This page features a video of the lesson “ಪ್ರಾಮಾಣಿಕ ಬಾಲಕ (Pramanika Balaka)”, prescribed under the Karnataka State Syllabus for 3rd Standard Kannada First Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
Lyrics
Kannada
ಶಾಲೆಯ ಗಂಟೆ ಬಾರಿಸಿತು. ಶಾಲೆಯಿಂದ ಹೊರ ಬಂದ ಮಕ್ಕಳೆಲ್ಲ ಮನೆಯತ್ತ ಹೊರಟರು.
ದಾರಿಬದಿಯ ಮಾವಿನ ತೋಪಿನಲ್ಲಿ ಬೆಳೆದು ಪಕ್ವವಾಗಿದ್ದ ಮಾವಿನ ಹಣ್ಣುಗಳು
ಮಕ್ಕಳನ್ನು ಆಕರ್ಷಿಸಿದವು. ಹಣ್ಣು ತಿನ್ನುವ ಆಸೆಯಿಂದ ಮಕ್ಕಳು ತೋಪನ್ನು ಪ್ರವೇಶಿಸಿದರು.
ಕೆಲವರು ಮರವನ್ನೇರಿದರೆ ಮತ್ತೆ ಕೆಲವರು ಕಲ್ಲು ಬೀಸಿದರು. ಸಿಕ್ಕ ಹಣ್ಣುಗಳನ್ನು ಖುಷಿಯಿಂದ
ಹಂಚಿಕೊಂಡು ತಿನ್ನ ತೊಡಗಿದರು. ಆಗ ಮಕ್ಕಳ ಗದ್ದಲ ಕೇಳಿದ ತೋಟದ ಮಾಲೀಕ.
ಧಾವಿಸಿ ಬಂದನು. ಅನಿರೀಕ್ಷಿತವಾಗಿ ಬಂದ ಅವನನ್ನು ಕಂಡು ಮಕ್ಕಳು ಗಲಿಬಿಲಿಗೊಂಡು
ಚಲ್ಲಾಪಿಲ್ಲಿಯಾಗಿ ಓಡಿದರು.
ಆದರೆ ಒಬ್ಬ ಹುಡುಗ ಮಾತ್ರ ಓಡದೇ ಅಲ್ಲಿಯೇ ನಿಂತ. ಹತ್ತಿರ ಬಂದ ಮಾಲೀಕ
ಹುಡುಗನನ್ನು ಹಿಡಿದು “ನಿನ್ನ ಅಪ್ಪ, ಅಮ್ಮ, ಗುರುಗಳು ಇದನ್ನೇ ಏನು ನಿನಗೆ ಕಲಿಸಿದ್ದು?”
ಎಂದು ಗದರಿಸಿದ. ಹುಡುಗ ಅಳತೊಡಗಿದ. ಆಗ ಮಾಲೀಕ “ಏಕೆ ಅಳುವೆ? ನಾನೇನು ನಿನಗೆ
ಹೊಡೆದೆನೆ?” ಎಂದನು. ಅದಕ್ಕೆ ಬಾಲಕ ವಿನಯದಿಂದ “ನಾನು ಮಾಡಿದ್ದು ತಪ್ಪು. ಇನ್ನೆಂದೂ
ಇಂತಹ ತಪ್ಪನ್ನು ಮಾಡುವುದಿಲ್ಲ. ಆದರೆ ನಾನು ಮಾಡಿದ ತಪ್ಪಿಗೆ ನನ್ನ ತಂದೆ, ತಾಯಿ ಮತ್ತು
ಗುರುಗಳು ನಿಂದನೆಗೆ ಗುರಿಯಾದರಲ್ಲಾ ಎಂದು ದುಃಖಿಸುತ್ತಿರುವೆ” ಎಂದನು.
ಬಾಲಕನ ಮುಗ್ಧ ಹಾಗೂ ಪ್ರಾಮಾಣಿಕ ಮಾತುಗಳನ್ನು
ಕೇಳಿ ಮಾಲೀಕನ ಮನಸ್ಸು ಕರಗಿತು. ಆಗ ಮಾಲೀಕ
“ಮಗು, ನಿನ್ನ ತಪ್ಪನ್ನು ನೀನು ಒಪ್ಪಿಕೊಂಡಿರುವೆ. ನಿನ್ನ
ಪ್ರಾಮಾಣಿಕತೆ ನನಗೆ ಇಷ್ಟವಾಯಿತು. ತಪ್ಪನ್ನು
ಅರಿಯುವ, ತಿದ್ದಿಕೊಳ್ಳುವ ನಿನ್ನ ಈ ಗುಣ, ನಿನ್ನನ್ನು
ಮತ್ತಷ್ಟು ಮಾವಿನಹಣ್ಣುಗಳನ್ನು ನೀಡಿ ಸಮಾಧಾನಪಡಿಸಿ.
ಮತ್ತಷ್ಟು ಮಾವಿನಹಣ್ಣುಗಳನ್ನು ನೀಡಿ ಸಮಾಧಾನಪಡಿಸಿ
ಕಳುಹಿಸಿದ. ಹೀಗೆ ತನ್ನ ಪ್ರಾಮಾಣಿಕತೆಯಿಂದ ಮಾಲೀಕನ
ಮನಸ್ಸನ್ನು ಗೆದ್ದ ಆ ಬಾಲಕನೇ ಲಾಲ್ ಬಹದ್ದೂರ್ ಶಾಸ್ತಿ.
ಅದು ಭಾರತದ ಸ್ವಾತಂತ್ರö್ಯ ಹೋರಾಟದ ಕಾಲ.
ಸ್ವಾತಂತ್ರö್ಯಕ್ಕಾಗಿ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ
ಚಳುವಳಿಗಳು ಶಾಸ್ತ್ರೀಯವರನ್ನು ಆಕರ್ಷಿಸಿದವು.
ದೇಶಪ್ರೇಮ ಅವರಲ್ಲಿ ಪುಟಿದೆದ್ದಿತು. ಆಗ ಗಾಂಧೀಜಿ
ಯವರ ಒಡನಾಟದಲ್ಲಿ ಶಾಸ್ತಿçಯವರು ಅನೇಕ ಚಳುವಳಿಗಳಲ್ಲಿ ಪಾಲ್ಗೊಂಡರು. ಅಂತೂ
೧೯೪೭ ಆಗಸ್ಟ್ ೧೫ರಂದು ಭಾರತ ದೇಶ ಸ್ವತಂತ್ರ ದೇಶವಾಯಿತು. ಸ್ವತಂತ್ರ ಭಾರತದ ಪ್ರಥಮ
ಪ್ರಧಾನಿಯಾದ ಜವಾಹರ್ಲಾಲ್ ನೆಹರು ಅವರ ಮಂತ್ರಿಮಂಡಲದಲ್ಲಿ ರೈಲ್ವೇ ಮಂತ್ರಿಯಾಗಿ
ಶಾಸ್ತಿçಯವರು ಕಾರ್ಯ ನಿರ್ವಹಿಸಿದರು. ಆ ಸಮಯದಲ್ಲಿ ರೈಲ್ವೇ ಅಪಘಾತವೊಂದಕ್ಕೆ ತಾವೇ
ಹೊಣೆ ಹೊತ್ತು ತಪ್ಪು ತಮ್ಮದಲ್ಲದಿದ್ದರೂ ಮಂತ್ರಿ ಪದವಿಗೆ ರಾಜೀನಾಮೆ ಕೊಟ್ಟು ಧೀಮಂತಿಕೆ
ಮೆರೆದ ಇವರು ನೆಹರೂರವರ ನಂತರ ದೇಶದ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಕೇವಲ
ಹದಿನೆಂಟು ತಿಂಗಳ ಅವಧಿಯಲ್ಲಿ ತಮ್ಮ ಪ್ರಾಮಾಣಿಕತೆ ಹಾಗೂ ದೇಶಪ್ರೇಮದ ನಡವಳಿಕೆಗಳಿಂದ
ದೇಶದೆಲ್ಲೆಡೆ ಮನೆಮಾತಾದರು.
ಶಾಸ್ತಿçಯವರು ದಕ್ಷ ಆಡಳಿತಗಾರರಾಗಿ, ಶಾಂತಿದೂತರಾಗಿ, ದೇಶ ಪ್ರೇಮಿಗಳಾಗಿ ದೇಶದ
ಕೀರ್ತಿಪತಾಕೆ ಹಾರಿಸಿದರು. ಇವರು ನೀಡಿದ ‘ಜೈ ಜವಾನ್ ಜೈ ಕಿಸಾನ್’ ಎಂಬ ಘೋಷವಾಕ್ಯ
ಜನಮನದಲ್ಲಿ ಉಳಿಯಿತು. ಇವರ ಸೇವೆಗೆ ಭಾರತ ಸರ್ಕಾರವು ‘ಭಾರತರತ್ನ’ ಪ್ರಶಸ್ತಿ ನೀಡಿ
ಗೌರವಿಸಿತು.

Summary
ಈ ಪಾಠದಲ್ಲಿ ಬಾಲಕನಾಗಿದ್ದ ಲಾಲ್ ಬಹದ್ದೂರ್ ಶಾಸ್ತ್ರಿಯವರ ಪ್ರಾಮಾಣಿಕತೆ ಮತ್ತು ಸತ್ಯನಿಷ್ಠೆಯನ್ನು ತೋರಿಸುವ ಮಾವಿನಹಣ್ಣಿನ ಘಟನೆಯನ್ನು ವಿವರಿಸಲಾಗಿದೆ. ಮಾವಿನ ತೋಪಿಗೆ ಹೋಗಿ ಮಾವಿನಹಣ್ಣುಗಳನ್ನು ತೆಗೆದುಕೊಂಡ ಮಕ್ಕಳಲ್ಲಿ ಎಲ್ಲರೂ ಮಾಲೀಕನನ್ನು ಕಂಡು ಓಡಿಹೋದರೂ, ಶಾಸ್ತ್ರಿಯವರು ಮಾತ್ರ ಅಲ್ಲಿಯೇ ನಿಂತು ತಮ್ಮ ತಪ್ಪನ್ನು ಒಪ್ಪಿಕೊಂಡರು. ತಮ್ಮ ತಪ್ಪಿನಿಂದ ತಂದೆ, ತಾಯಿ ಮತ್ತು ಗುರುಗಳು ನಿಂದನೆಗೆ ಗುರಿಯಾಗಬಹುದು ಎಂಬ ನೋವನ್ನು ಅವರು ಪ್ರಾಮಾಣಿಕವಾಗಿ ವ್ಯಕ್ತಪಡಿಸಿದಾಗ ಮಾಲೀಕನ ಮನಸ್ಸು ಕರಗಿತು. ನಂತರ ಶಾಸ್ತ್ರಿಯವರು ಗಾಂಧೀಜಿಯವರ ನೇತೃತ್ವದ ಸ್ವಾತಂತ್ರ್ಯ ಚಳುವಳಿಗಳಲ್ಲಿ ಭಾಗವಹಿಸಿ ದೇಶಪ್ರೇಮವನ್ನು ಬೆಳೆಸಿಕೊಂಡರು. ಸ್ವತಂತ್ರ ಭಾರತದ ರೈಲ್ವೇ ಮಂತ್ರಿಯಾಗಿ ಸೇವೆ ಸಲ್ಲಿಸಿದ ಅವರು ರೈಲ್ವೇ ಅಪಘಾತದ ಹೊಣೆಯನ್ನು ಹೊತ್ತು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ಭಾರತದ ಪ್ರಧಾನಮಂತ್ರಿಯಾಗಿ ಪ್ರಾಮಾಣಿಕತೆ, ದಕ್ಷ ಆಡಳಿತ ಮತ್ತು ದೇಶಪ್ರೇಮದಿಂದ ಜನಮನದಲ್ಲಿ ವಿಶೇಷ ಸ್ಥಾನ ಪಡೆದರು. ಅವರು ನೀಡಿದ ‘ಜೈ ಜವಾನ್ ಜೈ ಕಿಸಾನ್’ ಘೋಷವಾಕ್ಯ ಪ್ರಸಿದ್ಧಿಯಾಯಿತು ಮತ್ತು ಅವರ ಸೇವೆಗೆ ‘ಭಾರತ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Author