ಭುವನೇಶ್ವರಿ

This page features a video of the poem “ಭುವನೇಶ್ವರಿ (Bhuvaneshvari)”, prescribed under the Karnataka State Syllabus for 5th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಭುವನೇಶ್ವರಿ ಪದ ಪೂಜಿಸಿ ಹೇಳುವೆ ಸಿರಿಗನ್ನಡ ವರ ಚರಿತೆಯನು
ಕನ್ನಡ ನಾಡಿನ ಹೆಮ್ಮೆಯ ಮಕ್ಕಳೆ ಕೇಳಿರಿ ನಾಡಿನ ಸೊಬಗನ್ನು

ಗೆದ್ದು ಪಲ್ಲವರ ಕದಂಬಮಯೂರ ಮೆರೆದನು ವರಬನವಾಸಿಯಲಿ
ತದನಂತರ ಚಾಲುಕ್ಯರ ಆಳ್ವಿಕೆ ವೀರತಾಣ ಬಾದಾಮಿಯಲಿ

ನಾಡಿನ ಹೆಮ್ಮೆಯು ಗಂಗ ಮನೆತನ ರಾಷ್ಟ್ರಕೂಟ ಹೊಯ್ಸಳ ಹಿರಿಮೆ
ವಿಜಯನಗರಸಿರಿ ಕೆಳದಿಯ ವೈಭವ ಕನ್ನಡಮಾತೆಯ ನಿಜಗರಿಮೆ

ಹೊಯ್ಸಳ ಪತನದ ನಂತರ ಬೆಳೆಯಿತು ವಿಜಯನಗರವತಿ ಶೀಘ್ರದಲಿ
ಲೋಕವೆ ಬೆರಗಾಗುವ ಸಿರಿಸಂಪದ ಮೆರೆಯಿತು ಈ ಸಾಮ್ರಾಜ್ಯದಲಿ

ಯುದ್ಧದಿ ಆಂಗ್ಲರನೆದುರಿಸಿ ಗೆದ್ದಳು ಚನ್ನಮ್ಮನು ಕಿತ್ತೂರಿನಲಿ
ದ್ರೋಹಕೆ ಸೆರೆಯಾಗುತ ದಿನವನು ದೂಡಿದಳವಳು ಜೈಲಿನಲಿ

ರಾಜರ ಅಂತಃಕಲಹದಿ ಬಿಳಿಯರು ಭಾರತವನ್ನೇ ನುಂಗಿದರು
ಮೈಸೂರಿನ ಹುಲಿ ಟೀಪುವ ಸೋಲಿಸಿ ರಂಗಪಟ್ಟಣವನಮರಿದರು

ಸ್ವತಂತ್ರ ಭಾರತ ಚಳುವಳಿ ದೇಶದಿ ಬೆಳೆಯಿತು ಗಾಂಧೀ ತತ್ವದಲಿ
ಸ್ವದೇಶಿ ಚಳುವಳಿ ಅಸಹಕಾರಗಳು ಮೊಳೆತವು ಹಿರಿಯರ ಮಾರ್ಗದಲಿ

ನಲವತ್ತೇಳರ ಆಗಸ್ಟಿನಲಿ ಹದಿನಾಲ್ಕರ ನಡುರಾತ್ರಿಯಲಿ
ಹಾರಿತು ಸ್ವತಂತ್ರ ಭಾರತಬಾವುಟ ಹೆಮ್ಮೆಯ ಭಾರತ ದೇಶದಲಿ

ಐವತ್ತಾರರ ನವೆಂಬರೊಂದು-ವಿಶಾಲ ಮೈಸೂರಿನ ಉದಯ
ಭಾವನೆ ತುಂಬಲು ಎಪ್ಪತ್ಮೂರರಲಿ ಕರ್ನಾಟಕವಾಗಿಹ ಪರಿಯ

ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಬಸವೇಶ್ವರರ ಸಿರಿಪಂಥವಿದೆ
ಕೊಂಕಣಿ ಉರ್ದು ತುಳುವಿನ ಸಂಸ್ಕೃತಿ ಕನ್ನಡತನಜಲ ಚಿಮ್ಮುತಿದೆ

"ಕನ್ನಡಗೆಲ್ಲಲಿ ಕನ್ನಡಬಾಳಲಿ" ನಮ್ಮಿ ಕನ್ನಡ ನೆಲದಲ್ಲಿ
"ಕನ್ನಡ ಕಲಿಯಿರಿ ಕನ್ನಡ ಪೋಷಿಸಿ" ನಮ್ಮಯ ಕನ್ನಡನಾಡಿನಲಿ
Summary
ಈ ಕವಿತೆ ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಕನ್ನಡದ ಹೆಮ್ಮೆಯನ್ನು ವಿವರಿಸುತ್ತದೆ. ಕದಂಬರು,
ಚಾಲುಕ್ಯರು, ಗಂಗರು, ರಾಷ್ಟ್ರಕೂಟರು, ಹೊಯ್ಸಳರು, ವಿಜಯನಗರ ಮತ್ತು ಕೆಳದಿ ಮೊದಲಾದ ರಾಜವಂಶಗಳ
ಕೊಡುಗೆಯನ್ನು ಇದು ನೆನಪಿಸುತ್ತದೆ. ಕಿತ್ತೂರು ರಾಣಿ ಚನ್ನಮ್ಮ ಮತ್ತು ಟಿಪ್ಪು ಸುಲ್ತಾನರಂತಹ ಐತಿಹಾಸಿಕ
ವ್ಯಕ್ತಿಗಳ ಹೋರಾಟವನ್ನೂ ಕವಿತೆ ಉಲ್ಲೇಖಿಸುತ್ತದೆ. ಗಾಂಧೀಜಿಯ ತತ್ವಗಳು, ಸ್ವದೇಶಿ ಮತ್ತು ಅಸಹಕಾರ
ಚಳುವಳಿಗಳ ಮೂಲಕ ಭಾರತ ಸ್ವಾತಂತ್ರ್ಯ ಪಡೆದದ್ದು ಹಾಗೂ ಮೈಸೂರು ರಾಜ್ಯವು ಕರ್ನಾಟಕವಾಗಿ
ರೂಪುಗೊಂಡದ್ದು ವಿವರಿಸಲಾಗಿದೆ. ವಿವಿಧ ಧರ್ಮಗಳು ಮತ್ತು ಭಾಷಾ ಸಂಸ್ಕೃತಿಗಳನ್ನು ಒಳಗೊಂಡ ಕರ್ನಾಟಕದಲ್ಲಿ
ಕನ್ನಡವನ್ನು ಕಲಿತು ಪೋಷಿಸಿ ಬೆಳೆಸಬೇಕು ಎಂಬುದು ಕವಿತೆಯ ಅಂತಿಮ ಕರೆ.
Author
ಕವಿ: ಬಿ.ವಿ. ಸತ್ಯನಾರಾಯಣರಾವ್