ವಂದನೆ

This page features a video of the poem “ವಂದನೆ (Vandane)”, prescribed under the Karnataka State Syllabus for 1st Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ನವಮಾಸ ಹೊತ್ತು ನನ್ನನು ಹೆತ್ತು
ಸಾಕಿದ ತಾಯಿಗೆ ವಂದನೆ

ಮೈಮುರಿ ದುಡಿದು ನನ್ನನು ಸಲುಹಿ
ಬೆಳೆಸಿದ ತಂದೆಗೆ ವಂದನೆ

ವಿದ್ಯಾ ಬುದ್ಧಿ ಬಾಲ್ಯದಿ ಕಲಿಸಿ
ಹರಸಿದ ಗುರುವಿಗೆ ವಂದನೆ

ಬಗೆ ಬಗೆ ರೋಗವ ವಾಸಿ ಮಾಡುವ
ವೈದ್ಯೆಗೆ ಮಾಡುವೆ ವಂದನೆ

ನಿತ್ಯದಿ ದುಡಿದು ಅನ್ನವ ನೀಡುವ
ರೈತಗೆ ಮಾಡುವೆ ವಂದನೆ

ನಾಡಿನ ರಕ್ಷಣೆ ನಿತ್ಯದಿ ಮಾಡುವ
ಯೋಧಗೆ ಮಾಡುವೆ ವಂದನೆ
Summary
ಈ ಹಾಡು ಮಗುವಿನ ಜೀವನಕ್ಕೆ ಬೆಂಬಲ ನೀಡುವ ಮಹತ್ವದ ವ್ಯಕ್ತಿಗಳಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ಮೊದಲಿಗೆ ಮಗುವನ್ನು ಒಂಬತ್ತು ತಿಂಗಳು ಹೊತ್ತು, ಸಾಕಿ ಬೆಳೆಸಿದ ತಾಯಿಗೆ ವಂದನೆ ಸಲ್ಲಿಸುತ್ತದೆ. ನಂತರ ಕಷ್ಟಪಟ್ಟು ದುಡಿದು ಮಗುವನ್ನು ಬೆಳೆಸಿದ ತಂದೆಯನ್ನು ಗೌರವಿಸುತ್ತದೆ. ಗುರು, ವೈದ್ಯ, ರೈತ ಮತ್ತು ಯೋಧರು ಸಮಾಜಕ್ಕೆ ನೀಡುವ ಅಮೂಲ್ಯ ಸೇವೆಗಳನ್ನೂ ಹಾಡು ಸ್ಮರಿಸುತ್ತದೆ. ಪ್ರತಿಯೊಬ್ಬರೂ ಮಾಡುವ ವಿಭಿನ್ನ ಸೇವೆಗೆ ಗೌರವ ಮತ್ತು ಕೃತಜ್ಞತೆ ಸಲ್ಲಿಸಲಾಗಿದೆ. ಒಟ್ಟಿನಲ್ಲಿ, ನಮಗೆ ಸಹಾಯ ಮಾಡುವ ಮತ್ತು ರಕ್ಷಿಸುವ ಎಲ್ಲರನ್ನು ಗೌರವಿಸಿ ಕೃತಜ್ಞರಾಗಿರಬೇಕು ಎಂಬ ಮೌಲ್ಯವನ್ನು ಮಕ್ಕಳಿಗೆ ಕಲಿಸುತ್ತದೆ.
Author
ಕವಿ: ಎಲ್. ಕೆ. ಕಂಬಾರ