This page features a video of the lesson “ಕರುಣೆಯ ಹಾದಿ (Karuneya Hadi)”, prescribed under the Karnataka State Syllabus for 3rd Standard Kannada Second Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
Lyrics
Kannada
ಆ ಹುಡುಗ ಜನಿಸಿದ್ದು ಬಂಗಾಳದ ಕಟಕ್ನಲ್ಲಿ ಜಾನಕಿನಾಥ್ ಬೋಸ್
ಹಾಗೂ ಪ್ರಭಾವತಿದೇವಿ ಅವರ ಒಂಬತ್ತನೆಯ ಪುತ್ರ. ಒಂದು ದಿನ ತಾಯಿ ಮಗನ
ಕೊಠಡಿಗೆ ಬಂದಾಗ ಆಶ್ಚರ್ಯ ಕಾದಿತ್ತು! ಅವನ ಕಪಾಟಿನಿಂದ ಇರುವೆಗಳು
ಸಾಲುಸಾಲಾಗಿ ಹರಿದು ಬರುತ್ತಿದ್ದವು. ಕಪಾಟನ್ನು ತೆರೆದು ನೋಡಿದಾಗ ಪುಸ್ತಕಗಳ
ನಡುವೆ ರೊಟ್ಟಿ ಗಳಿದ್ದವು ಅಲ್ಲಿ ಮುಚ್ಚಿಡುವ ಅಗತ್ಯ ಏನಿತ್ತು? ಎಂದು
ತಾಯಿ ಯೋಚಿಸಿದಳು. ಮಗ ಬಂದ ಮೇಲೆ ಕೇಳಿದರಾಯಿತು ಅಂದುಕೊಂಡಳು.
ಶಾಲೆಯಿಂದ ಬಂದ ಮೇಲೆ ಮಗನನ್ನು ಕೇಳಿದಳು.
“ಮಗೂ, ನೀನು ರೊಟ್ಟಿಗಳನ್ನು ಕಪಾಟಿನಲ್ಲಿ ಏಕೆ ಮುಚ್ಚಿಟ್ಟಿದ್ದೆ?”
ಆಗ ಮಗ ಅಳುತ್ತಾ, “ಅಮ್ಮಾ ಇನ್ನು ಆ ರೊಟ್ಟಿಗಳ ಅಗತ್ಯವಿಲ್ಲ. ತೆಗೆದು
ಎಸೆದುಬಿಡು” ಎಂದು ಹೇಳಿದನು. ಮಗ ಅಳುತ್ತಿರುವುದನ್ನು ಕಂಡು ತಾಯಿಯ
ಮನಸ್ಸು ಮರುಗಿತು.
“ಮಗು ಏಕೆ ಅಳುತ್ತಿರುವೆ?” ಎಂದು ಕೇಳಿದರು. ಆಗ ಮಗ, “ಅಮ್ಮಾ, ಪ್ರತಿದಿನ
ನನ್ನ ಊಟದಿಂದ ರೊಟ್ಟಿ ತೆಗೆದಿಟ್ಟು ಒಬ್ಬ ಬಿಕ್ಷುಕಿಗೆ ಕೊಡುತ್ತಿದ್ದೆ. ಆದರೆ ಈ ಎರಡು
ದಿನಗಳಿಂದ ಆ ಜಾಗದಲ್ಲಿ ಅವಳು ಕಾಣಿಸಲಿಲ್ಲ. ಇನ್ನು ಕಾಣಿಸುವ ಯಾವ ಲಕ್ಷಣವೂ
ಇಲ್ಲ” ಎಂದು ಹೇಳುವಾಗ ಅವನ ಗಂಟಲು ಕಟ್ಟಿತು. ಮಗನ ಮಾತನ್ನು ಕೇಳಿದ
ತಾಯಿಯ ಹೃದಯ ತುಂಬಿ ಬಂತು. ಬಡವರ ಕಷ್ಟಕ್ಕೆ ಸ್ಪಂದಿಸುವ ನಿನ್ನಂತಹ
ಕರುಣಾಮಯಿ ಮಗನನ್ನು ಪಡೆದ ನಾನೇ ಧನ್ಯೆ ಎಂದುಕೊಂಡು ಸಂತೋಷಪಟ್ಟಳು.
“ಕೀರ್ತಿವಂತನಾಗಿ ಬಾಳು” ಎಂದು ಮನಸಾರೆ ಹರಸಿದಳು.
ಅದೇ ಬಾಲಕ ಮುಂದೆ ಭಾರತದ ಸ್ವಾತಂತ್ರö್ಯ ಚಳುವಳಿಯಲ್ಲಿ ಭಾಗವಹಿಸಿದರು.
ಬ್ರಬಿಕ್ಷು ಕಿಗೆ ಿಟಿಷರ ಕೈಯಲ್ಲಿ ಸಿಲುಕಿದ ಭಾರತಮಾತೆಯ ಪರಿಸ್ಥಿತಿಯನ್ನು ಕಂಡು ಅವರ ಹೃದಯ
ಮರುಗಿತು. ಶತ್ರುವನ್ನು ಸದೆಬಡಿಯಲು ಕ್ರಾಂತಿಯ ಮಾರ್ಗವನ್ನು ಅನುಸರಿಸಿದರು.
ಹೂವಿನಂತೆ ಮೃದುವಾದ ಅವರ ಮನಸ್ಸು ವಜ್ರದಂತೆ ಕಠಿಣವಾಗಲೂ
ಬಲ್ಲುದು ಎಂಬುದನ್ನು ಸಾಧಿಸಿ ತೋರಿಸಿದರು. ವಿದೇಶದಲ್ಲಿ
ಭಾರತದ ಸ್ವತಂತ್ರಕ್ಕಾಗಿ ಸೈನ್ಯ ಕಟ್ಟಿದರು ಅವರೇ ನಮ್ಮ
ಧೀರನಾಯಕ ‘ಸುಭಾಷ್ ಚಂದ್ರಬೋಸ್.’

Summary
ಸುಭಾಷ್ ಚಂದ್ರ ಬೋಸ್ ಅವರು ಬಾಲ್ಯದಲ್ಲಿಯೇ ಬಡವರ ಬಗ್ಗೆ ಅಪಾರ ಕರುಣೆ ಮತ್ತು ಸಹಾನುಭೂತಿಯನ್ನು ಹೊಂದಿದ್ದರು. ಅವರು ತಮ್ಮ ಊಟದಿಂದ ಪ್ರತಿದಿನ ರೊಟ್ಟಿಯನ್ನು ತೆಗೆದಿಟ್ಟು ಒಬ್ಬ ಬಿಕ್ಷುಕಿಗೆ ನೀಡುತ್ತಿದ್ದರು. ಆ ಮಹಿಳೆ ಎರಡು ದಿನಗಳಿಂದ ಕಾಣಿಸದಿದ್ದಾಗ, ಆಕೆಯ ಬಗ್ಗೆ ಚಿಂತಿಸಿ ಸುಭಾಷ್ ದುಃಖದಿಂದ ಅತ್ತರು. ಮಗನ ಕರುಣಾಮಯ ಸ್ವಭಾವವನ್ನು ಕಂಡ ಅವರ ತಾಯಿ ಹೆಮ್ಮೆಪಟ್ಟು ಅವನಿಗೆ ಕೀರ್ತಿವಂತನಾಗಿ ಬಾಳುವಂತೆ ಆಶೀರ್ವದಿಸಿದರು. ಮುಂದೆ ಸುಭಾಷ್ ಚಂದ್ರ ಬೋಸ್ ಅವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿ ಬ್ರಿಟಿಷರ ಆಳ್ವಿಕೆಯಿಂದ ದೇಶವನ್ನು ಮುಕ್ತಗೊಳಿಸಲು ಹೋರಾಡಿದರು. ಮೃದುವಾದ ಹೃದಯದ ಜೊತೆಗೆ ವಜ್ರದಂತಹ ದೃಢ ಮನಸ್ಸನ್ನೂ ಹೊಂದಿದ್ದ ಅವರು ವಿದೇಶದಲ್ಲಿ ಭಾರತದ ಸ್ವಾತಂತ್ರ್ಯಕ್ಕಾಗಿ ಸೈನ್ಯವನ್ನು ಕಟ್ಟಿದರು. ಅವರ ಧೈರ್ಯ, ದೇಶಭಕ್ತಿ ಮತ್ತು ತ್ಯಾಗದ ಕಾರಣ ಅವರು ಭಾರತದ ಧೀರನಾಯಕನಾಗಿ ಪ್ರಸಿದ್ಧರಾದರು.
Author
ಸಂಗ್ರಹ