This page features a video of the lesson “ಬಾಲಕಿಯ ಸಾಹಸ (Balakiya Sahasa)”, prescribed under the Karnataka State Syllabus for 3rd Standard Kannada Second Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
Lyrics
Kannada
ಅಂದು ೨೦೧೩ ಜೂನ್ ೧೬.
ಮುಸ್ಸಂಜೆಯ ಹೊತ್ತು. ಉತ್ತರಾಖಂಡದ
ಕೆದಾರನಾಥ ದೇವಾಲಯದ ಪರಿಸರದಲ್ಲಿ
ಹಿಂದೆಂದೂ ಕಂಡರಿಯದ ಭೀಕರ ಮಳೆ.
ದೇವಾಲಯದೊಳಕ್ಕೆ ನೀರು ನುಗ್ಗಿತು. ಅಲ್ಲಿಗೆ
ಪ್ರವಾಸಿಗರಾಗಿ ಬಂದಿದ್ದ ಭಕ್ತ ಸಮೂಹ
ದಿಕ್ಕಾಪಾಲಾಗಿ ಹೋಗಿತ್ತು. ದೆಹಲಿಯಿಂದ ಬಂದಿದ್ದ ಮಹಿಕಾ ಗುಪ್ತ ಎಂಬ ಒಂಬತ್ತರ
ಹರೆಯದ ಬಾಲಕಿ ಕೇದಾರನಾಥ ದೇವಾಲಯದ ಒಳಗಿದ್ದಳು. ಅವಳ ಅಪ್ಪ, ಅಮ್ಮ
ಹಾಗೂ ನಾಲ್ಕರ ಹರೆಯದ ತಮ್ಮ ಕಾಣಿಸಲೇ ಇಲ್ಲ
ಬೊಬ್ಬಿರಿದಳು. ಪ್ರವಾಹದ ಗದ್ದಲದಲ್ಲಿ ಅದು ಯಾರಿಗೂ ಕೇಳಿಸಲಿಲ್ಲ. ದೇವಾಲಯದ
ಸರಳೊಂದನ್ನು ಹಿಡಿದು ಆಕೆ ನೇತಾಡುತ್ತಿದ್ದಳು. ಮಹಿಕಾ ಗಾಬರಿಯಿಂದ
ಸ್ವಲ್ಪ ಸಮಯದ ಅನಂತರ ಓರ್ವ ಬಾಲಕನ ಚೀತ್ಕಾರ ಕೇಳಿಸಿತು. ಆಕೆ
ಕಿವಿಗೊಟ್ಟು ಆಲಿಸಿದಳು. ಆ ಧ್ವನಿ ಮಹಿಕಾಳ ತಮ್ಮನದು! ಜಲಪ್ರವಾಹವು ಆತನನ್ನು
ರಭಸದಿಂದ ಒಳಕ್ಕೆ ಎಸೆಯಿತು. ಆತನ ಕಾಲು ಕಲ್ಲೊಂದಕ್ಕೆ ಜೋರಾಗಿ ಬಡಿಯಿತು. ಮೂಳೆ
ಮುರಿದೇ ಹೋಯಿತು. ಮಹಿಕಾಳಿಗೆ ಈಜು ಬರುತ್ತಿರಲಿಲ್ಲ. ಆದರೂ ಧೈರ್ಯಗೆಡದೆ
ಅವನತ್ತ ಕೈ ಬೀಸಿದಳು. ಆತನನ್ನು ಬಲವಾಗಿ ತನ್ನೆಡೆಗೆ ಸೆಳೆದುಕೊಂಡಳು. ರಭಸವಾಗಿ
ಬರುತ್ತಿದ್ದ ನೀರು, ಮಣ್ಣು ಅವರ ಮೂಗು ಬಾಯಿಗಳಿಗೆ ನುಗ್ಗುತ್ತಿತ್ತು. ಆದರೂ ಅವಳು
ಎದೆಗುಂದಲಿಲ್ಲ. ತನ್ನ ಪುಟ್ಟ ತಮ್ಮನನ್ನು ರಕ್ಷಿಸುವುದೊಂದೇ ಅವಳ ಗುರಿಯಾಗಿತ್ತು.
ಸಹಾಯಕ್ಕಾಗಿ ಅರಚಾಡಿದಳು. ಯಾರೂ ಹತ್ತಿರ ಸುಳಿಯಲಿಲ್ಲ. ನೀರು ಮತ್ತೂ ಏರುತ್ತಿತ್ತು.
ರಾತ್ರಿಯಿಡೀ ಮಹಿಕಾ ತನ್ನ ತಮ್ಮನನ್ನು ಅಪ್ಪಿಕೊಂಡು ಸರಳನ್ನು ಹಿಡಿದು
ಅಲ್ಲೇ ಕುಳಿತಿದ್ದಳು. ಹೊಟ್ಟೆಗೆ ಕೊಚ್ಚೆನೀರೇ ಆಹಾರ. ಮತ್ತೂ ಒಂದು ದಿನ ಕಳೆಯಿತು.
ಮೂರನೆಯ ದಿವಸಕ್ಕೆ ನೀರಿನ ರಭಸ ತಗ್ಗಿತ್ತು. ರಕ್ಷಣಾಪಡೆಯವರೊಂದಿಗೆ ಆಕೆಯ
ತಾಯಿ ದೇವಾಲಯದೊಳಕ್ಕೆ ಬಂದರು. ತಮ್ಮನನ್ನು ತಬ್ಬಿಕೊಂಡು ಅನ್ನ ನೀರಿಲ್ಲದೆ ನಿತ್ರಾಣ
ಸ್ಥಿತಿಯಲ್ಲಿ ಗೋಡೆಗೊರಗಿ ಕುಳಿತಿದ್ದ ಮಹಿಕಾಳನ್ನು ಕಂಡರು. ಮಕ್ಕಳನ್ನು ಆ ಸ್ಥಿತಿಯಲ್ಲಿ
ಕಂಡ ತಾಯಿಗೆ ದುಃಖ ಉಮ್ಮಳಿಸಿ ಬಂತು. ಆಕೆ ಇಬ್ಬರನ್ನೂ ಗಟ್ಟಿಯಾಗಿ ತಬ್ಬಿಕೊಂಡಳು.
ಮರುದಿವಸ ಮಹಿಕಾಳ ವೀರಗಾಥೆಯನ್ನು ಪತ್ರಿಕೆ ದೂರದರ್ಶನ
ರೇಡಿಯೋಗಳು ಪ್ರಸಾರ ಮಾಡಿದವು ಶೌರ್ಯವನ್ನು ಮನಗಂಡು
ರಾಷ್ಟಪತಿಯವರು ೨೦೧೪ ಜನವರಿ ೨೬ರಂದು ‘ರಾಷ್ಟಿಯ ಶೌರ್ಯ ಪ್ರಶಸ್ತಿ’ಯನ್ನು
ಕೊಟ್ಟು ಗೌರವಿಸಿದರು. ಇಂದಿನ ಮಕ್ಕಳು ಮುಂದಿನ ಧೀರ ಜನಾಂಗವಾಗಬೇಕೆಂಬ
ಸಂದೇಶವನ್ನು ರಾಷ್ಟçಪತಿಯವರು ತಮ್ಮ ಭಾಷಣದಲ್ಲಿ ಸಾರಿದರು. ಇಂತಹ ಸಾಹಸ
ಮಾಡಿದ ಮಹಿಕಾ ಗುಪ್ತಳನ್ನು ಎಷ್ಟು ಕೊಂಡಾಡಿದರೂ ಸಾಲದು.

Summary
೨೦೧೩ರ ಜೂನ್ ೧೬ರಂದು ಉತ್ತರಾಖಂಡದ ಕೇದಾರನಾಥ ದೇವಾಲಯದ ಪರಿಸರದಲ್ಲಿ ಭೀಕರ ಮಳೆ ಮತ್ತು ಪ್ರವಾಹ ಸಂಭವಿಸಿತು. ದೆಹಲಿಯಿಂದ ಬಂದಿದ್ದ ಒಂಬತ್ತು ವರ್ಷದ ಮಹಿಕಾ ಗುಪ್ತಾ ತನ್ನ ತಂದೆ, ತಾಯಿ ಮತ್ತು ತಮ್ಮನಿಂದ ಬೇರ್ಪಟ್ಟು ದೇವಾಲಯದೊಳಗೆ ಸಿಲುಕಿಕೊಂಡಳು. ಪ್ರವಾಹದ ನಡುವೆ ತನ್ನ ತಮ್ಮನ ಚೀತ್ಕಾರವನ್ನು ಕೇಳಿದ ಮಹಿಕಾ, ಈಜು ಬಾರದಿದ್ದರೂ ಧೈರ್ಯದಿಂದ ಅವನನ್ನು ತನ್ನೆಡೆಗೆ ಸೆಳೆದುಕೊಂಡು ರಕ್ಷಿಸಿದಳು. ನೀರು, ಮಣ್ಣು, ಹಸಿವು ಮತ್ತು ಭಯದ ನಡುವೆಯೂ ಅವಳು ತನ್ನ ಪುಟ್ಟ ತಮ್ಮನನ್ನು ಅಪ್ಪಿಕೊಂಡೇ ರಾತ್ರಿಯಿಡೀ ಕಾಪಾಡಿದಳು. ಮೂರು ದಿನಗಳ ನಂತರ ರಕ್ಷಣಾ ಪಡೆಯವರೊಂದಿಗೆ ಬಂದ ತಾಯಿ ಇಬ್ಬರು ಮಕ್ಕಳನ್ನೂ ಜೀವಂತವಾಗಿ ಕಂಡು ಸಂತೋಷ ಮತ್ತು ದುಃಖದಿಂದ ಅವರನ್ನು ತಬ್ಬಿಕೊಂಡಳು. ಮಹಿಕಾಳ ಸಾಹಸವು ಪತ್ರಿಕೆ, ದೂರದರ್ಶನ ಮತ್ತು ರೇಡಿಯೋಗಳಲ್ಲಿ ಪ್ರಸಾರವಾಗಿ, ೨೦೧೪ರ ಜನವರಿ ೨೬ರಂದು ಆಕೆಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ಘಟನೆ ಧೈರ್ಯ, ಪ್ರೀತಿ, ಆತ್ಮವಿಶ್ವಾಸ ಮತ್ತು ಹೊಣೆಗಾರಿಕೆಯ ಮಹತ್ವವನ್ನು ಮಕ್ಕಳಿಗೆ ತಿಳಿಸುತ್ತದೆ.
Author
ಸಂಗ್ರಹ