This page features a video of the lesson “ಜಾತ್ರೆ (Jatre)”, prescribed under the Karnataka State Syllabus for 3rd Standard Kannada First Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
Lyrics
Kannada
ಊರ ಜಾತ್ರೆಯ ಸಂಭ್ರಮ. ರಥ ಬೀದಿಯು ತಳಿರು ತೋರಣ ಹಾಗೂ ಬಣ್ಣದ
ಹೂಗಳ ಅಲಂಕಾರದಿಂದ ಕಂಗೊಳಿಸುತ್ತಿತ್ತು. ನೋಡಿದಲ್ಲೆಲ್ಲಾ ಜನ ಸಾಗರವೇ ನೆರೆದಿತ್ತು.
ರಾಜು ಮತ್ತು ಕಮಲ ತಾತನ ಜೊತೆ ಜಾತ್ರೆಗೆ ಬಂದಿದ್ದರು. ಅವರ ಬಳಿ ಜಾತ್ರೆಯಲ್ಲಿ
ಕೊಂಡಿದ್ದ ಆಟಿಕೆಗಳು ಹಾಗೂ ತಿನಿಸುಗಳು ಇದ್ದವು. ತಾತನ ಅಕ್ಕ ಪಕ್ಕ ನಿಂತು, ಭಕ್ತರು
ರಥ ಎಳೆಯುವುದನ್ನು ನೋಡುತ್ತಿದ್ದರು.
ಅಲ್ಲಿ ಕಂಕುಳಲ್ಲಿ ಜೋಳಿಗೆ ಹಾಕಿ, ಹಣೆಗೆ ವಿಭೂತಿ ಧರಿಸಿ, ಚಣಕು ಚಣಕು ಎಂದು
ಬಡಿಯುತ್ತಾ ಹಾಡುತ್ತಿರುವ ಜನರನ್ನು ರಾಜು ಕಂಡನು. ಕುತೂಹಲದಿಂದ “ತಾತ ತಾತ
ಅವರು ಯಾರು? ಅವರು ಏನು ಮಾಡುತ್ತಿದ್ದಾರೆ?” ಎಂದನು. ಅದಕ್ಕೆ ತಾತ “ಓ! ಅವರಾ?...
ಕಂಸಾಳೆ ನೃತ್ಯದವರು. ಅವರು ಮಲೆ ಮಹದೇಶ್ವರನ ಭಕ್ತರಾದ ದೇವರಗುಡ್ಡರು.
ನೋಡು, ಅವರು ತಟ್ಟುತ್ತಿರುವುದು ಕಂಚಿನ ತಾಳ. ಅದಕ್ಕೆ ಕಂಸಾಳೆ ಎಂದು ಹೆಸರು.
ಅದರಲ್ಲಿ ಅಂಗೈ ಅಗಲ ಚಕ್ರಾಕಾರದ ಬಟ್ಟಲು ಮತ್ತು ಜಾಗಟೆಯಂತಿರುವ ಮಟ್ಟಸವಾದ
ಮೇಲು ತಾಳ ಇದೆ. ಅವರು ಬಟ್ಟಲನ್ನು ಎಡಗೈಯ ಅಂಗೈ ಮೇಲೆ ಇರಿಸಿ ಬಲಗೈಯ
ಮೇಲು ತಾಳದಿಂದ ತಟ್ಟುತ್ತಿದ್ದಾರೆ. ಇದರಿಂದ ಮಧುರ ನಾದ ಬರುತ್ತದೆ. ಅವರು
ಮಹದೇಶ್ವರನನ್ನು ಕುರಿತು ಹಾಡುತ್ತಾ ಬಾಗಿ, ಬಳುಕಿ, ಕುಳಿತು, ನಿಂತು ಲಯವಾಗಿ
ಕಂಸಾಳೆಯನ್ನು ತಟ್ಟುತ್ತಾ ನರ್ತಿಸುತ್ತಿದ್ದಾರೆ. ಈಗ ನೋಡು ಅವರು ಕಂಸಾಳೆಯನ್ನು
ಬೀಸುತ್ತಾ ನೃತ್ಯ ಮಾಡುತ್ತಿದ್ದಾರೆ ಅಲ್ಲವೇ? ಇದಕ್ಕೆ ಬೀಸು ಕಂಸಾಳೆ ಎಂದು ಹೆಸರು.
ಕಂಸಾಳೆ ನೃತ್ಯವನ್ನು ಈ ರೀತಿ ಜಾತ್ರೆ, ಕಲಾ ಮೇಳ, ಹಬ್ಬ, ಮೆರವಣಿಗೆ ಮುಂತಾದ
ಸಂದರ್ಭಗಳಲ್ಲಿ ಮಾಡುತ್ತಾರೆ. ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು
ಜಿಲ್ಲೆಗಳಲ್ಲಿ ಈ ಕಲೆ ಹೆಚ್ಚಾಗಿ ಕಂಡುಬರುತ್ತದೆ” ಎಂದರು.
ಕಂಸಾಳೆಯವರು ಮುಂದೆ ಹೋಗುತ್ತಿದ್ದಂತೆ ಡಬ್ ಡಬ್ ಸದ್ದು ಮಾಡುತ್ತಾ ಬಂದ
ತಂಡವನ್ನು ಕಮಲ ಕುತೂಹಲದಿಂದ ನೋಡಿದಳು. ಆ ತಂಡದ ಬಗ್ಗೆ ತಿಳಿಯಲು
ಆಸೆಯಿಂದ “ತಾತ ಅವರು ಯಾರು?” ಎಂದು ಕೇಳಿದಳು. ಅದಕ್ಕೆ ತಾತ, “ಅವರು
ಬೀರ ದೇವರ ಭಕ್ತರು. ಅವರು ಡೊಳ್ಳನ್ನು ಬಡಿಯುತ್ತಾ ನೃತ್ಯ ಮಾಡುತ್ತಿದ್ದಾರೆ. ಡೊಳ್ಳು
ಎಂದರೆ ಅದು ಒಂದು ಬಗೆಯ ಚರ್ಮ ವಾದ್ಯ. ಅದರ ಭಾರವೂ ಹೆಚ್ಚು, ಹಾಗೆಯೇ
ನಾದವೂ ಹೆಚ್ಚು. ನೋಡು! ಅವರು ಕೋಲಿನಿಂದ ಡೊಳ್ಳನ್ನು ಬಾರಿಸುತ್ತಾ ಹೇಗೆ ಬೇರೆ
ಬೇರೆ ಭಂಗಿಗಳಲ್ಲಿ ನೃತ್ಯ ಮಾಡುತ್ತಿದ್ದಾರೆ. ಈ ನೃತ್ಯವನ್ನು ಜಾತ್ರೆ, ಉತ್ಸವ, ಕಲಾ ಮೇಳ,
ಹಬ್ಬ ಮುಂತಾದ ಸಂದರ್ಭಗಳಲ್ಲಿ ಮಾಡುತ್ತಾರೆ. ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಈ
ಕಲೆ ಹೆಚ್ಚಾಗಿ ಕಂಡುಬರುತ್ತದೆ” ಎಂದರು.
ಅವರೆಲ್ಲ ಮೆರವಣಿಗೆಯ ಜೊತೆಯಲ್ಲೇ ಮುಂದೆ ಮುಂದೆ ಬರುತ್ತಿದ್ದಂತೆ.
ದೂರದಲ್ಲಿ ಬಯಲಾಟದ ದೃಶ್ಯ ಕಂಡಿತು. ಒಡನೆಯೇ ರಾಜು, “ತಾತ ಅದೇನದು
ಅಲ್ಲಿ ಕಾಣುತ್ತಿರುವುದು? ನಾವು ಅಲ್ಲಿಗೆ ಹೋಗೋಣ” ಎಂದನು. ಅದಕ್ಕೆ ತಾತ, “ಅದು
ಯಕ್ಷಗಾನ ಬಯಲಾಟ. ಬನ್ನಿ ನಾವೆಲ್ಲ ಅಲ್ಲಿಗೆ ಹೋಗೋಣ” ಎಂದು ಜನರ ನಡುವೆ
ದಾರಿ ಮಾಡಿಕೊಂಡು ರಂಗಸ್ಥಳದ ಮುಂದೆ ಬಂದರು.
“ಮಕ್ಕಳೇ, ನಾನು ನಿಮಗೆ ಹಲವು ಪುರಾಣ ಕಥೆಗಳನ್ನು ಹೇಳಿದ್ದೆನಲ್ಲವೇ? ಅಂಥ
ಪುರಾಣ ಕಥೆಗಳನ್ನು ವೇಷ, ಕುಣಿತ, ಮಾತು ಹಾಗೂ ಹಿಮ್ಮೇಳದೊಂದಿಗೆ ಆಡಿ
ತೋರಿಸುವ ಕಲೆಯೇ ಯಕ್ಷಗಾನ ಬಯಲಾಟ. ಇದರಲ್ಲಿ ರಂಗಸ್ಥಳ, ಹಿಮ್ಮೇಳ, ಮುಮ್ಮೇಳ
ಮತ್ತು ಪ್ರಸಂಗ ಮುಖ್ಯ. ಅಲ್ಲಿ ನೋಡಿ! ಬಣ್ಣದ ನಾಲ್ಕು ಕಂಬಗಳಿಂದ ಸಿಂಗರಿಸಿರುವ
ಆ ಎತ್ತರವಾದ ಜಾಗವೇ ರಂಗಸ್ಥಳ. ರಂಗಸ್ಥಳದ ಹಿಂಭಾಗದಲ್ಲಿ ಬಿಳಿ ಅಂಗಿ, ಬಿಳಿ
ಪಂಚೆ, ಕೆಂಪು ಮುಂಡಾಸು ಧರಿಸಿ ಕುಳಿತಿದ್ದಾರಲ್ಲ ಅವರೇ ಹಿಮ್ಮೇಳದವರು. ಜಾಗಟೆ
ಹಿಡಿದು ದನಿಯೆತ್ತಿ ಹಾಡುತ್ತಿರುವವರೇ ಭಾಗವತರು. ಭಾಗವತ ಯಕ್ಷಗಾನ ಬಯಲಾಟದ
ಸೂತ್ರಧಾರ. ಯಕ್ಷಗಾನದ ಮೂಲಕ ಹೇಳುವ ಕಥಾ ಭಾಗವೇ ಪ್ರಸಂಗ. ಪ್ರಸಂಗದಲ್ಲಿ
ಬರುವ ಪಾತ್ರಗಳನ್ನು ವೇಷ ಹಾಕಿ ಅಭಿನಯಿಸುವವರೇ ಮುಮ್ಮೇಳದವರು. ಈ ಕಲೆ
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ
ಹೆಚ್ಚಾಗಿ ಕಂಡುಬರುತ್ತದೆ” ಎಂದರು.
ಅಷ್ಟರಲ್ಲಿ ಭಾಗವತರು ಸ್ತುತಿ ಹಾಡು ಆರಂಭಿಸಿದರು. ತಾತ “ಮಕ್ಕಳೇ! ನೋಡಿ
ಪ್ರಸಂಗ ಆರಂಭವಾಯಿತು. ಈ ದಿನದ ಪ್ರಸಂಗ ‘ಶ್ರೀ ದೇವೀ ಮಹಾತ್ಮೆ’ ” ಎಂದರು.
ಎಲ್ಲರೂ ಪ್ರಸಂಗ ನೋಡುತ್ತ ಸಂತೋಷಪಟ್ಟರು.

Summary
ಈ ಪಾಠದಲ್ಲಿ ಊರ ಜಾತ್ರೆಯ ಸಂಭ್ರಮ ಮತ್ತು ಕರ್ನಾಟಕದ ವಿವಿಧ ಜನಪದ ಕಲೆಗಳ ಪರಿಚಯವನ್ನು ನೀಡಲಾಗಿದೆ. ರಾಜು ಮತ್ತು ಕಮಲ ತಾತನೊಂದಿಗೆ ಜಾತ್ರೆಗೆ ಹೋಗಿ ಕಂಸಾಳೆ ನೃತ್ಯ, ಡೊಳ್ಳು ನೃತ್ಯ ಹಾಗೂ ಯಕ್ಷಗಾನ ಬಯಲಾಟವನ್ನು ನೋಡುತ್ತಾರೆ. ತಾತನು ಕಂಸಾಳೆ ನೃತ್ಯದ ವಿಶೇಷತೆ, ಅದರ ವಾದ್ಯ ಮತ್ತು ಮಹದೇಶ್ವರನ ಭಕ್ತರಾದ ದೇವರಗುಡ್ಡರ ಬಗ್ಗೆ ಮಕ್ಕಳಿಗೆ ವಿವರಿಸುತ್ತಾನೆ. ನಂತರ ಡೊಳ್ಳು ನೃತ್ಯದ ವೈಶಿಷ್ಟ್ಯ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಅದು ಹೆಚ್ಚಾಗಿ ಕಂಡುಬರುವುದನ್ನು ತಿಳಿಸುತ್ತಾನೆ. ಯಕ್ಷಗಾನ ಬಯಲಾಟದಲ್ಲಿ ರಂಗಸ್ಥಳ, ಹಿಮ್ಮೇಳ, ಮುಮ್ಮೇಳ, ಭಾಗವತ ಮತ್ತು ಪ್ರಸಂಗಗಳ ಮಹತ್ವವನ್ನು ತಾತ ವಿವರಿಸುತ್ತಾನೆ. ಕೊನೆಯಲ್ಲಿ ‘ಶ್ರೀ ದೇವೀ ಮಹಾತ್ಮೆ’ ಪ್ರಸಂಗವನ್ನು ನೋಡಿ ಮಕ್ಕಳು ಸಂತೋಷಪಡುತ್ತಾರೆ.
Author