This page features a video of the poem “ಸುಂಟರಗಾಳಿ (Suntaragali)”, prescribed under the Karnataka State Syllabus for 6th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಏನಿದು ಧೂಳಿ? ಓಹೋ ಗಾಳಿ!
ತರ್ರನೆ ಬಂತೈ ಸುಂಟರಗಾಳಿ ||ಪ||
ತೆಂಗಿನ ಮರಗಳು, ಕಂಗಿನ ಮರಗಳು
ಬಾಳೆಯು ತಾಳೆಯು ಮಾವು ಹಲಸುಗಳು
ಎಲ್ಲಾ ತೂಗಿವೆ, ತಲೆಗಳು ಬಾಗಿವೆ!
ಏನಿದು ಧೂಳಿ? ಓಹೋ ಗಾಳಿ
ಸುಳಿಯುತ ಬಂತೈ ಸುಂಟರಗಾಳಿ|
ಕಣ್ಣು ಮುಚ್ಚುತ ಬಾಲವನೆತ್ತಿ!
ದನ ಓಡುತ್ತಿದೆ ಎತ್ತಲೊ ಸುತ್ತಿ!
‘ಅಂಬಾ’ ಎನುತ ಕರು ಬೆಂಬತ್ತಿ
ಏನಿದು ಧೂಳಿ?
ಹೋಯಿತು ಹೆಂಚು! ಹಾರಿತು ಹುಲ್ಲು!
ಬೊಬ್ಬೆಯ ಬೊಬ್ಬೆಯ ಭಯವೆಲ್ಲೆಲ್ಲು
ಕೇಳುವರಾರೀ ಮಂದಿಯ ಗುಲ್ಲು
ಏನಿದು ಧೂಳಿ?
ಏನಿದು ಕೋಪ? ಯಾರಲಿ ಶಾಪ?
ಓಹೋ, ಹೆಚ್ಚಿತೆ ಭೂಮಿಯ ತಾಪ?
ತಡೆಯುವರುಂಟೆ? ಅಯ್ಯೋ ಪಾಪ!
ಏನಿದು ಧೂಳಿ?
ಬಾನಿನ ಬಯಲಿಂದಿಳಿಯುತ ಬಂತೋ?
ಪಾತಾಳದ ಹೊಟ್ಟೆಯೊಳಗಡಗಿತ್ತೋ
ಕಡಲು ಕಡೆಯುತಲಿದೆ ಹುಟ್ಟಿತೋ?
ಏನಿದು ಧೂಳಿ? ಓಹೋ ಗಾಳಿ!
ಸುಳಿಯುತ ಬಂತೈ ಸುಂಟರಗಾಳಿ!
ತರ್ರನೆ ಬಂತೈ ಸುಂಟರಗಾಳಿ ||ಪ||
ತೆಂಗಿನ ಮರಗಳು, ಕಂಗಿನ ಮರಗಳು
ಬಾಳೆಯು ತಾಳೆಯು ಮಾವು ಹಲಸುಗಳು
ಎಲ್ಲಾ ತೂಗಿವೆ, ತಲೆಗಳು ಬಾಗಿವೆ!
ಏನಿದು ಧೂಳಿ? ಓಹೋ ಗಾಳಿ
ಸುಳಿಯುತ ಬಂತೈ ಸುಂಟರಗಾಳಿ|
ಕಣ್ಣು ಮುಚ್ಚುತ ಬಾಲವನೆತ್ತಿ!
ದನ ಓಡುತ್ತಿದೆ ಎತ್ತಲೊ ಸುತ್ತಿ!
‘ಅಂಬಾ’ ಎನುತ ಕರು ಬೆಂಬತ್ತಿ
ಏನಿದು ಧೂಳಿ?
ಹೋಯಿತು ಹೆಂಚು! ಹಾರಿತು ಹುಲ್ಲು!
ಬೊಬ್ಬೆಯ ಬೊಬ್ಬೆಯ ಭಯವೆಲ್ಲೆಲ್ಲು
ಕೇಳುವರಾರೀ ಮಂದಿಯ ಗುಲ್ಲು
ಏನಿದು ಧೂಳಿ?
ಏನಿದು ಕೋಪ? ಯಾರಲಿ ಶಾಪ?
ಓಹೋ, ಹೆಚ್ಚಿತೆ ಭೂಮಿಯ ತಾಪ?
ತಡೆಯುವರುಂಟೆ? ಅಯ್ಯೋ ಪಾಪ!
ಏನಿದು ಧೂಳಿ?
ಬಾನಿನ ಬಯಲಿಂದಿಳಿಯುತ ಬಂತೋ?
ಪಾತಾಳದ ಹೊಟ್ಟೆಯೊಳಗಡಗಿತ್ತೋ
ಕಡಲು ಕಡೆಯುತಲಿದೆ ಹುಟ್ಟಿತೋ?
ಏನಿದು ಧೂಳಿ? ಓಹೋ ಗಾಳಿ!
ಸುಳಿಯುತ ಬಂತೈ ಸುಂಟರಗಾಳಿ!
Summary
ಈ ಕವಿತೆ ಏಕಾಏಕಿ ಬೀಸುವ ಸುಂಟರಗಾಳಿಯನ್ನು ಜೀವಂತವಾಗಿ ಚಿತ್ರಿಸುತ್ತದೆ. ಮರಗಳು ಬಾಗುವುದು, ಧೂಳು
ಸುಳಿಯುವುದು, ಪ್ರಾಣಿಗಳು ಓಡುವುದು ಮತ್ತು ಹೆಂಚು-ಹುಲ್ಲು ಹಾರಿ ಹೋಗುವುದನ್ನು ತೋರಿಸುತ್ತದೆ.
ಬಿರುಗಾಳಿ ಎಲ್ಲಿಂದ ಬಂತು ಎಂಬ ಪುನರಾವರ್ತಿತ ಪ್ರಶ್ನೆಗಳು ಆಶ್ಚರ್ಯ ಮತ್ತು ಭಯವನ್ನು ಮೂಡಿಸುತ್ತವೆ. ಶಬ್ದ
ಮತ್ತು ಚಲನೆಯ ಮೂಲಕ ಬಿರುಗಾಳಿಯ ಅನುಭವವನ್ನು ಕವಿತೆ ತೀವ್ರಗೊಳಿಸುತ್ತದೆ. ಪ್ರಕೃತಿಯ ವಿನಾಶಕಾರಿ ಶಕ್ತಿ
ಮತ್ತು ನಾಟಕೀಯ ಸೌಂದರ್ಯ ಎರಡನ್ನೂ ಇದು ಹಿಡಿದಿಡುತ್ತದೆ.
ಸುಳಿಯುವುದು, ಪ್ರಾಣಿಗಳು ಓಡುವುದು ಮತ್ತು ಹೆಂಚು-ಹುಲ್ಲು ಹಾರಿ ಹೋಗುವುದನ್ನು ತೋರಿಸುತ್ತದೆ.
ಬಿರುಗಾಳಿ ಎಲ್ಲಿಂದ ಬಂತು ಎಂಬ ಪುನರಾವರ್ತಿತ ಪ್ರಶ್ನೆಗಳು ಆಶ್ಚರ್ಯ ಮತ್ತು ಭಯವನ್ನು ಮೂಡಿಸುತ್ತವೆ. ಶಬ್ದ
ಮತ್ತು ಚಲನೆಯ ಮೂಲಕ ಬಿರುಗಾಳಿಯ ಅನುಭವವನ್ನು ಕವಿತೆ ತೀವ್ರಗೊಳಿಸುತ್ತದೆ. ಪ್ರಕೃತಿಯ ವಿನಾಶಕಾರಿ ಶಕ್ತಿ
ಮತ್ತು ನಾಟಕೀಯ ಸೌಂದರ್ಯ ಎರಡನ್ನೂ ಇದು ಹಿಡಿದಿಡುತ್ತದೆ.
Author
ಕಯ್ಯಾರ ಕಿಞ್ಞಣ್ಣರೈ