ಮೊಲದ ಮರಿ

This page features a video of the poem “ಮೊಲದ ಮರಿ (Molada Mari)”, prescribed under the Karnataka State Syllabus for 1st Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಮೊಲದ ಮರಿ ಮೊಲದ ಮರಿ
ಆಡ ಬಾರೆ
ಚುಪುಕೆ ಚುಪುಕೆ ಚುಪುಕೆ ಚುಪುಕೆ
ನೆಗೆದು ಬಾರೆ

ಪೊದರಿನಿಂದ ಪೊದರ ಬಳಿಗೆ
ನಿನ್ನ ಆಟ
ಗಿಡದ ಚಿಗುರು ನಿತ್ಯ ನಿನಗೆ
ಸೊಗಸಿನೂಟ


ಗಿಡ್ಡ ಬಾಲ ದೊಡ್ಡ ಕಿವಿಯು
ನಿನಗೆ ಚಂದಾ
ಎದ್ದು ಎನ್ನ ಬಳಿಗೆ ಬಂದು
ಆಡೊ ಕಂದಾ


ಮುದ್ದು ಮುದ್ದು ಮಾತುಗಳನು
ನಿನಗೆ ಕಲಿಸುವೇ
ಮುದ್ದು ಮಾಡಿ ಪ್ರೀತಿಯಿಂದ
ನಿನ್ನ ಸಲಹುವೇ
Summary
ಈ ಹಾಡು ಪುಟ್ಟ ಮೊಲವನ್ನು ಬಂದು ಆಟವಾಡುವಂತೆ ಆಹ್ವಾನಿಸುವ ಆಟದಂತಿರುವ ಹಾಡಾಗಿದೆ. ಮೊಲವು ಒಂದು ಪೊದೆಯಿಂದ ಮತ್ತೊಂದು ಪೊದೆಯ ಕಡೆಗೆ ಚುಪುಚುಪಾಗಿ ನೆಗೆಯುತ್ತಾ ಆಟವಾಡುವುದನ್ನು ವಿವರಿಸಲಾಗಿದೆ. ಗಿಡಗಳ ಚಿಗುರುಗಳು ಅದರ ಪ್ರತಿದಿನದ ಸೊಗಸಾದ ಆಹಾರವೆಂದು ಹೇಳಲಾಗಿದೆ. ಅದರ ಗಿಡ್ಡ ಬಾಲ ಮತ್ತು ದೊಡ್ಡ ಕಿವಿಗಳು ಬಹಳ ಮುದ್ದಾಗಿ ಕಾಣುತ್ತವೆ ಎಂದು ಹಾಡು ತಿಳಿಸುತ್ತದೆ. ಮಗು ಮೊಲವನ್ನು ಪ್ರೀತಿಯಿಂದ ತನ್ನ ಬಳಿಗೆ ಬಂದು ಆಟವಾಡುವಂತೆ ಕರೆಯುತ್ತದೆ ಮತ್ತು ಮುದ್ದಾದ ಮಾತುಗಳನ್ನು ಕಲಿಸುವುದಾಗಿ ಹೇಳುತ್ತದೆ. ಒಟ್ಟಿನಲ್ಲಿ, ಮೊಲದ ಮೇಲಿನ ಪ್ರೀತಿ ಮತ್ತು ಕಾಳಜಿಯನ್ನು ವ್ಯಕ್ತಪಡಿಸುತ್ತಾ ಆಟ, ಪ್ರಕೃತಿ ಮತ್ತು ಮಮತೆಯ ಸುಂದರ ಚಿತ್ರಣವನ್ನು ನೀಡುತ್ತದೆ.
Author
ಕವಿ: ಕೆಮ್ಮೂರು ದೊಡ್ಡಣ್ಣ ಶೆಟ್ಟಿ