವಿ: ಚೆನ್ನವೀರಕಣವಿ