This page features a video of the lesson “ಆರೋಗ್ಯ ಭಾಗ್ಯ (Arogya Bhagya)”, prescribed under the Karnataka State Syllabus for 3rd Standard Kannada Second Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
Lyrics
Kannada
ಡಾಕ್ಟರ್: ನಿನ್ನ ಹೆಸರೇನು ಪುಟ್ಟಿ?
ಕಾವ್ಯ : ಕಾವ್ಯ.
ಡಾಕ್ಟರ್: ಏನು ತೊಂದರೆ ಕಾವ್ಯ?
ಕಾವ್ಯ : ಡಾಕ್ಟರ್, ನಿನ್ನೆಯಿಂದ ಹೊಟ್ಟೆ ನೋಯುತ್ತಿದೆ. ಶಾಲೆಗೂ ಹೋಗಿಲ್ಲ..
ಡಾಕ್ಟರ್: ಹೌದಾ... ಅದಕ್ಕೆ ಯಾಕೆ ಚಿಂತೆ? ಓ! ಇದ್ಯಾರು ನಿನ್ನ ಅಮ್ಮನಾ?
ಕಾವ್ಯ : ಹೌದು ಡಾಕ್ಟರ್.
ಡಾಕ್ಟರ್: ಸರಿ, ನಿನ್ನೆ ಏನೇನು ತಿಂದಿದ್ದೆ ಹೇಳ್ತೀಯಾ?
ಕಾವ್ಯ : ನಿನ್ನೆ ಬೆಳಗ್ಗೆ ಇಡ್ಲಿ ಚಟ್ನಿ.. ಮಧ್ಯಾಹ್ನ ಮೊಸರನ್ನ.. ಮತ್ತೆ ರಾತ್ರಿ ಅನ್ನ
ಸಾಂಬಾರ್ ಊಟ ಮಾಡಿದ್ದೆ ಸರ್.
ಡಾಕ್ಟರ್: ಆಯ್ತು. ನಿಮ್ಮ ಮನೆಗೆ ಕುಡಿಯುವ ನೀರನ್ನು ಎಲ್ಲಿಂದ ತರುತ್ತೀರಿ?
ಕಾವ್ಯ : ಮನೆಯ ಮುಂದೆ ಸಾರ್ವಜನಿಕ ನಲ್ಲಿ ಇದೆ. ಅಲ್ಲಿಂದ ನೀರು ತರುತ್ತೇವೆ
ಸರ್.
ಡಾಕ್ಟರ್ : ಅದನ್ನು ಹಾಗೆಯೇ ಕುಡಿಯಲು ಬಳಸುತ್ತೀರ?
ಅಮ್ಮ : ಇಲ್ರೀ ಸಾಯೇಬ್ರ! ಕುದಿಸಿ ಆರಿಸಿದ ನಂತರಾನೇ ಮಕ್ಳಿಗೆ ಕುಡಿಯಾಕ್
ಕೊಡ್ತೀವಿ.
ಡಾಕ್ಟರ್ : ನಿಮ್ಮ ಮನೆಯ ಸುತ್ತಲಿನ ವಾತಾವರಣ ಹೇಗಿದೆ?
ಕಾವ್ಯ : ತುಂಬಾ ಗಲೀಜಾಗಿತ್ತು. ಮನೆಯ ಮುಂದಿನ ಚರಂಡಿ ಕಟ್ಟಿಕೊಂಡಿತ್ತು.
ಅಪ್ಪನೇ ಕಟ್ಟಿಕೊಂಡ ಚರಂಡಿಯನ್ನು ಆಗಾಗ ಬಿಡಿಸಿ ಸ್ವಚ್ಛ ಮಾಡುತ್ತಿರುತ್ತಾರೆ.
ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳುತ್ತಾರೆ. ನಾವೆಲ್ಲರೂ ಸೇರಿ ಮನೆಯ
ಸುತ್ತಮುತ್ತ ಸ್ವಚ್ಛ ಮಾಡುತ್ತಿರುತ್ತೇವೆ.
ಡಾಕ್ಟರ್ : ಮನೆಯೊಳಗೆ ಗಾಳಿ ಬೆಳಕು ಸಾಕಷ್ಟು ಬರುತ್ತದೆಯೇ?
ಕಾವ್ಯ : ಹೌದು ಸರ್. ನಮ್ಮ ಮನೆಯೊಳಗೆ ಗಾಳಿ ಹಾಗು ಬೆಳಕು ಚೆನ್ನಾಗಿಯೇ
ಬರುತ್ತದೆ.
ಡಾಕ್ಟರ್ : ಮನೆಯೊಳಗೆ ಸ್ವಚ್ಛವಾಗಿದೆಯೇ?
ಕಾವ್ಯ : ಪ್ರತಿದಿನ ಮನೆಯ ಒಳಭಾಗವನ್ನು ನಾವು ಸ್ವಚ್ಛಗೊಳಿಸುತ್ತೇವೆ.
ಡಾಕ್ಟರ್ : ಸರಿ. ಹೊಟ್ಟೆನೋವು ಇದ್ದರೂ ಸಮಾಧಾನದಿಂದ ನನ್ನ ಪ್ರಶ್ನೆಗಳಿಗೆ
ಉತ್ತರಿಸಿದ್ದೀಯ. ನೀನು ಜಾಣೆ.. ಈಗ
ನಿನ್ನ ಪರೀಕ್ಷೆ ಮಾಡೋಣವೇ? ಎಲ್ಲಿ ಬಾಯಿ
ತೆರೆ.. ನಾಲಗೆ ಹೊರಗೆ ಹಾಕು.. ಹ್ಞಾಂ..
ಈಗ ನಿನ್ನ ಕಣ್ಣು ನೋಡುವೆ.. ಆಯ್ತು.. ಈಗ
ದೀರ್ಘವಾಗಿ ನಾಲ್ಕಾರು ಬಾರಿ ಉಸಿರಾಡು.
(ಕಾವ್ಯ ಡಾಕ್ಟರ್ ಸೂಚನೆಗಳನ್ನು ಪಾಲಿಸುವಳು)
ಸರಿ ಆಯ್ತು ಬಿಡು, ಹೆದರಬೇಡ. ಈಗ ಇನ್ನೊಂದೆರಡು
ಪ್ರಶ್ನೆಗಳಿಗೆ ಉತ್ತರಿಸುತ್ತೀಯಾ?
ಕಾವ್ಯ : ಸರ್ ನನಗೆ ಏನಾಗಿದೆ? ತುಂಬಾ
ಭಯವಾಗುತ್ತಿದೆ..
ಡಾಕ್ಟರ್ : ಪುಟ್ಟಿ, ಹೆದರಬೇಡ. ನೋಡು, ನಿನ್ನ ಮನೆ ಒಳಗೆ ಮತ್ತು ಹೊರಗೆ ಸ್ವಚ್ಛವಾಗಿದೆ,
ನೀವು ಕುದಿಸಿ ಆರಿಸಿದ ನೀರನ್ನು ಕುಡಿಯುತ್ತಿದ್ದೀರಿ. ನಿನ್ನೆ ಸೇವಿಸಿದ್ದೆಲ್ಲವೂ
ಒಳ್ಳೆಯ ಆಹಾರವೇ ಆಗಿದೆ. ನೀನು ಸ್ನಾನ ಮಾಡಿ ಶುಭ್ರವಾದ ಬಟ್ಟೆ ಧರಿಸಿ
ಬಂದಿದ್ದೀಯ. ನಿನ್ನ ಕೈಕಾಲಿನ ಉಗುರುಗಳು ಸ್ವಚ್ಛವಾಗಿವೆ.
ಕಾವ್ಯ : ಮತ್ತೆ.. ನನಗೆ ಹೊಟ್ಟೆನೋವು ಹೇಗೆ ಬಂತು ಸರ್?
ಡಾಕ್ಟರ್ : ಹ್ಞಾಂ ಜಾಣೆ.. ಅದನ್ನೇ ನಾವು ಈಗ ತಿಳಿದುಕೊಳ್ಳಬೇಕು. ನಿನ್ನ ನಿತ್ಯದ
ಆಹಾರವಲ್ಲದೆ ಮತ್ತೆ ಏನಾದರೂ ತಿಂದೆಯಾ? ನೆನಪು ಮಾಡಿಕೊಂಡು
ಹೇಳು?
ಕಾವ್ಯ : ಅದೂ... ಅದು... ಸರ್.
ಡಾಕ್ಟರ್ : ಯಾಕೆ? ಯಾಕೆ ಭಯ?
ಕಾವ್ಯ : ನಿನ್ನೆ ಬೆಳಗ್ಗೆ ಶಾಲೆಯ ಹೊರಗೆ ಮಾರುತ್ತಿದ್ದ ಕರಿದ ತಿಂಡಿಯನ್ನು ತಿಂದಿದ್ದೆ.
ಅಮ್ಮ ಬೈಯುತ್ತಾಳೆಂತ ಹೇಳಿರಲಿಲ್ಲ..
ಡಾಕ್ಟರ್ : ನೋಡಿದೆಯಾ.. ನಿನ್ನ ಹೊಟ್ಟೆನೋವಿಗೆ ಕಾರಣ ನಿನ್ನ ಬಳಿಯೇ ಇದೆ.
ರಸ್ತೆ ಬದಿಯಲ್ಲಿ ಮಾಡುವ ತಿಂಡಿ ತಿನಿಸುಗಳನ್ನು ತಿನ್ನಬಾರದೆಂದು
ನೀನು ಓದಿದಿಯಲ್ಲೆವೇ. ಅಂತಹ ಆಹಾರ ಪದಾರ್ಥಗಳ ಮೇಲೆ
ಧೂಳು ಕೂತಿರುತ್ತದೆ. ನೊಣ, ಸೊಳ್ಳೆಯಂತಹ ಕ್ರಿಮಿಕೀಟಗಳಿಂದ ಇವು
ಮಲಿನಗೊಂಡಿರುತ್ತವೆ. ಈಗ ಈ ಔಷಧಿಯನ್ನು ಎರಡು ದಿನ ಸೇವಿಸು.
ಮುಂದೆ ಯಾವತ್ತೂ ರಸ್ತೆ ಬದಿಯ ತಿಂಡಿ ತಿನಿಸುಗಳನ್ನು ತಿನ್ನಬೇಡ.
ಅದು ನಿನ್ನ ಹೊಟ್ಟೆಗೆ ಹೊಂದೋದಿಲ್ಲ; ತಿಳೀತಾ?
ಕಾವ್ಯ : ಅಬ್ಬಾ! ನನಗೆ ಈಗ ಸಮಾಧಾನವಾಯಿತು. ಎಲ್ಲಿ ಇಂಜೆಕ್ಷನ್ ಕೊಡುತ್ತೀರೋ
ಎಂದು ಹೆದರಿದ್ದೆ. ಇನ್ನು ಮುಂದೆ ಹಾಗೆ ಮಾಡೊಲ್ಲ ಸರ್.
ಅಮ್ಮ : ನೀವೇ ಬುದ್ಧಿ ಹೇಳಿ ಚಲೋ ಮಾಡಿದಿರಿ ಸಾಹೇಬ್ರ. ನಮ್ಮ ಮಾತೇ
ಕೇಳಾಕಿಲ್ಲ÷ಅಂತೀನಿ.
ಡಾಕ್ಟರ್ : ಆಯ್ತಮ್ಮ. ಹೋಗಿ ಬನ್ನಿ.

Summary
ಕಾವ್ಯಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಅವಳು ತನ್ನ ತಾಯಿಯೊಂದಿಗೆ ವೈದ್ಯರ ಬಳಿಗೆ ಹೋಗುತ್ತಾಳೆ. ವೈದ್ಯರು ಅವಳ ಆಹಾರ ಪದ್ಧತಿ, ಕುಡಿಯುವ ನೀರು, ಮನೆಯ ಸುತ್ತಮುತ್ತಲಿನ ಸ್ವಚ್ಛತೆ ಮತ್ತು ವೈಯಕ್ತಿಕ ಶುಚಿತ್ವದ ಬಗ್ಗೆ ಪ್ರಶ್ನಿಸುತ್ತಾರೆ. ಕಾವ್ಯಳ ಮನೆಯವರು ನೀರನ್ನು ಕುದಿಸಿ ಆರಿಸಿದ ನಂತರ ಕುಡಿಯುತ್ತಾರೆ ಮತ್ತು ಮನೆಯ ಸುತ್ತಮುತ್ತ ಹಾಗೂ ಮನೆಯ ಒಳಭಾಗವನ್ನು ಸ್ವಚ್ಛವಾಗಿಟ್ಟುಕೊಳ್ಳುತ್ತಾರೆ ಎಂದು ತಿಳಿಯುತ್ತದೆ. ನಂತರ ಕಾವ್ಯ ಶಾಲೆಯ ಹೊರಗೆ ಮಾರುತ್ತಿದ್ದ ಕರಿದ ತಿಂಡಿಯನ್ನು ತಿಂದಿದ್ದಾಗಿ ವೈದ್ಯರಿಗೆ ಹೇಳುತ್ತಾಳೆ. ರಸ್ತೆಯ ಬದಿಯಲ್ಲಿ ಮಾರುವ ಆಹಾರದ ಮೇಲೆ ಧೂಳು ಕುಳಿತುಕೊಳ್ಳಬಹುದು ಮತ್ತು ನೊಣ, ಸೊಳ್ಳೆ ಹಾಗೂ ಇತರ ಕ್ರಿಮಿಕೀಟಗಳಿಂದ ಆಹಾರ ಮಲಿನವಾಗಬಹುದು ಎಂದು ವೈದ್ಯರು ವಿವರಿಸುತ್ತಾರೆ. ಇಂತಹ ಆಹಾರವೇ ಕಾವ್ಯಳ ಹೊಟ್ಟೆನೋವಿಗೆ ಕಾರಣವಾಗಿರಬಹುದು ಎಂದು ತಿಳಿಸಿ ವೈದ್ಯರು ಔಷಧಿ ನೀಡುತ್ತಾರೆ. ಸ್ವಚ್ಛವಾದ ಆಹಾರ ಸೇವಿಸುವುದು, ಶುಚಿತ್ವ ಕಾಪಾಡುವುದು ಮತ್ತು ಆರೋಗ್ಯಕರ ಅಭ್ಯಾಸಗಳನ್ನು ಪಾಲಿಸುವುದು ಅನಾರೋಗ್ಯದಿಂದ ದೂರವಿರಲು ಮುಖ್ಯ ಎಂಬ ಸಂದೇಶವನ್ನು ಈ ಸಂಭಾಷಣೆ ನೀಡುತ್ತದೆ.
Author
ಸಮಿತಿ ರಚನೆ