This page features a video of the poem “ಚಂದಿರನೇತಕೆ ಓಡುವನಮ್ಮ (Chandiranetake Oduvanamma)”, prescribed under the Karnataka State Syllabus for 1st Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಚಂದಿರನೇತಕೆ ಓಡುವನಮ್ಮ
ಮೋಡಕೆ ಹೆದರಿಹನೇ
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೇ
ಹಿಂಜಿದ ಅರಳೆಯು ಗಾಳಿಗೆ
ಹಾರಿ ಮೋಡಗಳಾಗಿಹವೇ
ಅರಳಯ ಮುತ್ತಿ ಮೈಯನು ಸುತ್ತಿ
ಚಂದ್ರನ ಬಿಗೆಯುವವೆ?
ಮಂಜಿನ ಗಡ್ಡೆಯ ಮೋಡವು ಕರಗಲು
ಚಂದಿರ ನಗುತಿಹನು
ಕರಗಿದ ಮೋಡದ ಸೆರೆಯನು ಹರಿಯುತ
ಬಾನಲಿ ತೇಲುವನು
ಚಂದಿರನೆನ್ನಯ ಗೆಳೆಯನು
ಅಮ್ಮಾ ನನ್ನೊಡನಾಡುವನು
ನಾನೂ ಓಡಲು ತಾನೂ ಓಡುವ
ಚೆನ್ನಿಗ ಚಂದಿರನು
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ.
ಮೋಡಕೆ ಹೆದರಿಹನೇ
ಬೆಳ್ಳಿಯ ಮೋಡದ ಅಲೆಗಳ ಕಂಡು
ಚಂದಿರ ಬೆದರಿಹನೇ
ಹಿಂಜಿದ ಅರಳೆಯು ಗಾಳಿಗೆ
ಹಾರಿ ಮೋಡಗಳಾಗಿಹವೇ
ಅರಳಯ ಮುತ್ತಿ ಮೈಯನು ಸುತ್ತಿ
ಚಂದ್ರನ ಬಿಗೆಯುವವೆ?
ಮಂಜಿನ ಗಡ್ಡೆಯ ಮೋಡವು ಕರಗಲು
ಚಂದಿರ ನಗುತಿಹನು
ಕರಗಿದ ಮೋಡದ ಸೆರೆಯನು ಹರಿಯುತ
ಬಾನಲಿ ತೇಲುವನು
ಚಂದಿರನೆನ್ನಯ ಗೆಳೆಯನು
ಅಮ್ಮಾ ನನ್ನೊಡನಾಡುವನು
ನಾನೂ ಓಡಲು ತಾನೂ ಓಡುವ
ಚೆನ್ನಿಗ ಚಂದಿರನು
ಬಾ ಬಾ ಚಂದಿರ ಬೆಳ್ಳಿಯ ಚಂದಿರ
ನಮ್ಮಯ ಮನೆಗೀಗ
ನಿನ್ನಯ ಬೆಳಕನು ಎಲ್ಲೆಡೆ ಚೆಲ್ಲಿ
ಮನವನು ಬೆಳಗೀಗ.
Summary
ಈ ಹಾಡು ಚಂದ್ರ ಮತ್ತು ಮೋಡಗಳ ಬಗ್ಗೆ ಮಗುವಿನ ಕಲ್ಪನಾತ್ಮಕ ಸಂಭಾಷಣೆಯನ್ನು ಚಿತ್ರಿಸುತ್ತದೆ. ಚಂದ್ರನು ಏಕೆ ಓಡುತ್ತಾನೆ ಮತ್ತು ಅವನು ಮೋಡಗಳಿಗೆ ಹೆದರುತ್ತಾನೆಯೇ ಎಂದು ಮಗು ಆಶ್ಚರ್ಯಪಡುತ್ತದೆ. ಆಕಾಶದಲ್ಲಿ ಚಲಿಸುವ ಮೋಡಗಳನ್ನು ಮೃದುವಾದ ಹತ್ತಿಯಂತಿರುವ ಆಕಾರಗಳಿಗೆ ಹೋಲಿಸಲಾಗಿದೆ. ಮೋಡಗಳು ಕರಗಿದಾಗ ಚಂದ್ರನು ನಗುತ್ತಾ ಆಕಾಶದಲ್ಲಿ ಸ್ವತಂತ್ರವಾಗಿ ತೇಲುತ್ತಿರುವಂತೆ ಕಾಣುತ್ತಾನೆ. ಮಗು ಚಂದ್ರನನ್ನು ತನ್ನ ಸ್ನೇಹಿತನಾಗಿ ಭಾವಿಸಿ, ತಾನು ಓಡಿದಾಗ ಚಂದ್ರನೂ ಓಡುತ್ತಾನೆ ಎಂದು ಕಲ್ಪಿಸುತ್ತದೆ. ಒಟ್ಟಿನಲ್ಲಿ, ಮಗುವಿನ ಆಟದಂತಹ ದೃಷ್ಟಿಕೋನದ ಮೂಲಕ ಚಂದ್ರ, ಮೋಡ, ಬೆಳಕು ಮತ್ತು ಆಕಾಶವನ್ನು ಪರಿಚಯಿಸಿ ಕಲ್ಪನಾಶಕ್ತಿಯನ್ನು ಬೆಳೆಸುವ ಹಾಡು ಇದಾಗಿದೆ.
Author
ನೀ.ರೇ. ಹಿರೇಮಠ