This page features a video of the poem “ಗಿಡ ಬೆಳಸಿ ಜೀವ ಉಳಿಸಿ (Gida Belasi Jiva Ulisi)”, prescribed under the Karnataka State Syllabus for 6th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಬಾ ಗೆಳತಿ ಹೋಗುವ
ಗಿಡ ತಂದು ನೆಡುವ
ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಿ
ನೀರು ಗೊಬ್ಬರ ಹಾಕಿ ಗಿಡ ಬೆಳೆಸಿ ಜೀವ ಉಳಿಸು
ಕಾಂಕ್ರೀಟು ಇಟ್ಟಿಗೆಯ ಮಹಲು ಬೇಡ
ಓಡಾಡಲು ಮೋಟಾರು ಕಾರು ಬೇಡ
ಗಿಡ ಮರವೆಲ್ಲಾ ಕಡಿದು ರಸ್ತೆ ಮಾಡುವುದು ಬೇಡ
ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ
ಮಳೆಯಿಲ್ಲಾ ಬೆಳೆಯಿಲ್ಲಾ
ಊರ ತುಂಬೆಲ್ಲ ಬರಗಾಲ
ಹಸಿದ ಕಂದನ ತುಟಿಗೆ ಹಾಲಿಲ್ಲಾ
ತಾಯಿ ಹಾಲಿಗೂ ನಂಜೇರಿದೆ
ಬಾ ಗೆಳತಿ ಗಿಡ ಬೆಳೆÀಸಿ ಜೀವ ಉಳಿಸುವ
ತುತ್ತನರಸಿ ಎತ್ತಲೋ
ಗುಳೇ ಹೊರಟಿದ್ದಾರೆ ನನ್ನವರು
ಗುಳಿ ಬಿದ್ದ ಕಣ್ಣುಗಳಲ್ಲಿ ನಿರಾಸೆ ಜಿನುಗಿದೆ
ಹೊಸ ಭರವಸೆಯ ಚಿಗುರಿಸು
ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ.
ಹೊಸ ಭರವಸೆಯ ಚಿಗುರಿಸು
ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ.
ಗಿಡ ತಂದು ನೆಡುವ
ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡಿ
ನೀರು ಗೊಬ್ಬರ ಹಾಕಿ ಗಿಡ ಬೆಳೆಸಿ ಜೀವ ಉಳಿಸು
ಕಾಂಕ್ರೀಟು ಇಟ್ಟಿಗೆಯ ಮಹಲು ಬೇಡ
ಓಡಾಡಲು ಮೋಟಾರು ಕಾರು ಬೇಡ
ಗಿಡ ಮರವೆಲ್ಲಾ ಕಡಿದು ರಸ್ತೆ ಮಾಡುವುದು ಬೇಡ
ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ
ಮಳೆಯಿಲ್ಲಾ ಬೆಳೆಯಿಲ್ಲಾ
ಊರ ತುಂಬೆಲ್ಲ ಬರಗಾಲ
ಹಸಿದ ಕಂದನ ತುಟಿಗೆ ಹಾಲಿಲ್ಲಾ
ತಾಯಿ ಹಾಲಿಗೂ ನಂಜೇರಿದೆ
ಬಾ ಗೆಳತಿ ಗಿಡ ಬೆಳೆÀಸಿ ಜೀವ ಉಳಿಸುವ
ತುತ್ತನರಸಿ ಎತ್ತಲೋ
ಗುಳೇ ಹೊರಟಿದ್ದಾರೆ ನನ್ನವರು
ಗುಳಿ ಬಿದ್ದ ಕಣ್ಣುಗಳಲ್ಲಿ ನಿರಾಸೆ ಜಿನುಗಿದೆ
ಹೊಸ ಭರವಸೆಯ ಚಿಗುರಿಸು
ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ.
ಹೊಸ ಭರವಸೆಯ ಚಿಗುರಿಸು
ಬಾ ಗೆಳತಿ ಗಿಡ ಬೆಳೆಸಿ ಜೀವ ಉಳಿಸುವ.
Summary
ಈ ಪರಿಸರ ಕವಿತೆ ಮರಗಳನ್ನು ನೆಟ್ಟು ರಕ್ಷಿಸುವಂತೆ ಜನರನ್ನು ಪ್ರೇರೇಪಿಸುತ್ತದೆ. ಅರಣ್ಯನಾಶವನ್ನು ಬರಗಾಲ,
ಬೆಳೆನಾಶ, ಹಸಿವು, ವಲಸೆ ಮತ್ತು ಭರವಸೆಯ ಕೊರತೆಯೊಂದಿಗೆ ಸಂಪರ್ಕಿಸುತ್ತದೆ. ಕಾಂಕ್ರೀಟ್ ಕಟ್ಟಡಗಳು,
ವಾಹನಗಳು ಮತ್ತು ಹಸಿರನ್ನು ನಾಶಮಾಡುವ ರಸ್ತೆಗಳಿಗೆ ಅತಿಯಾದ ಅವಲಂಬನೆಯನ್ನು ತಿರಸ್ಕರಿಸುತ್ತದೆ. ಸಸಿಗಳನ್ನು
ನೆಡುವುದನ್ನು ಜೀವ ರಕ್ಷಿಸುವ ಮತ್ತು ಭರವಸೆಯನ್ನು ಮರಳಿ ತರುವ ಕಾರ್ಯವೆಂದು ಚಿತ್ರಿಸುತ್ತದೆ. ವೈಯಕ್ತಿಕ
ಕ್ರಮದ ಜೊತೆಗೆ ಸಮೂಹ ಜವಾಬ್ದಾರಿಯೂ ಅಗತ್ಯವೆಂದು ಕವಿತೆ ಹೇಳುತ್ತದೆ.
ಬೆಳೆನಾಶ, ಹಸಿವು, ವಲಸೆ ಮತ್ತು ಭರವಸೆಯ ಕೊರತೆಯೊಂದಿಗೆ ಸಂಪರ್ಕಿಸುತ್ತದೆ. ಕಾಂಕ್ರೀಟ್ ಕಟ್ಟಡಗಳು,
ವಾಹನಗಳು ಮತ್ತು ಹಸಿರನ್ನು ನಾಶಮಾಡುವ ರಸ್ತೆಗಳಿಗೆ ಅತಿಯಾದ ಅವಲಂಬನೆಯನ್ನು ತಿರಸ್ಕರಿಸುತ್ತದೆ. ಸಸಿಗಳನ್ನು
ನೆಡುವುದನ್ನು ಜೀವ ರಕ್ಷಿಸುವ ಮತ್ತು ಭರವಸೆಯನ್ನು ಮರಳಿ ತರುವ ಕಾರ್ಯವೆಂದು ಚಿತ್ರಿಸುತ್ತದೆ. ವೈಯಕ್ತಿಕ
ಕ್ರಮದ ಜೊತೆಗೆ ಸಮೂಹ ಜವಾಬ್ದಾರಿಯೂ ಅಗತ್ಯವೆಂದು ಕವಿತೆ ಹೇಳುತ್ತದೆ.
Author
ರೇಣುಕಾ ಎಚ್.