This page features a video of the poem “ಸಾರ್ಥಕ (Sarthaka)”, prescribed under the Karnataka State Syllabus for 8th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ನನ್ನ ದೇಹದ ಬೂದಿ - ಗಾಳಿಯಲಿ ತೂರಿಬಿಡಿ,
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ:
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದುಬರೆ,
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯ ಬಿಡಿ
ತೇಲಿ ಬೀಳಲಿ ಮೀನ ಬಾಯಿಯಲ್ಲಿ;
ಮುಷ್ಟಿ ಬೂದಿಯ ತಿಂದು - ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಕೊಳದಲ್ಲಿ ಬೀಗಿ ಬಿಡಿ
ತಾವರೆಯು ದಿನದಿನವೂ ಅರಳುವಲ್ಲಿ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ,
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ಸತ್ತಮೇಲಾದರೂ ದೇಹ ಸೇವೆಗೆ ನಿಲಲಿ,
ಇಂದಿಗೀ ನರಜನ್ಮ ಸೇವೆಯೆಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ ದೇಹ,
ನಿಜಸೇವೆ ಗೈಯಲಿಕೆ ಬರಲಿ ಮುಂದು.
ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ:
ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದುಬರೆ,
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯ ಬಿಡಿ
ತೇಲಿ ಬೀಳಲಿ ಮೀನ ಬಾಯಿಯಲ್ಲಿ;
ಮುಷ್ಟಿ ಬೂದಿಯ ತಿಂದು - ಪುಷ್ಟವಾಗಲು ಮೀನು
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ನನ್ನ ದೇಹದ ಬೂದಿ-ಕೊಳದಲ್ಲಿ ಬೀಗಿ ಬಿಡಿ
ತಾವರೆಯು ದಿನದಿನವೂ ಅರಳುವಲ್ಲಿ;
ಬೂದಿ ಕೆಸರನು ಕೂಡಿ ಹೊಸ ಪಂಕಜವು ಮೂಡೆ,
ಧನ್ಯವಾಯಿತು ಹುಟ್ಟು ಸಾವಿನಲ್ಲಿ
ಸತ್ತಮೇಲಾದರೂ ದೇಹ ಸೇವೆಗೆ ನಿಲಲಿ,
ಇಂದಿಗೀ ನರಜನ್ಮ ಸೇವೆಯೆಂದು
ತನ್ನ ಸ್ವಾರ್ಥವ ನೆನೆದು ವ್ಯರ್ಥವಾಗಿದೆ ದೇಹ,
ನಿಜಸೇವೆ ಗೈಯಲಿಕೆ ಬರಲಿ ಮುಂದು.
Summary
ಈ ಕವನವು ಮರಣದ ನಂತರವೂ ದೇಹವು ಇತರ ಜೀವಿಗಳಿಗೆ ಉಪಯುಕ್ತವಾಗಬೇಕು ಎಂಬ ಸೇವಾಭಾವವನ್ನು ವ್ಯಕ್ತಪಡಿಸುತ್ತದೆ. ತನ್ನ ದೇಹದ ಬೂದಿ ಹೊಲಕ್ಕೆ ಸೇರಿ ಬೆಳೆ ಬೆಳೆಯಲು ಸಹಾಯವಾಗಲಿ ಎಂದು ಕವಿ ಬಯಸುತ್ತಾನೆ. ಅದೇ ಬೂದಿ ನೀರಿಗೆ ಸೇರಿ ಮೀನುಗಳಿಗೆ ಆಹಾರವಾಗಿ ಅವುಗಳನ್ನು ಪೋಷಿಸಲಿ ಮತ್ತು ಕೆಸರಿನೊಂದಿಗೆ ಸೇರಿ ತಾವರೆ ಅರಳಲು ಕಾರಣವಾಗಲಿ ಎಂದು ಹೇಳಲಾಗಿದೆ. ಹೀಗೆ ಮರಣದ ನಂತರವೂ ತನ್ನ ದೇಹ ಪ್ರಕೃತಿಯ ಚಕ್ರದಲ್ಲಿ ಉಪಯೋಗವಾಗಬೇಕು ಎಂಬ ಉದಾತ್ತ ಆಶಯವನ್ನು ಕವನವು ತೋರಿಸುತ್ತದೆ. ನರಜನ್ಮವು ಸ್ವಾರ್ಥಕ್ಕಾಗಿ ಮಾತ್ರವಲ್ಲ, ಸಮಾಜ ಮತ್ತು ಪ್ರಕೃತಿಗೆ ನಿಜವಾದ ಸೇವೆ ಸಲ್ಲಿಸಲು ದೊರೆತ ಅವಕಾಶ ಎಂಬುದೇ ಕವನದ ಮುಖ್ಯ ಸಂದೇಶವಾಗಿದೆ.
Author
ಎಲ್. ಕೆ. ಕಂಬಾರ