ಈಸೂರು ಸ್ವಗತ

This page features a video of the lesson “ಈಸೂರು ಸ್ವಗತ (Isuru Svagata)”, prescribed under the Karnataka State Syllabus for 3rd Standard Kannada First Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
Lyrics Kannada
“ಏಸೂರು ಕೊಟ್ಟರೂ ಈಸೂರು ಬಿಡೆವು”
ಕೇಳಿದಿರಲ್ಲ! ನನ್ನ ಮಡಿಲ ಮಕ್ಕಳ ಧೀರ ಮಾತುಗಳನ್ನ. ಏನು? ನಾನು ಯಾರೆಂದು
ತಿಳಿಯುವ ಕುತೂಹಲವೇ? ಕೇಳಿ ನಾನು ಈಸೂರು ಎಂಬ ಗ್ರಾಮ. ನಾನು ಶಿವಮೊಗ್ಗ
ಜಿಲ್ಲೆ ಶಿಕಾರಿಪುರ ತಾಲ್ಲೂಕಿನಲ್ಲಿದ್ದೇನೆ. ಕುಮುದ್ವತಿ ನದಿಯ ಬಲದಂಡೆಯ ಮೇಲಿರುವ

ನನ್ನ ಮಡಿಲಿನ ಮಕ್ಕಳು ಸರ್ಕಾರ ರಚಿಸಿಕೊಂಡು ಬ್ರಿಟಿಷರ ವಿರುದ್ಧ
ಹೋರಾಡಿದ ಸ್ವಾತಂತ್ರö್ಯ ಪ್ರೇಮಿಗಳು, ನಾಡಿಗೆ ಕೀರ್ತಿ ತಂದವರು.
ನಮ್ಮನ್ನು ಬ್ರಿಟಿಷರು ಆಳುತ್ತಿದ್ದ ಕಾಲ. ನಾವು ಅವರ ಗುಲಾಮರಾಗಿ, ತುಂಬಾ
ನೋವು, ಹಿಂಸೆ ಅನುಭವಿಸಬೇಕಾಗಿತ್ತು. ಬ್ರಿಟಿಷರನ್ನು ಭಾರತದಿಂದ ಓಡಿಸಬೇಕು, ನಾವು
ಸ್ವತಂತ್ರರಾಗಬೇಕು ಎಂಬ ಛಲ ಭಾರತೀಯರಲ್ಲಿ ಮೂಡಿತು. ಮಹಾತ್ಮ ಗಾಂಧಿಯವರು
“ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ” ಎಂಬ ಚಳುವಳಿ ಆರಂಭಿಸಿದರು. ಇದರಿಂದ
ಪ್ರೇರಿತರಾದ ನನ್ನ ಜನತೆ ಬ್ರಿಟಿಷ್ ಸರ್ಕಾರಕ್ಕೆ ತೆರಿಗೆ ಕೊಡದಂತೆ ಚಳುವಳಿ ನಡೆಸಿದರು.
ಅಧಿಕಾರಿಗಳಿಗೆ ಹೆದರದಂತೆ ಜನರಿಗೆ ಕರೆ ಕೊಟ್ಟರು. ಸರ್ಕಾರಿ ಅಧಿಕಾರಿಗಳಿಗೆ,
ಕಛೇರಿಗಳಿಗೆ ಧಿಕ್ಕಾರ ಕೂಗಿದರು. ೨೫ ಸೆಪ್ಟಂಬರ್ ೧೯೪೨ರಂದು ಬ್ರಿಟಿಷ್ ಸರ್ಕಾರದ
ಅಧಿಕಾರವನ್ನು ಧಿಕ್ಕರಿಸಿದರು. “ಏಸೂರು ಕೊಟ್ಟರೂ ಈಸೂರು ಬಿಡೆವು” ಎಂಬ ಜನರ
ಘೋಷಣೆ ಮುಗಿಲು ಮುಟ್ಟಿತು. ನನ್ನನ್ನು ‘ಸ್ವತಂತ್ರ ಹಳಿ’್ಳ ಎಂದು ಸಾರಿದರು. ತಮ್ಮದೇಕಂದಾಯದ
ಆದ ಸರ್ಕಾರ ರಚಿಸಿಕೊಂಡು ಗ್ರಾಮದ ಆಡಳಿತ ನಡೆಸಲು ಪಣತೊಟ್ಟರು.ಕರೆ
ಮರುದಿನ ಬ್ರಿಟಿಷ್ ಸರ್ಕಾರಿ ಅಧಿಕಾರಿಗಳಾದ ಪಟೇಲ್ ಚನ್ನಬಸವಯ್ಯ ಮತ್ತು
ಶಾನುಭೋಗ ರಂಗನಾಥರಾವ್ ಕಂದಾಯದ ವಸೂಲಿಗೆ ನನ್ನಲ್ಲಿಗೆ ಬಂದರು
ಖಾತೆ-ಕಿದ್ರಿ ಪುಸ್ತಕಗಳೊಂದಿಗೆ ಕಂದಾಯದ ವಸೂಲಿಗೆ ಬಂದ ಅಧಿಕಾರಿಗಳನ್ನು
ಹೋರಾಟಗಾರ ಯುವಕರು ವಿರೋಧಿಸಿದರು. “ರಾಜೀನಾಮೆ ಕೊಡಿ, ಗಾಂಧಿ ಟೋಪಿ
ಧರಿಸಿ” ಎಂದು ವಿನಂತಿಸಿದರು. ಮಾತಿನ ಚಕಮಕಿ ನಡೆಯಿತು. ವಿನಂತಿಗೆ ಒಪ್ಪದ
ಅಧಿಕಾರಿಗಳಿಂದ ಹೋರಾಟಗಾರರು ಖಾತೆ-ಕಿರ್ದಿ ಪುಸ್ತಕಗಳನ್ನು ಕಸಿದುಕೊಂಡರು.
ಅಧಿಕಾರಿಗಳು ಸೋತರು. ತಾವು ತಂದ ಪುಸ್ತಕಗಳನ್ನು ಪಡೆಯಲಾಗದೆ ಹಿಂದಿರುಗಿದರು.
ಹೋರಾಟ ಅಲ್ಲಿಗೇ ನಿಲ್ಲಲಿಲ್ಲ. ೧೯೪೨ ಸೆಪ್ಟಂಬರ್ ೨೭ ರಂದು ಸಂಜೆ ಗ್ರಾಮಸ್ಥರು
ವೀರಭದ್ರ ದೇವಸ್ಥಾನದ ಮುಂದಿನ ಅಂಗಳದಲ್ಲಿ ಹಾರಿಸಿದ್ದ ಧ್ವಜದ ಕೆಳಗೆ ಗುಪ್ತ
ಸಭೆ ನಡೆಸಿದರು. ಭವಿಷ್ಯದ ಪ್ರಜೆಗಳಾದ ಮಕ್ಕಳನ್ನು ಒಳಗೊಂಡ ತಮ್ಮದೇ
ಸರ್ಕಾರವನ್ನು ರಚಿಸಿ ನನ್ನ ರಕ್ಷಣೆಗೆ ನಿಂತರು. ಮಕ್ಕಳಾದ ಸಾಹುಕಾರ್ ಜಯಣ್ಣನನ್ನು
ಅಮಲ್ದಾರ ನನ್ನಗಿಯೂ ಮಲ್ಲಪ್ಪ ಅಯ್ಯನನ್ನು ಪೊಲೀಸ್ ಅಧಿಕಾರಿಯನ್ನಾಗಿಯೂ
ನೇಮಿಸಿದರು. ಇದರೊಂದಿಗೆ ಮಕ್ಕಳು ಸೇರಿಕೊಂಡರು. ಊರಿನ ಅಗಸೆ
ಬಾಗಿಲಿನಲ್ಲಿ “ಬೇಜವಾಬ್ದಾರಿ ಸರ್ಕಾರಿ ಅಧಿಕಾರಿಗಳಿಗೆ ಈಸೂರಿನಲ್ಲಿ ಪ್ರವೇಶವಿಲ್ಲ” ಎಂಬ
ಫಲಕವನ್ನು ತೂಗುಹಾಕಿದರು. ಅಲ್ಲೇ ಕಛೇರಿಯನ್ನು ಪ್ರಾರಂಭಿಸಿದರು. ಗಮನಿಸಿದಿರಾ
ನನ್ನ ಮಡಿಲಿನ ಮಕ್ಕಳ ಸಾಹಸವನ್ನು?

ಖಾತೆ-ಕಿರ್ದಿ ಪುಸ್ತಕವನ್ನು ಪಡೆಯಲು ಪಟೇಲ್ ಚನ್ನಬಸವಯ್ಯ ಮತ್ತು ಶಾನುಭೋಗ
ರಂಗನಾಥರಾವ್ ಮತ್ತೆ ಬಂದರು. ಮಕ್ಕಳಿಂದ ರಚನೆಯಾದ ಹೊಸ ಸರ್ಕಾರದ
ಅಧಿಕಾರಿಗಳು ಅವರಿಬ್ಬರನ್ನು ತಡೆದರು. ರಾಜೀನಾಮೆ ಕೊಟ್ಟು, ಗಾಂಧಿ ಟೋಪಿ ಹಾಕಿಕೊಂಡು,
ತಾವು ರಚಿಸಿದ ಸರ್ಕಾರದಲ್ಲಿ ಕೆಲಸ ಮಾಡಬೇಕೆಂದು ಅವರಿಗೆ ಆಜ್ಞೆ ಮಾಡಿದರು. ಇದಕ್ಕೆ
ಅವರು ಒಪ್ಪಲಿಲ್ಲ. ಅವರಿಗೆ ಐವತ್ತು ರೂಪಾಯಿ ದಂಡ ವಿಧಿಸಲಾಯಿತು. ದಂಡ ಕಟ್ಟದ
ಅವರಿಗೆ ಮೂರು ಗಂಟೆ ಕಾಲ ಒಂಟಿ ಕಾಲಿನಲ್ಲಿ ನಿಲ್ಲುವಂತೆ ಶಿಕ್ಷೆ ವಿಧಿಸಲಾಯಿತು.
ಇದರಿಂ ನನ್ನ ಮಡಿಲಿನ ಮಕ್ಕಳು ಅನುಭವಿಸಿದ ನೋವನ್ನು ನಿಮಗೆ ಹೇಳಲೇಬೇಕು.
ನನ್ನ ಮಕ್ಕಳ ಈ ಸಾಹಸವನ್ನು ತಿಳಿದ ಬ್ರಿಟಿಷ್ ಅಧಿಕಾರಿಗಳು ಕೋಪಗೊಂಡರು.
ತಾಲ್ಲೂಕಿನ ಅಮಲ್ದಾರರು, ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ದಾಳಿಯಿಟ್ಟರು.
ಬ್ರಿಟಿಷ್ ಅಧಿಕಾರಿಗಳು ಗ್ರಾಮ ಪ್ರವೇಶಿಸದಂತೆ ಜನರು ಪ್ರತಿಭಟಿಸಿದರು. ಕೋಪಗೊಂಡ
ಅಧಿಕಾರಿಗಳು ನಿರಾಯುಧ ಜನರ ಮೇಲೆ ಲಾಠಿ ಬೀಸಿದರು. ಸಿಕ್ಕವರನ್ನೆಲ್ಲ ಚಚ್ಚಿದರು.
ರೊಚ್ಚಿಗೆದ್ದ ಜನರ ಪ್ರತಿಭಟನೆ ಹೆಚ್ಚಾಯಿತು. “ಏಸೂರು ಕೊಟ್ಟರೂ ಈಸೂರು ಬಿಡೆವು”
ಎಂಬ ಘೋಷಣೆ ಮತ್ತೊಮ್ಮೆ ಮುಗಿಲು ಮುಟ್ಟಿತು. ಪೊಲೀಸರು ತಾಳ್ಮೆ ಕಳೆದುಕೊಂಡು,
ಜನರ ಮೇಲೆ ಗುಂಡು ಹಾರಿಸಿದರು. ರೊಚ್ಚಿಗೆದ್ದ ನಮ್ಮ ಜನರು ಅವರ ಮೇಲೆ
ಮುಗಿಬಿದ್ದರು. ಅಮಲ್ದಾರ ಚನ್ನಕೃಷ್ಣಪ್ಪ ಮತ್ತು ಪೊಲೀಸ್ ಅಧಿಕಾರಿ ಕೆಂಚೇಗೌಡ ಸತ್ತರು.
ಬ್ರಿಟಿಷ್ ಸರ್ಕಾರಕ್ಕೆ ವಿಷಯ ಮುಟ್ಟಿತು. ಹೆಚ್ಚಿನ ಪೊಲೀಸ್ ಮತ್ತು ಸೈನ್ಯದಳವನ್ನು
ಇಳಿಸಿ ಈಸು ರನ್ನು ಲೂಟಿ ಮಾಡಿಸಿ ಮಾಡಿಸಿತು. ಹೆಂಗಸರು ಮಕ್ಕಳೆನ್ನದೆ ಅನೇಕರು
ಚಿತ್ರಹಿಂಸೆಗೆ ಗುರಿಯಾದರು. ಸರ್ಕಾರದ ವಿರುದ್ಧ ಬಂಡೆದ್ದರೆಂದು ಹಲವರ ವಿರುದ್ಧ
ಮೊಕದ್ದಮೆ ಹೂಡಲಾಯಿತು. ಮುಂದೆ ಆ ವೀರರಲ್ಲಿ ಐವರು ಮರಣ ದಂಡನೆಗೆ
ಗುರಿಯಾದರು.

ನನ್ನ ಜನರ ಸ್ವಾತಂತ್ರ್ಯ ಪ್ರೇಮ ಹಾಗೂ ಮಕ್ಕಳ ಧೈರ್ಯವು ಕನ್ನಡಿಗರ ಮನೆ
ಮಾತಾಯಿತು. ಇಡೀ ಭಾರತದಲ್ಲೇ ಸ್ವಾತಂತ್ರಯ ಪೂರ್ವದಲ್ಲಿ ಮೊಟ್ಟ ಮೊದಲಿಗೆ ‘ಸ್ವತಂತ್ರ
ಹಳ್ಳಿ’, ಎಂಬ ಹೆಸರನ್ನು ಪಡೆದ ನಾನೇ ಧನ್ಯ.
Summary
ಈ ಪಾಠವು ಈಸೂರು ಗ್ರಾಮದ ಸ್ವಾತಂತ್ರ್ಯ ಹೋರಾಟ ಮತ್ತು ಅಲ್ಲಿನ ಜನರ ಧೈರ್ಯ, ದೇಶಪ್ರೇಮ ಹಾಗೂ ತ್ಯಾಗವನ್ನು ವಿವರಿಸುತ್ತದೆ. ಬ್ರಿಟಿಷರ ಆಳ್ವಿಕೆಯಲ್ಲಿ ಈಸೂರಿನ ಜನರು ಅನ್ಯಾಯ ಮತ್ತು ತೆರಿಗೆಗಳನ್ನು ವಿರೋಧಿಸಿ, ಮಹಾತ್ಮ ಗಾಂಧಿಯವರ ‘ಭಾರತ ಬಿಟ್ಟು ತೊಲಗಿ’ ಚಳುವಳಿಯಿಂದ ಪ್ರೇರಿತರಾಗಿ ಹೋರಾಟ ನಡೆಸಿದರು. “ಏಸೂರು ಕೊಟ್ಟರೂ ಈಸೂರು ಬಿಡೆವು” ಎಂಬ ಘೋಷಣೆಯೊಂದಿಗೆ ಅವರು ತಮ್ಮದೇ ಸರ್ಕಾರವನ್ನು ರಚಿಸಿಕೊಂಡು ಗ್ರಾಮದ ಆಡಳಿತವನ್ನು ನಡೆಸಲು ಮುಂದಾದರು. ಯುವಕರು ಮತ್ತು ಮಕ್ಕಳು ಸಹ ಈ ಹೋರಾಟದಲ್ಲಿ ಭಾಗವಹಿಸಿ, ಬ್ರಿಟಿಷ್ ಅಧಿಕಾರಿಗಳನ್ನು ವಿರೋಧಿಸಿದರು ಮತ್ತು ತಮ್ಮ ಸ್ವಾತಂತ್ರ್ಯದ ಹಕ್ಕಿಗಾಗಿ ಧೈರ್ಯದಿಂದ ನಿಂತರು. ಬ್ರಿಟಿಷ್ ಅಧಿಕಾರಿಗಳು ಗ್ರಾಮಕ್ಕೆ ದಾಳಿ ಮಾಡಿ ಜನರ ಮೇಲೆ ಹಿಂಸೆ ನಡೆಸಿದರೂ, ಈಸೂರಿನ ಜನರು ತಮ್ಮ ಹೋರಾಟದಿಂದ ಹಿಂದೆ ಸರಿಯಲಿಲ್ಲ. ಅನೇಕರು ಶಿಕ್ಷೆಗೆ ಗುರಿಯಾದರು ಮತ್ತು ಐವರು ವೀರರು ಮರಣದಂಡನೆ ಅನುಭವಿಸಿದರು. ಈಸೂರಿನ ಜನರ ಸ್ವಾತಂತ್ರ್ಯ ಪ್ರೇಮ ಮತ್ತು ಧೈರ್ಯವು ಕರ್ನಾಟಕದ ಇತಿಹಾಸದಲ್ಲಿ ಹೆಮ್ಮೆಯ ಅಧ್ಯಾಯವಾಗಿ ಉಳಿದಿದೆ.
Author