ಬೇಸಿಗೆ ರಜೆಯಲಿ

This page features a video of the poem “ಬೇಸಿಗೆ ರಜೆಯಲಿ (Besige Rajeyali)”, prescribed under the Karnataka State Syllabus for 1st Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಬೇಸಿಗೆ ರಜೆಯಲಿ
ಅಪ್ಪನ ಜೊತೆ ನಾ
ಹಳ್ಳಿಗೆ ಹೋಗುವೆನು

ಬೆವರನು ಸುರಿಸುವ
ರೈತರ ಜೊತೆಯಲಿ
ನಾನೂ ದುಡಿಯುವೆನು

ಮುಗಿಲನೆ ಮುಟ್ಟುವ
ಎತ್ತರ ದನಿಯಲಿ
ಹಾಡನು ಹೇಳುವೆನು

ಜಗದಲಿ ನಡೆದಿಹ
ಕೌತುಕ ವಿಷಯವ
ಅವರಿಗೆ ತಿಳಿಸುವೆನು

ತೋಟದಿ ಬೆಳೆದಿಹ
ಬಗೆ ಬಗೆ ಹಣ್ಣಿನ
ಸವಿಯನು ಸವಿಯುವೆನು

ಹಚ್ಚನೆ ಹಸುರಿನ
ಸುಂದರ ಸೃಷ್ಟಿಯ
ಸೊಬಗನು ಕಾಣುವೆನು!
Summary
ಈ ಹಾಡು ಬೇಸಿಗೆ ರಜೆಯಲ್ಲಿ ಹಳ್ಳಿಗೆ ಹೋಗಲು ಬಯಸುವ ಮಗುವಿನ ಸಂತೋಷದ ಯೋಜನೆಯನ್ನು ವಿವರಿಸುತ್ತದೆ. ಮಗು ಅಪ್ಪನ ಜೊತೆ ಹೋಗಿ ಶ್ರಮಿಸುವ ರೈತರೊಂದಿಗೆ ತಾನೂ ಕೆಲಸ ಮಾಡಲು ಬಯಸುತ್ತದೆ. ಅದು ಜೋರಾಗಿ ಹಾಡು ಹಾಡಿ ಜಗತ್ತಿನಲ್ಲಿ ನಡೆಯುವ ಕುತೂಹಲಕಾರಿ ವಿಷಯಗಳನ್ನು ಅವರಿಗೆ ತಿಳಿಸಲು ಇಚ್ಛಿಸುತ್ತದೆ. ತೋಟದಲ್ಲಿ ಬೆಳೆದ ವಿವಿಧ ಹಣ್ಣುಗಳನ್ನು ಸವಿಯುವ ಸಂತೋಷವನ್ನೂ ಹಾಡು ವ್ಯಕ್ತಪಡಿಸುತ್ತದೆ. ಹಚ್ಚ ಹಸುರಿನ ಸೊಬಗು ಮತ್ತು ಪ್ರಕೃತಿಯ ಸುಂದರ ಸೃಷ್ಟಿಯನ್ನು ನೋಡುವ ಆಸೆಯನ್ನೂ ಇದು ತೋರಿಸುತ್ತದೆ. ಒಟ್ಟಿನಲ್ಲಿ, ಹಳ್ಳಿಯ ಜೀವನ, ದುಡಿಮೆ, ಕಲಿಕೆ ಮತ್ತು ಪ್ರಕೃತಿಯ ಸೌಂದರ್ಯವನ್ನು ಆನಂದಿಸಲು ಮಕ್ಕಳನ್ನು ಪ್ರೋತ್ಸಾಹಿಸುವ ಹಾಡು ಇದಾಗಿದೆ.
Author
ಕವಿ: ವಿದ್ಯಾಸಾಗರ ಕುಕ್ಕುಂದಾ