This page features a video of the poem “ತೂಗಿ ತೂಗಿ ಮರಗಳೇ (Tugi Tugi Maragale)”, prescribed under the Karnataka State Syllabus for 8th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ತೂಗಿ ತೂಗಿ ಮರಗಳೇ
ಇಳೆಗೆ ಇಳಿದ ಮರಗಳೇ,
ನೆಲದ ಮಧುರ ಗಾನದಲ್ಲಿ
ಮೂಡಿ ಬಂದ ಸ್ವರಗಳೇ.
ಮಾತಾಡದೇ ದುಡಿಯುವಾ ಪ್ರೀತಿ ಪಡೆದ ಕರಗಳೇ
ಸೋತು ಬಂದ ಹಕ್ಕಿ ಹಿಂಡು ತೂಗಿಕೊಳುವ ನೆಲೆಗಳೇ
ಸಾಲು ಹಸಿರ ಮಾಲೆಯೇ ಜೀವರಸದ ನಾಲೆಯೇ
ಪ್ರೀತಿಯೆಂಬ ನೀತಿ ಹಾಡಿ ಪ್ರಕೃತಿ ಬರೆದ ಓಲೆಯೇ!
ಮಣ್ಣಿನ ತಮದಾಳವ ಸೀಳಿ ಮೇಲೆ ಬರುವಿರಿ
ಮೈ ತುಂಬ ಚಿಗುರಿನ ರೋಮಾಂಚನ ತಳೆವಿರಿ,
ಕೊಂಬೆ ಕೊಂಬೆ ಕೈಯ ಚಾಚಿ ಬನ್ನಿ ಎಂದು ಕರೆವಿರಿ
ಔದರ್ಯದ ಒಡಲಾಗಿ ಹೂವು ಹಣ್ಣು ಸುರಿವಿರಿ.
ಆಕಾಶಕೆ ತುಡಿಯುವಾ ನೆಲದಾಳದ ಕನಸೇ
ನೀಡಲೆಂದೆ ಫಲಿಸುವಾ ಋಷಿಸಮಾನ ಮನಸೇ,
ಕಡಿದರೂ ಕರುಣೆ ತೋರಿ ಚಿಗುರುವಾ ಗೆಲುವೇ
ಸತ್ಯ ತ್ಯಾಗ ಅಹಿಂಸೆಯೇ ನಿತ್ಯವಾದ ನಿಲುವೇ!
ತೂಗಿ ತೂಗಿ ಮರಗಳೇ
ಇಳೆಗೆ ಇಳಿದ ಮರಗಳೇ,
ನೆಲದ ಮಧುರ ಗಾನದಲ್ಲಿ
ಮೂಡಿ ಬಂದ ಸ್ವರಗಳೇ.
ಇಳೆಗೆ ಇಳಿದ ಮರಗಳೇ,
ನೆಲದ ಮಧುರ ಗಾನದಲ್ಲಿ
ಮೂಡಿ ಬಂದ ಸ್ವರಗಳೇ.
ಮಾತಾಡದೇ ದುಡಿಯುವಾ ಪ್ರೀತಿ ಪಡೆದ ಕರಗಳೇ
ಸೋತು ಬಂದ ಹಕ್ಕಿ ಹಿಂಡು ತೂಗಿಕೊಳುವ ನೆಲೆಗಳೇ
ಸಾಲು ಹಸಿರ ಮಾಲೆಯೇ ಜೀವರಸದ ನಾಲೆಯೇ
ಪ್ರೀತಿಯೆಂಬ ನೀತಿ ಹಾಡಿ ಪ್ರಕೃತಿ ಬರೆದ ಓಲೆಯೇ!
ಮಣ್ಣಿನ ತಮದಾಳವ ಸೀಳಿ ಮೇಲೆ ಬರುವಿರಿ
ಮೈ ತುಂಬ ಚಿಗುರಿನ ರೋಮಾಂಚನ ತಳೆವಿರಿ,
ಕೊಂಬೆ ಕೊಂಬೆ ಕೈಯ ಚಾಚಿ ಬನ್ನಿ ಎಂದು ಕರೆವಿರಿ
ಔದರ್ಯದ ಒಡಲಾಗಿ ಹೂವು ಹಣ್ಣು ಸುರಿವಿರಿ.
ಆಕಾಶಕೆ ತುಡಿಯುವಾ ನೆಲದಾಳದ ಕನಸೇ
ನೀಡಲೆಂದೆ ಫಲಿಸುವಾ ಋಷಿಸಮಾನ ಮನಸೇ,
ಕಡಿದರೂ ಕರುಣೆ ತೋರಿ ಚಿಗುರುವಾ ಗೆಲುವೇ
ಸತ್ಯ ತ್ಯಾಗ ಅಹಿಂಸೆಯೇ ನಿತ್ಯವಾದ ನಿಲುವೇ!
ತೂಗಿ ತೂಗಿ ಮರಗಳೇ
ಇಳೆಗೆ ಇಳಿದ ಮರಗಳೇ,
ನೆಲದ ಮಧುರ ಗಾನದಲ್ಲಿ
ಮೂಡಿ ಬಂದ ಸ್ವರಗಳೇ.
Summary
ಈ ಕವಿತೆಯಲ್ಲಿ ಮರಗಳನ್ನು ಜೀವಂತ ಮತ್ತು ಉದಾರ ಜೀವಿಗಳಂತೆ ಸಂಬೋಧಿಸಲಾಗಿದೆ. ಅವು ಮಾತಾಡದೆ ದುಡಿಯುತ್ತವೆ, ಹಕ್ಕಿಗಳಿಗೆ ಆಶ್ರಯ ನೀಡುತ್ತವೆ ಮತ್ತು ನೆಲವನ್ನು ಹಸಿರಿನಿಂದ ತುಂಬಿಸುತ್ತವೆ. ಮಣ್ಣನ್ನು ಸೀಳಿ ಮೇಲೆ ಬರುವ ಮರಗಳು ಕೊಂಬೆಗಳನ್ನು ಚಾಚಿ ಹೂವು ಮತ್ತು ಹಣ್ಣುಗಳನ್ನು ಉದಾರವಾಗಿ ನೀಡುತ್ತವೆ. ಕಡಿದರೂ ಮತ್ತೆ ಚಿಗುರುವ ಅವುಗಳ ಶಕ್ತಿ ಕರುಣೆ, ತ್ಯಾಗ ಮತ್ತು ಗೆಲುವಿನ ಸಂಕೇತವಾಗಿದೆ. ಪ್ರಕೃತಿಯ ಮೂಲಕ ಸತ್ಯ, ತ್ಯಾಗ ಮತ್ತು ಅಹಿಂಸೆಯಂತಹ ಶಾಶ್ವತ ಮೌಲ್ಯಗಳನ್ನು ಕವಿತೆ ಸಾರುತ್ತದೆ.
Author
ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ