This page features a video of the poem “ನಮ್ಮೂರ ಕೆರೆ (Nammura Kere)”, prescribed under the Karnataka State Syllabus for 6th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ಕೆರೆಯ ದಾರಿಯಲೆಲ್ಲ ತಂಪು ತಂಬೆಲರು
ಏರಿಯ ಸುತ್ತೆಲ್ಲ ಕಾವಲಿನ ಮರಸಾಲು
ಒಂದೊಂದು ಮರದಲ್ಲಿ ಹತ್ತಾರು ಟೊಂಗೆಗಳು
ಹತ್ತಾರು ಟೊಂಗೆಯಲಿ ನೂರಾರು ಹಕ್ಕಿಗಳು
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ಬೆಳ್ಳಿ ತಟ್ಟೆಯ ಹಾಗೆ ಹೊಳೆ ಹೊಳೆವ ನೀರು
ಮಿಂಚುಬಳ್ಳಿಯ ಹಾಗೆ ಥಳಥಳಿಪ ಮೀನು
ಕಪ್ಪೆಗಳ ವಟವಟರು, ಸುತ್ತ ಮೇಯುವ ಟಗರು
ದನಗಾಹಿಯ ಹಾಡಿಗೆ ತಲೆದೂಗುವಾ ಪೈರು
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ಕಾರ್ಖಾನೆಗಳು ಬಂದು, ಜನಸಂಖ್ಯೆ ಬೆಳೆದು
ಗಟಾರದ ಕೊಳೆಯೆಲ್ಲ ಕೆರೆಯೊಳಗೆ ಬೆರೆತು
ಭೂತಾಯ ಎದೆ ತುಂಬ ಕೊಳವೆಬಾವಿಯ ಕೊರೆದು
ನೀರಸೆಲೆಯೂ ಬತ್ತಿಹುದು, ಕೆರೆ ಒಡಲು ಬಿರಿದು
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ಊರ ಜನರು ಸಭೆಯ ಸೇರಿ ಒಮ್ಮತಕೆ ಬರಲು
ಹೊಗೆ ಬೆಂಕಿ ಕಾರ್ಖಾನೆಯ ಊರಾಚೆ ಇಡಲು
ಮನೆಗೆರಡು ಮರ, ಕೆರೆ ಸುತ್ತ ಬನ ನೆಡಲು
ಪ್ಲಾಸ್ಟಿಕಿನ ಬಳಕೆಗೆ ವಿದಾಯವ ಹೇಳಲು
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ನಮ್ಮೂರ ನೆಲವೀಗ ಜಲನಿಧಿಯ ಆಗರವು
ಮರಗಳಲಿ ಮತ್ತೀಗ ಹಸಿರು ಹಕ್ಕಿಯ ಹಾಡು
ಉಪ್ಪು ತಿಂದವ ನೀರು ಕುಡಿಯಲೇ ಬೇಕಲ್ಲ
ತಪ್ಪು ಮಾಡಿದ ನಾವೇ ಸರಿಪಡಿಸಬೇಕಲ್ಲ
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ಕೆರೆಯ ದಾರಿಯಲೆಲ್ಲ ತಂಪು ತಂಬೆಲರು
ಏರಿಯ ಸುತ್ತೆಲ್ಲ ಕಾವಲಿನ ಮರಸಾಲು
ಒಂದೊಂದು ಮರದಲ್ಲಿ ಹತ್ತಾರು ಟೊಂಗೆಗಳು
ಹತ್ತಾರು ಟೊಂಗೆಯಲಿ ನೂರಾರು ಹಕ್ಕಿಗಳು
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ಬೆಳ್ಳಿ ತಟ್ಟೆಯ ಹಾಗೆ ಹೊಳೆ ಹೊಳೆವ ನೀರು
ಮಿಂಚುಬಳ್ಳಿಯ ಹಾಗೆ ಥಳಥಳಿಪ ಮೀನು
ಕಪ್ಪೆಗಳ ವಟವಟರು, ಸುತ್ತ ಮೇಯುವ ಟಗರು
ದನಗಾಹಿಯ ಹಾಡಿಗೆ ತಲೆದೂಗುವಾ ಪೈರು
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ಕಾರ್ಖಾನೆಗಳು ಬಂದು, ಜನಸಂಖ್ಯೆ ಬೆಳೆದು
ಗಟಾರದ ಕೊಳೆಯೆಲ್ಲ ಕೆರೆಯೊಳಗೆ ಬೆರೆತು
ಭೂತಾಯ ಎದೆ ತುಂಬ ಕೊಳವೆಬಾವಿಯ ಕೊರೆದು
ನೀರಸೆಲೆಯೂ ಬತ್ತಿಹುದು, ಕೆರೆ ಒಡಲು ಬಿರಿದು
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ಊರ ಜನರು ಸಭೆಯ ಸೇರಿ ಒಮ್ಮತಕೆ ಬರಲು
ಹೊಗೆ ಬೆಂಕಿ ಕಾರ್ಖಾನೆಯ ಊರಾಚೆ ಇಡಲು
ಮನೆಗೆರಡು ಮರ, ಕೆರೆ ಸುತ್ತ ಬನ ನೆಡಲು
ಪ್ಲಾಸ್ಟಿಕಿನ ಬಳಕೆಗೆ ವಿದಾಯವ ಹೇಳಲು
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
ನಮ್ಮೂರ ನೆಲವೀಗ ಜಲನಿಧಿಯ ಆಗರವು
ಮರಗಳಲಿ ಮತ್ತೀಗ ಹಸಿರು ಹಕ್ಕಿಯ ಹಾಡು
ಉಪ್ಪು ತಿಂದವ ನೀರು ಕುಡಿಯಲೇ ಬೇಕಲ್ಲ
ತಪ್ಪು ಮಾಡಿದ ನಾವೇ ಸರಿಪಡಿಸಬೇಕಲ್ಲ
ಸುತ್ತ ಹತ್ತೂರಲ್ಲಿ ಮುತ್ತಂತೆ ನಮ್ಮ ಕೆರೆ
ಅದರ ಉಳಿವಿನ ಕಥೆಯ ಕೇಳಿರೆಲ್ಲ
Summary
ಈ ಕವಿತೆ ಊರಿನ ಕೆರೆಯ ಕಥೆ ಮತ್ತು ಅದನ್ನು ಉಳಿಸಲು ಸಮುದಾಯ ಮಾಡಿದ ಪ್ರಯತ್ನವನ್ನು ಹೇಳುತ್ತದೆ. ಕೆರೆಯನ್ನು
ನೀರು, ನೆರಳು, ಹಕ್ಕಿಗಳು, ಮೀನುಗಳು, ಪೈರುಗಳು ಮತ್ತು ಗ್ರಾಮಜೀವನದ ಸುಂದರ ಮೂಲವಾಗಿ ಮೊದಲು
ವರ್ಣಿಸುತ್ತದೆ. ನಂತರ ಮಾಲಿನ್ಯ, ಕಾರ್ಖಾನೆಗಳು, ಜನಸಂಖ್ಯೆ ಮತ್ತು ಅತಿಯಾದ ಭೂಗರ್ಭಜಲ ಬಳಕೆ ಕೆರೆಗೆ ಅಪಾಯ
ಉಂಟುಮಾಡುತ್ತವೆ. ಊರಿನ ಜನರು ಒಂದಾಗಿ ಮಾಲಿನ್ಯಕಾರಕ ಕಾರ್ಖಾನೆಗಳನ್ನು ದೂರವಿಟ್ಟು, ಮರಗಳನ್ನು ನೆಟ್ಟು,
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ನಿರ್ಧರಿಸುತ್ತಾರೆ. ಪುನರುಜ್ಜೀವಿತ ಕೆರೆ ಪರಿಸರ ಹಾನಿಯನ್ನು ಸರಿಪಡಿಸುವ
ಜವಾಬ್ದಾರಿ ಸಮುದಾಯದ್ದೇ ಎಂಬ ಪಾಠ ಕಲಿಸುತ್ತದೆ.
ನೀರು, ನೆರಳು, ಹಕ್ಕಿಗಳು, ಮೀನುಗಳು, ಪೈರುಗಳು ಮತ್ತು ಗ್ರಾಮಜೀವನದ ಸುಂದರ ಮೂಲವಾಗಿ ಮೊದಲು
ವರ್ಣಿಸುತ್ತದೆ. ನಂತರ ಮಾಲಿನ್ಯ, ಕಾರ್ಖಾನೆಗಳು, ಜನಸಂಖ್ಯೆ ಮತ್ತು ಅತಿಯಾದ ಭೂಗರ್ಭಜಲ ಬಳಕೆ ಕೆರೆಗೆ ಅಪಾಯ
ಉಂಟುಮಾಡುತ್ತವೆ. ಊರಿನ ಜನರು ಒಂದಾಗಿ ಮಾಲಿನ್ಯಕಾರಕ ಕಾರ್ಖಾನೆಗಳನ್ನು ದೂರವಿಟ್ಟು, ಮರಗಳನ್ನು ನೆಟ್ಟು,
ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಲು ನಿರ್ಧರಿಸುತ್ತಾರೆ. ಪುನರುಜ್ಜೀವಿತ ಕೆರೆ ಪರಿಸರ ಹಾನಿಯನ್ನು ಸರಿಪಡಿಸುವ
ಜವಾಬ್ದಾರಿ ಸಮುದಾಯದ್ದೇ ಎಂಬ ಪಾಠ ಕಲಿಸುತ್ತದೆ.
Author
ಚಿದಾನಂದ ಸಾಲಿ