ತಾಯಿಯ ನೆನಪು

This page features a video of the poem “ತಾಯಿಯ ನೆನಪು (Tayiya Nenapu)”, prescribed under the Karnataka State Syllabus for 6th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಅಮ್ಮನ ಬೆಚ್ಚಗಿನ ಮಡಿಲಲ್ಲಿ ಮಲಗಿದ್ದು
ಎದೆ ಹಾಲು ಕುಡಿದು ತೊಡೆಯೇರಿ ಕುಣಿದಿದ್ದು

ಅಮ್ಮನ ಕೈ ಹಿಡಿದು ಮೇಲೆದ್ದು ನಿಂತದ್ದು
ಮೊದಲ ಸಲ ಹೊಸ್ತಿಲುದಾಟಿ ಹೊರಹೋದದ್ದು.

ಅನ್ನಪ್ರಾಶನದಂದು ಅಪ್ಪ ಕಣ್ತುಂಬಿ ಹರಸಿದ್ದು
ಸುತ್ತಲ ಮನೆಯವರಿಗೆ ಅಮ್ಮ ಸಿಹಿ ಹಂಚಿದ್ದು

ಕೈ ಹಿಡಿದು ಅಕ್ಕಿಯಲಿ ಓಂಕಾರ ಬರೆಸಿದ್ದು
ಜನಕೆ ನನ್ನನು ತೋರಿ ಹಿಗ್ಗಿ ಮೈ ಮರೆತಿದ್ದು

ಬದುಕಿನಲಿ ಬಂಗಾರವೆಂದರೆ ಬಾಲ್ಯವೇ ನೋಡಮ್ಮ
ಹೇಗೆ ಮರೆಯಲಿ ಬಾಲ್ಯಕಿಂತ ಸಿಹಿ ನಿನ್ನ ನೆನಪಮ್ಮ

ಅಮ್ಮನ ಬೆಚ್ಚಗಿನ ಮಡಿಲಲ್ಲಿ ಮಲಗಿದ್ದು
ಎದೆ ಹಾಲು ಕುಡಿದು ತೊಡೆಯೇರಿ ಕುಣಿದಿದ್ದು
Summary
ಈ ಕವಿತೆ ಬಾಲ್ಯ ಮತ್ತು ತಾಯಿಯ ಆರೈಕೆಯ ಸ್ಮರಣೆಯಿಂದ ತುಂಬಿದ ನಾಸ್ಟಾಲ್ಜಿಕ್ ಕವಿತೆಯಾಗಿದೆ. ತಾಯಿಯ ಬೆಚ್ಚಗಿನ
ಮಡಿಲಲ್ಲಿ ಮಲಗುವುದು, ಹಾಲು ಕುಡಿಯುವುದು, ಅವಳ ಕೈ ಹಿಡಿಯುವುದು ಮತ್ತು ಮೊದಲ ಹೆಜ್ಜೆ ಇಡುವ
ಕ್ಷಣಗಳನ್ನು ನೆನಪಿಸುತ್ತದೆ. ಕುಟುಂಬದ ಸಂಪ್ರದಾಯಗಳು ಮತ್ತು ಪ್ರೀತಿಯ ನೆನಪುಗಳು ಬಾಲ್ಯವನ್ನು
ಬಂಗಾರದಂತೆ ಅಮೂಲ್ಯವಾಗಿಸುತ್ತವೆ. ಬಾಲ್ಯದ ನೆನಪುಗಳಿಗಿಂತ ಸಿಹಿಯಾದುದು ಮತ್ತೊಂದಿಲ್ಲ ಎಂದು ಕವಿ
ಹೇಳುತ್ತಾನೆ. ತಾಯಿಯ ಪ್ರೀತಿ ಮತ್ತು ಬಾಲ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ ಎಂಬ ಭಾವನೆಯೊಂದಿಗೆ ಕವಿತೆ
ಮುಕ್ತಾಯಗೊಳ್ಳುತ್ತದೆ.
Author
ಕವಿ: ಡಾ. ಎಸ್. ಪಿ. ಪದ್ಮಿನಿ ನಾಗರಾಜು