ಕರಡಿ ಕುಣಿತ

This page features a video of the poem “ಕರಡಿ ಕುಣಿತ (Karadi Kunita)”, prescribed under the Karnataka State Syllabus for 5th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಕಬ್ಬಿಣ ಕೈಕಡಗ, ಕುಣಿಕೋಲು, ಕೂದಲು
ಕಂಬಳಿ ಹೊದ್ದಾಂವ ಬಂದಾನ!
ಗುಣುಗುಣುಗುಟ್ಟುತ ಕಡಗವ ಕುಟ್ಟುತ
ಕರಡಿಯನಾಡಿಸುತ ನಿಂದಾನ!

ಯಾವ ಕಾಡಡವಿಯಲಿ ಜೇನುಂಡು ಬೆಳೆದಿದ್ದ
ಜಾಂಬವಂತನ ಹಿಡಿದು ತಂದಾನ?
'ಧಣಿಯರ ಮನಿಮುಂದ ಕಾವಲು ಮಾಡಣ್ಣ
ಧಣಿ ದಾನ ಕೊಡುವನು' ಅಂದಾನ.

ತ್ರೇತಾಯುಗದ ರಾಮನ್ನ ದ್ವಾಪರದ ಕೃಷ್ಣನ್ನ
ಕಲಿಯುಗದ ಕಲ್ಕೀನ ಕಂಡಾನ.
ಜಾಂಬು ನದಿ ದಂಡೆಯ ಜಂಬುನೇರಲ ಹಣ್ಣು
ಕೃತಯುಗದ ಕೊನೆಗೀಂವಾ ಉಂಡಾನ.

ಬಂದಾರೆ ಬರ್ರೆವ್ವ, ಕಂದನ ತರ್ರೆವ್ವ.
ಅಂಜೀಕಿ ಗಿಂಜೀಕಿ ಕೊಂದಾನ.
ರೋಮ ರೋಮಗಳಲ್ಲಿ ಭೀಮರಕ್ಷಿಯ ಬಲ
ಕೊರಳಾಗ ಕಟ್ಟಿರಿ ಒಂದಾನ.

'ಕುಣಿಯಲೆ ಮಗನೆ ನೀ' ಅನ್ನೊದೊಂದೇ ತಡ
ತನ್ನನ್ನ ತಾನನ ತಂದಾನ.
ಮುದ್ದುಕೂಸಿನ ಹಾಂಗ ಮುಸುಮುಸು ಮಾಡುತ್ತ
ಕುಣಿದಾನ ಕುಣತ್ನssವ ಛಂದಾನ.

ಹೊಟ್ಟೆಗಿಲ್ಲದವರ ಹೊಟ್ಟೆಗೆ ಹಾಕಲು,
ನಡೆದಾನ ಪಡೆದಾನ ಬಂದ್ಯಾನ.
'ಕುಣಿಸುವವರ ಹೊಟ್ಟೆ ತಣ್ಣಗಾಗಲಿ' ಎಂದು
ಮುಗಿಲಿಗೆ ಕೈಮುಗಿದು ನಿಂದಾನ.

ಮನಬಲ್ಲ ಮಾನವ ಕುಣಿದಾನ ಕುಣಿಸ್ಯಾನ
ಪ್ರಾಣದ ಈ ಪ್ರಾಣಿ ಹಿಂದ್ಯಾನ,
ಕರಡಿಯ ಹೆಸರೀಲೆ ಚರಿತಾರ್ಥ ನಡಿಸ್ಯಾನ
ಪರಮಾರ್ಥ ಎಂಬಂತೆ ಬಂದಾನ.

ಈ ಮನಷಾ ಎಂದಿಂದೊ ಕವಲೆತ್ತು ಕೋಡಗ
ತನಗಾಗಿ ಕುಣಿಸುತ್ತ ನಡದಾನ.
ಕರಡೀ ಕುಣಿತಕ್ಕಿಂತ ನರರ ಬುದ್ಧಿಯ ಕುಣಿತ
ಮಿಗಿಲಹುದು ಕವಿ ಕಂಡು ನುಡಿದಾನ.
Summary
ಈ ಕವಿತೆ ಕರಡಿಯನ್ನು ಕುಣಿಸುವ ವ್ಯಕ್ತಿಯ ಜನಪದೀಯ ಮತ್ತು ಹಾಸ್ಯಮಯ ಚಿತ್ರಣವನ್ನು ನೀಡುತ್ತದೆ. ಅವನು
ಕಬ್ಬಿಣದ ಕಡಗ, ಕೋಲು ಮತ್ತು ಕಂಬಳಿಯೊಂದಿಗೆ ಬಂದು ಕರಡಿಯನ್ನು ಕುಣಿಸುತ್ತಾ ಜನರ ಗಮನ ಸೆಳೆಯುತ್ತಾನೆ.
ಕಥೆಯಲ್ಲಿ ಜಾಂಬವಂತ, ರಾಮ, ಕೃಷ್ಣ, ಕಲ್ಕಿ ಮತ್ತು ಭೀಮರಕ್ಷಸಿಯಂತಹ ಪೌರಾಣಿಕ ಉಲ್ಲೇಖಗಳು ಕಲ್ಪನೆಗೆ
ವಿಶೇಷತೆ ನೀಡುತ್ತವೆ. ಅವನು ದುಡಿದು ಬಡವರ ಹೊಟ್ಟೆ ತುಂಬಿಸಲು ಸಹಾಯ ಮಾಡುವ ಮನಸ್ಸನ್ನು ಹೊಂದಿದ್ದಾನೆ
ಎಂಬುದೂ ವ್ಯಕ್ತವಾಗುತ್ತದೆ. ಕೊನೆಯಲ್ಲಿ ಕವಿಯು ಕರಡಿಯ ಕುಣಿತಕ್ಕಿಂತ ಮಾನವನ ಬುದ್ಧಿಯ ಕುಣಿತವೇ ಶ್ರೇಷ್ಠ
ಎಂದು ಹೇಳಿ ಮಾನವ ಬುದ್ಧಿಶಕ್ತಿಯ ಮಹತ್ವವನ್ನು ಒತ್ತಿಹೇಳುತ್ತಾನೆ.
Author
ಕವಿ: ದ. ರಾ. ಬೇಂದ್ರೆ