ಮ್ಯಾಂವ್ ಎಂದರ‍್ಯಾರು?

This page features a video of the lesson “ಮ್ಯಾಂವ್ ಎಂದರ‍್ಯಾರು? (Myanv Endaryaru?)”, prescribed under the Karnataka State Syllabus for 3rd Standard Kannada Second Language. Along with its summary in three languages and transliterated text. It serves as a valuable learning resource for students and parents, with each lesson accompanied by its respective text for easy reading. The synchronized text helps learners follow the lesson as it progresses, making learning easier, more effective, and enjoyable.
Lyrics Kannada
ಒಂದು ನಾಯಿಮರಿ ಮಂಚದ ಕೆಳಗೆ ಮಲಗಿ ನಿದ್ದೆ ಮಾಡುತ್ತಿತ್ತು. ಆಗ ಅದಕ್ಕೆ
‘ಮ್ಯಾಂವ್’ ಎಂಬ ಸದ್ದು ಕೇಳಿಸಿತು. ನಾಯಿಮರಿ ಥಟ್ಟನೆ ಎದ್ದು ಆಚೀಚೆ ನೋಡಿತು.
ಸದ್ದು ಎಲ್ಲಿಂದ ಬಂತೆಂದು ಎಲ್ಲ ಕಡೆಯಲ್ಲೂ ಹುಡುಕಿತು. ಟ್ರಂಕಿನ ಮೇಲೆ, ಹೊದಿಕೆಯ
ಕೆಳಗೆ, ಮಡಕೆಯ ಹಿಂದೆ. ಆದರೆ ಎಲ್ಲಿಯೂ ಯಾರೂ ಇರಲಿಲ್ಲ.


ಅದು ಮನೆಯ ಹೊರಗೆ ಬಂತು. ಆಗ ಅದಕ್ಕೆ ಒಂದು ಹುಂಜ
ಭೇಟಿಯಾಯಿತು. ನಾಯಿಮರಿ ಹುಂಜವನ್ನು ಕೇಳಿತು.

“ನೀನು ಮ್ಯಾಂವ್ ಎಂದು ಕೂಗಿದೆಯಾ?”
ಹುಂಜ “ಕೊಕ್ಕೊಕ್ಕೋ” ಎಂದಿತು.
“ನಿನಗೆ ಬೇರೆ ಏನು ಮಾತನಾಡಲು
ಬರುವುದಿಲ್ಲವೆ?” ಎಂದು ಕೇಳಿತು ನಾಯಿಮರಿ.
ಮತ್ತೆ ಹುಂಜ “ಕೊಕ್ಕೊಕ್ಕೋ” ಎಂದಿತು.
ನಾಯಿಮರಿ ತಲೆ ಅಲ್ಲಾಡಿಸಿ ಮುಂದೆ ನಡೆಯಿತು. ಸಮೀಪದಲ್ಲಿಯೇ ಕೆರೆಯ
ದಡದ ಮೇಲೆ ಒಂದು ಕಪ್ಪೆ ಕುಳಿತಿತ್ತು. ನಾಯಿಮರಿ ಕಪ್ಪೆಗೆ ಕೇಳಿತು, “ನೀನು
ಮ್ಯಾಂವ್ ಎಂದು ಕೂಗಿದೆಯಾ?”
ಕಪ್ಪೆ “ವಟರ್ ವಟರ್” ಎಂದಿತು. “ಅಯ್ಯೋ! ಕಪ್ಪೆಯೇ, ನೀನು ಮ್ಯಾಂವ್
ಎಂದು ಕೂಗಿದೆಯಾ?” ಎಂದು ಮತ್ತೆ ಕೇಳಿತು.
ಕಡೆಗೆ ಬಂದಿತು. ಕೊಟ್ಟಿಗೆಯಲ್ಲಿದ್ದ ಹಸುವಿಗೆ
“ವಟರ್ ವಟರ್” ಎಂದು ಮತ್ತೊಮ್ಮೆ
ಹೇಳಿ ಕಪ್ಪೆ ನೀರಿಗೆ ಜಿಗಿದು ಮಾಯವಾಯಿತು.

ನಾಯಿಮರಿ ಮತ್ತೆ ಆಲೋಚಿಸುತ್ತಾ ಮನೆಯ

“ನೀನು ಮ್ಯಾಂವ್ ಒಂದು ಕೂಗಿದೆಯಾ"
ಎಂದಿತು. ಹಸು “ಅಂಬಾ.. ಅಂಬಾ..” ಎಂದಿತು.
“ಅಯ್ಯೋ ಹಸುವೂ ಅಂಬಾ ಅನ್ನುತ್ತಿದೆ.
ಯಾರು ಮ್ಯಾಂವ್ ಎಂದವರು. ಎಂದು
ಯೋಚಿಸುತ್ತಾ ನಾಯಿಮರಿ ಮಂಚದ ಕೆಳಗೆ
ನುಗ್ಗುವಾಗ ಮತ್ತೆ ‘ಮ್ಯಾಂವ್’ ಎಂದು ಸದ್ದಾಯಿತು. ಈಗ ನೀವೇ
ಹೇಳಿ ಮ್ಯಾಂವ್ ಎಂದವರಾರು?
Summary
ಒಂದು ನಾಯಿಮರಿ ಮಂಚದ ಕೆಳಗೆ ಮಲಗಿ ನಿದ್ದೆ ಮಾಡುತ್ತಿದ್ದಾಗ ಅದಕ್ಕೆ ‘ಮ್ಯಾಂವ್’ ಎಂಬ ಸದ್ದು ಕೇಳಿಸುತ್ತದೆ. ಆ ಸದ್ದು ಎಲ್ಲಿಂದ ಬರುತ್ತಿದೆ ಎಂಬ ಕುತೂಹಲದಿಂದ ನಾಯಿಮರಿ ಮನೆಯಲ್ಲೆಲ್ಲ ಹುಡುಕುತ್ತದೆ. ನಂತರ ಅದು ಹುಂಜ, ಕಪ್ಪೆ ಮತ್ತು ಹಸುವನ್ನು ಭೇಟಿಯಾಗಿ ಮ್ಯಾಂವ್ ಎಂದು ಕೂಗಿದವರು ಯಾರು ಎಂದು ಕೇಳುತ್ತದೆ. ಆದರೆ ಹುಂಜ ‘ಕೊಕ್ಕೊಕ್ಕೋ’, ಕಪ್ಪೆ ‘ವಟರ್ ವಟರ್’ ಮತ್ತು ಹಸು ‘ಅಂಬಾ’ ಎಂದು ತಮ್ಮ ತಮ್ಮ ಧ್ವನಿಯಲ್ಲಿ ಉತ್ತರಿಸುತ್ತವೆ. ಇದರಿಂದ ಗೊಂದಲಗೊಂಡ ನಾಯಿಮರಿ ಮತ್ತೆ ಮಂಚದ ಕೆಳಗೆ ಹೋಗುವಾಗ ಅದೇ ‘ಮ್ಯಾಂವ್’ ಎಂಬ ಸದ್ದು ಮತ್ತೆ ಕೇಳಿಸುತ್ತದೆ. ಕಥೆಯ ಕೊನೆಯಲ್ಲಿ ಮ್ಯಾಂವ್ ಎಂದು ಕೂಗಿದವರು ಯಾರು ಎಂಬ ಪ್ರಶ್ನೆಯನ್ನು ಓದುಗರ ಮುಂದಿಡಲಾಗಿದೆ. ಈ ಕಥೆಯು ಮಕ್ಕಳಲ್ಲಿ ಕುತೂಹಲ, ಗಮನಿಸುವಿಕೆ ಮತ್ತು ಯೋಚಿಸುವ ಸಾಮರ್ಥ್ಯವನ್ನು ಬೆಳೆಸುತ್ತದೆ.
Author