This page features a video of the poem “ಮಳೆ ಬರಲಿ (Male Barali)”, prescribed under the Karnataka State Syllabus for 8th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಮಳೆ ಬರಲಿ.............
ಆದರೆ
ಹಸಿರು ಹೊಲ ಗದ್ದೆಗಳನ್ನೂ
ರೈತರ ಸುಖ ನಿದ್ದೆಗಳನ್ನೂ
ಕಸಿದುಕೊಳ್ಳದಿರಲಿ.
ಮಳೆ ಬರಲಿ.................
ಆದರೆ
ಹುಲ್ಲಿನ ಛಾವಣಿಗಳನ್ನೂ
ಮಣ್ಣಿನ ಗೋಡೆಗಳನ್ನೂ
ಕೆಡವಿ ಹಾಕದಿರಲಿ.
ಮಳೆ ಬರಲಿ.................
ಇರಲೊಂದು ಪುಟ್ಟ ಮನೆ
ಹೊದೆಯಲು ಬೆಚ್ಚನೆಯ
ಕಂಬಳಿ ಎಲ್ಲರಿಗೂ ಸಿಗಲಿ.
ನೊಂದ ಬಯಲುಗಳಿಗೆ
ಬೆಂದ ಬೆಟ್ಟಗಳಿಗೆ
ಬಾಯಾರಿದ ಕೆರೆ ಬಾವಿ
ಹಳ್ಳ ಕೊಳ್ಳಗಳಿಗೆ-
ಬರಲಿ ಮಳೆ ಬರಲಿ.
‘ಧೋ’ ಎಂದು ಸುರಿದು
ಹೊರಟು ನಿಂತಾಗ
ನೆಲ-ಮುಗಿಲು ನಗಲಿ
ಏಳು ಬಣ್ಣಗಳಲ್ಲಿ.
ಮಳೆ ಬರಲಿ.............
ಆದರೆ
ಹಸಿರು ಹೊಲ ಗದ್ದೆಗಳನ್ನೂ
ರೈತರ ಸುಖ ನಿದ್ದೆಗಳನ್ನೂ
ಕಸಿದುಕೊಳ್ಳದಿರಲಿ.
ಆದರೆ
ಹಸಿರು ಹೊಲ ಗದ್ದೆಗಳನ್ನೂ
ರೈತರ ಸುಖ ನಿದ್ದೆಗಳನ್ನೂ
ಕಸಿದುಕೊಳ್ಳದಿರಲಿ.
ಮಳೆ ಬರಲಿ.................
ಆದರೆ
ಹುಲ್ಲಿನ ಛಾವಣಿಗಳನ್ನೂ
ಮಣ್ಣಿನ ಗೋಡೆಗಳನ್ನೂ
ಕೆಡವಿ ಹಾಕದಿರಲಿ.
ಮಳೆ ಬರಲಿ.................
ಇರಲೊಂದು ಪುಟ್ಟ ಮನೆ
ಹೊದೆಯಲು ಬೆಚ್ಚನೆಯ
ಕಂಬಳಿ ಎಲ್ಲರಿಗೂ ಸಿಗಲಿ.
ನೊಂದ ಬಯಲುಗಳಿಗೆ
ಬೆಂದ ಬೆಟ್ಟಗಳಿಗೆ
ಬಾಯಾರಿದ ಕೆರೆ ಬಾವಿ
ಹಳ್ಳ ಕೊಳ್ಳಗಳಿಗೆ-
ಬರಲಿ ಮಳೆ ಬರಲಿ.
‘ಧೋ’ ಎಂದು ಸುರಿದು
ಹೊರಟು ನಿಂತಾಗ
ನೆಲ-ಮುಗಿಲು ನಗಲಿ
ಏಳು ಬಣ್ಣಗಳಲ್ಲಿ.
ಮಳೆ ಬರಲಿ.............
ಆದರೆ
ಹಸಿರು ಹೊಲ ಗದ್ದೆಗಳನ್ನೂ
ರೈತರ ಸುಖ ನಿದ್ದೆಗಳನ್ನೂ
ಕಸಿದುಕೊಳ್ಳದಿರಲಿ.
Summary
ಈ ಕವಿತೆ ಮಳೆಯನ್ನು ಸ್ವಾಗತಿಸುತ್ತಾ ಅದು ವಿನಾಶಕಾರಿಯಾಗಬಾರದು ಎಂದು ಪ್ರಾರ್ಥಿಸುತ್ತದೆ. ಮಳೆ ಹಸಿರು ಹೊಲಗದ್ದೆಗಳನ್ನು ಬೆಳೆಸಬೇಕು ಮತ್ತು ರೈತರ ಸುಖನಿದ್ದೆಯನ್ನು ಕಸಿದುಕೊಳ್ಳಬಾರದು. ಪುಟ್ಟ ಮನೆಗಳಲ್ಲಿರುವ ಎಲ್ಲರಿಗೂ ಆಶ್ರಯ ಮತ್ತು ಬೆಚ್ಚನೆಯ ಕಂಬಳಿ ದೊರಕಬೇಕು ಎಂಬ ಆಶಯ ವ್ಯಕ್ತವಾಗಿದೆ. ನೊಂದ ಬಯಲುಗಳು, ಬೆಂದ ಬೆಟ್ಟಗಳು, ಬಾಯಾರಿದ ಕೆರೆಬಾವಿಗಳು ಮತ್ತು ಹಳ್ಳಕೊಳ್ಳಗಳಿಗೆ ಮಳೆ ಬೇಕಾಗಿದೆ. ಧಾರಾಕಾರ ಮಳೆಯ ನಂತರ ನೆಲ ಮತ್ತು ಮುಗಿಲು ಏಳು ಬಣ್ಣಗಳಲ್ಲಿ ನಗುವ ಸುಂದರ ದೃಶ್ಯವನ್ನು ಕವಿತೆ ಕಲ್ಪಿಸುತ್ತದೆ.
Author
ಸವಿತಾ ನಾಗಭೂಷಣ