This page features a video of the lesson “ನನ್ನ ಕನಸು (Nanna Kanasu)”, prescribed under the Karnataka State Syllabus for 3rd Standard Kannada First Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
English
Hindi
Lyrics
Kannada
ಒಂದು ದಟ್ಟವಾದ ಕಾಡು. ವಿಶಾಲ ಪ್ರದೇಶದಲ್ಲಿ ಬೆಳೆದಿರುವ ಎತ್ತರವಾದ ಮರ
ಗಿಡಗಳು, ಮರಗಳನ್ನು ಬಳಸಿ ಮುಗಿಲೆತ್ತರಕ್ಕೆ ಹಬ್ಬುತ್ತಿರುವ ಬಳ್ಳಿಗಳು, ಹಸಿರಿನ ನಡುವೆ
ಬಣ್ಣದ ಚಿತ್ತಾರ ಮೂಡಿಸಿರುವ ಹೂ, ಹಣ್ಣುಗಳು, ದುಂಬಿಯ ಝೇಂಕಾರ, ಪಕ್ಷಿಗಳ
ಕಲರವ, ನಡುವೆ ತೇಲಿ ಬರುತ್ತಿರುವ ಕೋಗಿಲೆಯ ಧ್ವನಿ, ಜುಳು ಜುಳು ಹರಿಯುತ್ತಿರುವ
ಝರಿಯ ನಿನಾದ. ಇಂತಹ ಸುಂದರ ಪರಿಸರವು ಪ್ರಾಣಿ ಪಕ್ಷಿಗಳಿಗೆ ನೆಮ್ಮದಿಯ ಆಶ್ರಯ
ತಾಣವಾಗಿತ್ತು.
ಹೊಡೆತದಿಂದ ಪಕ್ಷಿಗಳು ಚೀರುತ್ತಾ ಹಾರಿದವು. ಸನಿಹದಲ್ಲಿದ್ದ ಪ್ರಾಣಿಗಳು ಭಯಮಿಶ್ರಿತ
ಕುತೂಹಲದಿಂದ “ಯಾರದು?” ಎಂದು ತಿರುಗಿ ನೋಡಿದವು. ಮಾನವನನ್ನು ಕಂಡು
ಸಿಟ್ಟುಗೊಂಡು ವಾದಕ್ಕೆ ಮುಂದಾದವು.
ಮೊಲ : ಏ ಮಾನವ, ನಿನಗಿನ್ನೂ ಬುದ್ಧಿ ಬರಲಿಲ್ಲವೇ? ಅತಿವೃಷ್ಟಿ ಹಾಗೂ ಅನಾವೃಷ್ಟಿ
ಯಿಂದ ಸಾವು ನೋವುಗಳೂ ಸಂಭವಿಸಿವೆ. ಆದರೂ ಕಾಡಿನ ನಾಶಕ್ಕೆ
ಮುಂದಾಗಿರುವೆಯಲ್ಲಾ. ಛೀ ಅವಿವೇಕಿ!
ಮಾನವ : ಅಂಜುಬುರುಕ ಪ್ರಾಣಿಯೇ! ನೀನು ಮಾನವನನ್ನು ಅವಿವೇಕಿ ಎನ್ನುವೆಯಾ?
ನಮ್ಮ ಬುದ್ಧಿವಂತಿಕೆ ನಿನಗೇನು ಗೊತ್ತು?
(ಕೊಡಲಿಯನ್ನು ಹೆಗಲ ಮೇಲಿಟ್ಟು ಗತ್ತಿನಿಂದ ಹೇಳಿದನು)
ಜಿಂಕೆ : ಹೇಳಪ್ಪ ನಿಮ್ಮ ಜಾಣತನವನ್ನು ... ನಾವೂ ಸ್ವಲ್ಪ ತಿಳಿಯುತ್ತೇವೆ.
ಮಾನವ : ಆಕಾಶದಲ್ಲಿ ಹಾರುವ ವಿಮಾನ, ನೀರಿನ ಮೇಲೆ ಚಲಿಸುವ ದೋಣಿ,
ಹಡಗುಗಳನ್ನು ಸೃಷ್ಟಿಸಿದ್ದೇವೆ. ಇದಿಷ್ಟು ಸಾಕಲ್ಲವೇ ನಮ್ಮ ಬುದ್ಧಿವಂತಿಕೆಗೆ?
ನರಿ : (ಕತ್ತನ್ನು ಮೇಲೆತ್ತಿ ಮೂದಲಿಸುತ್ತಾ) ಪಕ್ಷಿಯನ್ನು ನೋಡಿ ವಿಮಾನವನ್ನು,
ಜಲಚರಗಳನ್ನು ನೋಡಿ ದೋಣಿ, ಹಡಗುಗಳನ್ನು ನಿರ್ಮಿಸಿರುವೆ. ಇದರಲ್ಲಿ
ನಿಮ್ಮ ಸ್ವಂತಿಕೆ ಏನು?
ಮಾನವ : (ನರಿಯ ಮಾತಿಗೆ ಮಂಕಾದ ಮಾನವ, ತೋರಿಸಿಕೊಳ್ಳದೆ)
ಸುಂದರವಾಗಿ ಕಾಣಲು ಉಡುಗೆ ತೊಡುಗೆಗಳನ್ನು ಸೃಷ್ಟಿಸಿದ್ದೇವೆ. ನಿಮಗಿದು
ತಿಳಿಯದೇ?
ಜಿಂಕೆ : ಮೊದಲಿಗೆ ನಮ್ಮ ಚರ್ಮವನ್ನೇ ಧರಿಸುತ್ತಿದ್ದುದನ್ನು ನೆನಪಿಸಿಕೋ. ನಿಮ್ಮ
ಬಟ್ಟೆಯಲ್ಲೇನು ವಿಶೇಷ? ಪ್ರಾಣಿ, ಪಕ್ಷಿ, ಕೀಟಗಳ ಮೈಬಣ್ಣಕ್ಕೆ ಮನಸೋತು
ನಮ್ಮಂತೆ ಸುಂದರವಾಗಿ ಕಾಣಲು ಬಟ್ಟೆಗಳನ್ನು ಸಿದ್ಧಪಡಿಸಿರುವೆ. ಸಹಜ
ಸೌಂದರ್ಯ ನಮ್ಮದು, ತಿಳಿಯಿತೇ?
ಕೋತಿ : (ಕೊಂಬೆಯನ್ನು ಹಿಡಿದು ಜೋತಾಡುತ್ತ) ಜಿಂಕೆಯ ಕಣ್ಣಿನಂತಹ ಕಣ್ಣು,
ನವಿಲಿನ ನಡಿಗೆಯಂತಹ ನಡಿಗೆ, ಕೋಗಿಲೆಯ ದನಿಯಂತಹ ದನಿ
ಇರಬೇಕು ಎಂದೆಲ್ಲ ಹೇಳುವ ನೀವು ಸುಂದರವೋ ಅಥವಾ ನಾವು
ಸುಂದರವೋ?
ಕಾಡು ಹಂದಿ: (ಗುಟುರು ಹಾಕುತ್ತಾ) ಅಗತ್ಯ ವಸ್ತುಗಳನ್ನು ಉತ್ಪಾದಿಸುವ ನಿಮ್ಮ
ಕಾರ್ಖಾನೆಗಳು ಹೊಗೆ ಮತ್ತು ಕಲ್ಮಶವನ್ನು ಹೊರ ಹಾಕುತ್ತವೆ. ಇದರಿಂದ
ಗಾಳಿ, ಮಣ್ಣು, ನೀರು ಮಲಿನವಾಗುತ್ತವೆ. ಇದೇಕೆ ನಿನಗೆ ತಿಳಿಯುತ್ತಿಲ್ಲ?
ಮಾನವ : (ಪ್ರಾಣಿಗಳ ಒಗ್ಗಟ್ಟು ಮತ್ತು ಬುದ್ಧಿವಂತಿಕೆಯನ್ನು ಕಂಡ ಮಾನವನಿಗೆ ತಾನು
ಸೋಲುತ್ತಿರುವುದು ಮನವರಿಕೆಯಾಯಿತು. ಆದರೂ ತೋರ್ಪಡಿಸಿಕೊಳ್ಳದೆ)
ಬಯಲಲ್ಲಿ ವಾಸ ಮಾಡುವ ನಿನಗೇನು ಗೊತ್ತು ನಾವು ಕಟ್ಟುವ
ಸುಂದರವಾದ ಮನೆಗಳ ಬಗ್ಗೆ. ಬಂದು ನೋಡಿ. ನಮ್ಮ ಬುದ್ಧಿವಂತಿಕೆ
ತಿಳಿಯುತ್ತದೆ.
ಕಾಗೆ : ಗೀಜಗನ ಗೂಡು, ಜೇನುಗೂಡು, ಗೆದ್ದಲುಹುಳು ಕಟ್ಟುವ ಹುತ್ತಗಳು ಎಷ್ಟು
ಸುಂದರ, ಸುರಕ್ಷಿತ! ಕಸದಿಂದ ಮಾಡಿರುವ ನಮ್ಮ ಸಾಧನೆಯ ಮುಂದೆ
ಪ್ರಕೃತಿಯ ನಾಶದ ನಿಮ್ಮ ಸಾಧನೆ ಶೂನ್ಯ.
(ಪ್ರಾಣಿ ಪಕ್ಷಿಗಳ ಬುದ್ಧಿವಂತಿಕೆಗೆ ಮಾನವ ಬೆರಗಾದ)
ಮಾನವ : (ಆಶ್ಚರ್ಯದಿಂದ) ನಿಮಗೆ ಇದೆಲ್ಲ ಹೇಗೆ ತಿಳಿಯಿತು?
ಕೊಕ್ಕರೆ : (ಬಳುಕುತ್ತಾ) ನಮ್ಮಲ್ಲಿ ಕೆಲವರು ವರ್ಷದಲ್ಲಿ ಕೆಲವು ತಿಂಗಳು ದೇಶ
ವಿದೇಶಗಳಿಗೆ ವಲಸೆ ಹೋಗುತ್ತೇವೆ. ಅಲ್ಲಿ ಗೆಳೆಯರೊಂದಿಗೆ ಚರ್ಚಿಸುತ್ತೇವೆ.
ನಿನಗಿದು ತಿಳಿಯದೇ?
ಮರ : (ಸಹನೆಯಿಂದ ಆಲಿಸುತ್ತಿದ್ದ ಮರವು) ಏ ಮಾನವ, ನೀನು ಏನೇ
ಮಾಡಿದ್ದರೂ ಅಥವಾ ಮುಂದೆ ಮಾಡಿದರೂ ಅದು ಈ ಪ್ರಕೃತಿಯ
ಪ್ರಭಾವದಿಂದ. ಪ್ರಕೃತಿಯ ಅಂಗವಾದ ಕಾಡಿನ ನಾಶದಿಂದ ನಿನ್ನ
ಸಂತತಿಯ ನಾಶವೆಂಬುದನ್ನು ಮೊದಲು ಅರಿತುಕೋ. ಕಾಡಿನ ಸಂರಕ್ಷಣೆಗೆ
ಮುಂದಾಗು. ಸಾಲುಮರದ ತಿಮ್ಮಕ್ಕನನ್ನು ನೋಡಿ ಕಲಿ. ನೀನು ಬದುಕುವ
ಜೊತೆಗೆ ಪ್ರಕೃತಿಯ ಉಳಿವಿಗೆ ನಿನ್ನ ಬುದ್ಧಿವಂತಿಕೆಯನ್ನು ತೋರಿಸು. ಏಳು
ಎಚ್ಚರಗೊಳ್ಳು, ಸಮಯ ಮೀರುವ ಮುನ್ನ ಎದ್ದೇಳು.
ಅಮ್ಮ : ರಾಜು, ಏಳೋ, ಶಾಲೆಗೆ ತಡವಾಗುತ್ತೆ.
(ಏಳು, ಎದ್ದೇಳು ಎಂಬ ಕೂಗಿಗೆ ರಾಜು ಎಚ್ಚರಗೊಂಡ, ಹಾಸಿಗೆಯ ಮೇಲೆ ಕುಳಿತ)
ರಾಜು : ಅಮ್ಮ, ಅಮ್ಮಾ, ನನಗೆ ಕನಸು ಬಿದ್ದಿತ್ತು. ಎಂಥಾ ಕನಸು ಗೊತ್ತಾ? ಕಾಡಿನಲ್ಲಿ
ಪ್ರಾಣಿಗಳೆಲ್ಲ ಸೇರಿ ಮರ ಕಡಿಯಲು ಹೋದ ಮನುಷ್ಯನ ಮನಃಪರಿವರ್ತನೆ
ಮಾಡಿದವು. ಅಲ್ಲಿ ಎಷ್ಟೆಲ್ಲ ಪ್ರಾಣಿಗಳಿದ್ದವು ಗೊತ್ತಾ?
ಅಮ್ಮ : ಹೌದಾ, ನಿಜವಾಗಿಯೂ ಇದು ಒಳ್ಳೆಯ ಕನಸೇ! ರಾಜು, ನಿನ್ನೆ ರಾತ್ರಿ
‘ಕಾಡಿನ ಕಥೆ’ ಓದಿ ಮಲಗಿದೆಯಲ್ಲಾ, ಅದಕ್ಕೇ ಈ ರೀತಿ ಕನಸು ಬಿದ್ದಿದೆ.
ನಾವು ಪ್ರಾಣಿಗಳಿಂದ ಕಲಿಯೋದು ಬಹಳಷ್ಟಿದೆ. ನೋಡು, ಆ ಕೋಳಿ
ಕೂಗಿ ಎಲ್ಲರನ್ನೂ ಎಚ್ಚರಿಸುತ್ತಿದೆ. ಏಳು ಬೇಗ.

Summary
ಈ ಪಾಠದಲ್ಲಿ ಕಾಡಿನ ಸೌಂದರ್ಯ, ಪ್ರಾಣಿ-ಪಕ್ಷಿಗಳ ಬುದ್ಧಿವಂತಿಕೆ ಮತ್ತು ಪ್ರಕೃತಿ ಸಂರಕ್ಷಣೆಯ ಮಹತ್ವವನ್ನು ತಿಳಿಸಲಾಗಿದೆ. ಒಬ್ಬ ಮನುಷ್ಯ ಕಾಡನ್ನು ನಾಶಮಾಡಲು ಬಂದಾಗ ಪ್ರಾಣಿ-ಪಕ್ಷಿಗಳು ಅವನನ್ನು ಪ್ರಶ್ನಿಸಿ, ಪ್ರಕೃತಿಯಿಂದಲೇ ಮನುಷ್ಯನು ಅನೇಕ ವಿಷಯಗಳನ್ನು ಕಲಿತಿದ್ದಾನೆ ಎಂಬುದನ್ನು ತಿಳಿಸುತ್ತವೆ. ವಿಮಾನ, ದೋಣಿ, ಬಟ್ಟೆ ಮತ್ತು ಮನೆಗಳಂತಹ ಮನುಷ್ಯನ ಸಾಧನೆಗಳ ಹಿಂದೆ ಪಕ್ಷಿಗಳು, ಜಲಚರಗಳು, ಪ್ರಾಣಿಗಳು ಮತ್ತು ಕೀಟಗಳಿಂದ ಪಡೆದ ಪ್ರೇರಣೆಯಿದೆ ಎಂದು ಅವು ವಿವರಿಸುತ್ತವೆ. ಮನುಷ್ಯನ ಕಾರ್ಖಾನೆಗಳಿಂದ ಹೊರಬರುವ ಹೊಗೆ ಮತ್ತು ಕಲ್ಮಶಗಳು ಗಾಳಿ, ಮಣ್ಣು ಹಾಗೂ ನೀರನ್ನು ಮಲಿನಗೊಳಿಸುತ್ತವೆ ಎಂದು ಕಾಡುಹಂದಿ ಎಚ್ಚರಿಸುತ್ತದೆ. ಮರವು ಕಾಡಿನ ನಾಶವು ಮನುಷ್ಯನ ಸಂತತಿಯ ನಾಶಕ್ಕೂ ಕಾರಣವಾಗಬಹುದು ಎಂದು ತಿಳಿಸಿ, ಕಾಡನ್ನು ಸಂರಕ್ಷಿಸುವಂತೆ ಮನುಷ್ಯನಿಗೆ ಕರೆ ನೀಡುತ್ತದೆ. ಕೊನೆಯಲ್ಲಿ ರಾಜು ಎಚ್ಚರಗೊಂಡಾಗ, ತಾನು ಕಂಡದ್ದು ಕನಸು ಎಂದು ತಿಳಿಯುತ್ತದೆ ಮತ್ತು ಪ್ರಾಣಿಗಳಿಂದ ಕಲಿಯಬೇಕಾದದ್ದು ಬಹಳಷ್ಟಿದೆ ಎಂಬ ಸಂದೇಶವನ್ನು ಅರಿತುಕೊಳ್ಳುತ್ತಾನೆ.
Author