This page features a video of the poem “ಸ್ವಾತಂತ್ರ್ಯದ ಹಣತೆ (Svatantryada Hanate)”, prescribed under the Karnataka State Syllabus for 5th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ಸದಾ ಉರಿಯುತಿರುವ ಹಾಗೆ ಸ್ವಾತಂತ್ರ್ಯದ ಹಣತೆ
ದುಡಿಮೆ ತೈಲವೆರೆಯುತಿರಲು ಬಿಡುವಿಲ್ಲದೆ ಜನತೆ
ಎಂತು ಕುಂದಬಹುದು ಎಮ್ಮ ತಾಯ್ನಾಡಿನ ಘನತೆ
ಮುಳ್ಳಿನಿಂದ ಅರಿವೆ ಬಿಡಿಸಿದಂತೆ ಬಂತೆ ಮುಕ್ತಿ?
ಹುಲಿಯ ಬಾಯ ಮೇವ ಕಸಿಯುವಂತೆ ಧೀರಶಕ್ತಿ
ಪಡೆಯಿತದನು ಜನತೆ, ಬಾಳ ಬೆಸೆಯೆ ನಾಡ ಭಕ್ತಿ
ಸ್ವಾತಂತ್ರ್ಯದ ಜೊತೆಗೆ ಬಂದು ಕೂಡಲಿಲ್ಲ ಗಳಿಕೆ
ವ್ಯಕ್ತಿ ವ್ಯಕ್ತಿ ಬೆವರ ಹೀರಿ ಮರವಾಗಿದೆ ಮೊಳಕೆ,
ಮೇಲೇರಿದ ಹಾಗೆ ಭದ್ರ ಪಾಯವುಂಟು ಗೃಹಕೆ
ಸಾಗಿದಂತೆ ಸಲ್ಲುತ್ತಿರಲಿ ಸಾಧನೆಯೆಡೆ ಗಮನ
ಪ್ರಾಣವನ್ನೆ ಪಗಡೆಯಾಡಿದವರಿಗೆಮ್ಮ ನಮನ,
ತಾಯ ಮುಡಿಗೆ ದಿನವು ಏರುತಿರಲಿ ಹೂವು ದವನ

Summary
ಈ ಕವಿತೆ ಸ್ವಾತಂತ್ರ್ಯದ ಜ್ಯೋತಿಯನ್ನು ನಿರಂತರವಾಗಿ ಬೆಳಗಿಸಬೇಕಾದ ಹೊಣೆಗಾರಿಕೆಯನ್ನು ತಿಳಿಸುತ್ತದೆ. ಜನರ
ನಿರಂತರ ಪರಿಶ್ರಮವೇ ಸ್ವಾತಂತ್ರ್ಯದ ದೀಪಕ್ಕೆ ಎಣ್ಣೆಯಂತೆ ಕೆಲಸ ಮಾಡುತ್ತದೆ ಎಂದು ಕವಿತೆ ಹೇಳುತ್ತದೆ.
ಸ್ವಾತಂತ್ರ್ಯ ಸುಲಭವಾಗಿ ದೊರೆತದ್ದಲ್ಲ, ಧೈರ್ಯ ಮತ್ತು ತ್ಯಾಗದಿಂದ ಜನರು ಅದನ್ನು ಪಡೆದರು ಎಂದು ಅದು
ನೆನಪಿಸುತ್ತದೆ. ಪ್ರತಿಯೊಬ್ಬರ ಬೆವರಿನಿಂದ ದೇಶದ ಅಭಿವೃದ್ಧಿಯ ಮೊಳಕೆ ಬೆಳೆದು ಬಲವಾದ ಅಡಿಪಾಯ
ನಿರ್ಮಾಣವಾಗುತ್ತದೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಿ ಸಾಧನೆಯ ದಾರಿಯಲ್ಲಿ ಮುಂದುವರಿಯಬೇಕು
ಎಂಬುದು ಕವಿತೆಯ ಸಂದೇಶವಾಗಿದೆ.

Author
ಕೆ. ಎಸ್. ನಿಸಾರ್ ಅಹಮ್ಮದ್