ಅನ್ವೇಷಣೆ

This page features a video of the poem “ಅನ್ವೇಷಣೆ (Anveshane)”, prescribed under the Karnataka State Syllabus for 8th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ

ಎಲ್ಲಿದೆ ನಂದನ? ಎಲ್ಲಿದೆ ಬಂಧನ?
ಎಲ್ಲಾ ಇವೆ ಈ ನಮ್ಮೊಳಗೆ
ಒಳಗಿನ ತಿಳಿಯನು ಕಲಕದೆ ಇದ್ದರೆ
ಅಮೃತದ ಸವಿಯಿದೆ ನಾಲಗೆಗೆ

ಹತ್ತಿರವಿದ್ದೂ, ದೂರ ನಿಲ್ಲುವೆವು
ನಮ್ಮ ಅಹಮ್ಮಿನ ಕೋಟೆಯಲಿ
ಎಷ್ಟು ಕಷ್ಟವೋ ಹೊಂದಿಕೆ ಎಂಬುದು
ನಾಲ್ಕು ದಿನದ ಈ ಬದುಕಿನಲಿ

ಎಲ್ಲೋ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆವು ನಮ್ಮೊಳಗೆ
Summary
ಈ ಕವಿತೆಯಲ್ಲಿ ಮನುಷ್ಯನು ದೇವರನ್ನು ಕಲ್ಲು ಮತ್ತು ಮಣ್ಣಿನ ಗುಡಿಗಳಲ್ಲಿ ಹುಡುಕುತ್ತಾನೆ, ಆದರೆ ತನ್ನೊಳಗಿರುವ ಪ್ರೀತಿ ಮತ್ತು ಸ್ನೇಹವನ್ನು ಗುರುತಿಸುವುದಿಲ್ಲ ಎಂಬ ವಿಚಾರವನ್ನು ಹೇಳಲಾಗಿದೆ. ನಿಜವಾದ ಸಂತೋಷ ಮತ್ತು ಅಮೃತದ ಸವಿಯನ್ನು ಹೊರಗಡೆ ಹುಡುಕುವುದಕ್ಕಿಂತ ನಮ್ಮೊಳಗಿನ ಒಳ್ಳೆಯತನವನ್ನು ಅರಿಯುವುದರಲ್ಲಿ ಕಾಣಬಹುದು. ಅಹಂಕಾರದಿಂದ ಮನುಷ್ಯರು ಹತ್ತಿರವಿದ್ದರೂ ಪರಸ್ಪರ ದೂರವಾಗುತ್ತಾರೆ ಎಂದು ಕವಿ ಸೂಚಿಸುತ್ತಾರೆ. ನಾಲ್ಕು ದಿನಗಳ ಬದುಕಿನಲ್ಲಿ ಹೊಂದಾಣಿಕೆ ಕಷ್ಟವಾಗಲು ನಮ್ಮ ಅಹಮ್ಮೇ ಕಾರಣವಾಗುತ್ತದೆ. ಆದ್ದರಿಂದ ನಮ್ಮೊಳಗಿನ ಪ್ರೀತಿ, ಸ್ನೇಹ ಮತ್ತು ಮಾನವೀಯತೆಯನ್ನು ಗುರುತಿಸಿ ಬದುಕಬೇಕು ಎಂಬ ಸಂದೇಶವನ್ನು ಕವಿತೆ ನೀಡುತ್ತದೆ.
Author
ಕವಿ: ಜಿ.ಎಸ್. ಶಿವರುದ್ರಪ್ಪ