ಸೋಮೇಶ್ವರಾ

This page features a video of the poem “ಸೋಮೇಶ್ವರಾ (Someshvara)”, prescribed under the Karnataka State Syllabus for 8th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ |
ಸತಿಯೇ ಸರ್ವಕೆ ಸಾಧನಂ ಕಲಿಸಿದಾತಂ ವರ್ಣಮಾತ್ರಂ ಗುರು ||
ಶ್ರುತಿಮಾರ್ಗಂ ಬಿಡದಾತ ಸುವ್ರತಿ ಮಹಾ ಸದ್ವಿದ್ಯೆಯೇ ಪುಣ್ಯದಂ |
ಸುತನೇ ಸದ್ಗತಿದಾತನೈ ಹರಹರಾ ಶ್ರೀಚೆನ್ನಸೋಮೇಶ್ವರಾ ||

ಪ್ರಜೆಯಂ ಪಾಲಿಸಬಲ್ಲೊಡಾತನರಸಂ ಕೈಯಾಸೆಯಂ ಮಾಡದಂ |
ನಿಜ ಮಂತ್ರೀಶ್ವರ ತಂದೆ ತಾಯ ಸಲಹಲ್ ಬಲ್ಲಾತನೇ ಧಾರ್ಮಿಕಂ ||
ಭಜಕಂ ದೈವದ ಭಕ್ತಿಯುಳ್ಳೊಡೆ ಭಟಂ ನಿರ್ಭೀತ ತಾನಾದವಂ |
ದ್ವಿಜನಾಚಾರತೆಯುಳ್ಳವಂ ಹರಹರಾ ಶ್ರೀಚೆನ್ನಸೋಮೇಶ್ವರಾ||

ಅತಿ ಗಂಭೀರನುದಾರ ಧೀರನು ಮಹಾ ಸಂಪನ್ನ ಸತ್ಯಾತ್ಮನೂ |
ರ್ಜಿತ ನಾನಾಲಿಪಿಭಾಷೆಯೊಳ್ ಪರಿಚಿತಂ ಲಂಚಕ್ಕೆ ಕೈನೀಡದಂ ||
ವ್ರತ ಸದ್ಧರ್ಮ ವಿಚಾರಶಾಲಿ ಚತುರೋಪಾಯಂಗಳಂ ಬಲ್ಲವಂ |
ಪತಿಕರ‍್ಯಂ ವರ ಮಂತ್ರಿಯೈ ಹರಹರಾ ಶ್ರೀಚೆನ್ನಸೋಮೇಶ್ವರಾ ||

ಉಡುರಾಜಂ ಕಳೆಗುಂದಿ ಪೆರ್ಚದಿಹನೇ ನೃಗ್ರೋಧಬೀಜಂ ಕೆಲಂ |
ಸಿಡಿದುಂ ಪೆರ್ಮರನಾಗದೇ ಎಳಗರುಂ ಎತ್ತಾಗದೇ ಲೋಕದೊಳ್ ||
ಮಿಡಿ ಪಣ್ಣಾಗದೆ ದೈವನೊಲ್ಮೆಯಿರಲಾ ಕಾಲಾನುಕಾಲಕ್ಕೆ ತಾಂ |
ಬಡವಂ ಬಲ್ಲಿದನಾಗನೇ ಹರಹರಾ ಶ್ರೀಚೆನ್ನಸೋಮೇಶ್ವರಾ ||
Summary
ಈ ಕವನವು ಒಬ್ಬ ಆದರ್ಶ ತಂದೆ, ತಾಯಿ, ಪತ್ನಿ, ಗುರು, ರಾಜ, ಮಂತ್ರಿ ಮತ್ತು ಭಕ್ತನಲ್ಲಿ ಇರಬೇಕಾದ ಉತ್ತಮ ಗುಣಗಳನ್ನು ವಿವರಿಸುತ್ತದೆ. ತಂದೆಯು ಮಕ್ಕಳಿಗೆ ಸದ್ಧರ್ಮವನ್ನು ಕಲಿಸಿ ಅವರನ್ನು ಸನ್ಮಾರ್ಗದಲ್ಲಿ ನಡೆಸಬೇಕು ಮತ್ತು ಪತ್ನಿಯು ಕುಟುಂಬದ ಸುಖಕ್ಕೆ ಸಾಧನವಾಗಬೇಕು ಎಂದು ಹೇಳಲಾಗಿದೆ. ಪ್ರಜೆಗಳನ್ನು ನ್ಯಾಯದಿಂದ ಪಾಲಿಸುವ ರಾಜ, ಸ್ವಾರ್ಥವಿಲ್ಲದ ಮಂತ್ರಿ ಮತ್ತು ನಿರ್ಭೀತ ಭಕ್ತರನ್ನು ಆದರ್ಶ ವ್ಯಕ್ತಿಗಳಾಗಿ ಕವಿ ಚಿತ್ರಿಸುತ್ತಾನೆ. ಸತ್ಯ, ವಿದ್ಯೆ, ಧೈರ್ಯ, ಉದಾರತೆ, ಪ್ರಾಮಾಣಿಕತೆ ಮತ್ತು ಲಂಚದಿಂದ ದೂರವಿರುವ ಗುಣಗಳಿಗೆ ವಿಶೇಷ ಮಹತ್ವ ನೀಡಲಾಗಿದೆ. ದೈವಕೃಪೆಯಿಂದ ಸಾಮಾನ್ಯನೂ ಉತ್ತಮ ಗುಣಗಳನ್ನು ಬೆಳೆಸಿಕೊಂಡು ಉನ್ನತ ಸ್ಥಿತಿಗೆ ಏರಬಹುದು ಎಂಬ ಆಶಯದೊಂದಿಗೆ ಕವನವು ಮುಕ್ತಾಯಗೊಳ್ಳುತ್ತದೆ.
Author
ಕವಿ: ಎಲ್. ಕೆ. ಕಂಬಾರ