ಮೂಡಲ ಮನೆ

This page features a video of the poem “ಮೂಡಲ ಮನೆ (Mudala Mane)”, prescribed under the Karnataka State Syllabus for 5th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ನಮ್ಮೂರ ಅಗಸ್ಯಾಗ ಆಲದ ಮರ ಬೆಳೆದು
ಹಾದಿ ಬೀದೆಲ್ಲಾ ತಂಪು ನೆರಳ|
ನೆತ್ತಿಗೂದಲ ಹರವಿ ತಪವ ಮಾಡೋನ್ಯಾರ|
ಜಡಿಮುನಿಯ ಜಡಿಯ ಹಾಂಗ ಬಿಳಲ ॥

ರೆಂಬಿ ಕೊಂಬಿಯ ಮ್ಯಾಲ ಗೂಡ ಕಟ್ಟಿದಾವ
ರೆಕ್ಕೆ ಬಲಿತ ಹಕ್ಕಿ
ಗೂಡಿನಾಗ | ಮಲಗ್ಯಾವ ಮರಿಹಕ್ಕಿ ॥

ದೂರ ದೇಶದ ವಲಸಿಗ ಹಕ್ಕಿಗು
ಐತಿ ಜಾಗ ಒಳಗ |
ಬನ್ನಿರಿ | ನೀವು ನಮ್ಮ ಬಳಗ ॥

ಹಳೆಯ ಬಾವಿಯ ತಳದ ನೀರಿನಾಗ
ಹಸರು ಚಿಗರತಾವ |
ಬೇರಿಗೆ ಮೊಳಿಕಿ ಒಡಿಯತಾವ ॥

ಭೂತ ಬೇತಾಳ ಜೋತ ಬಾವಲಿ
ಮ್ಯಾಲ ಕೂಗತಾವ ।
ಮರದಾಗ ॥ ಕರಗ ಕುಣಿಯತಾವ ॥

ಮರದ ಎಲೆ ನೆರಳು ಮನೆಯ ಗೋಡೆ ಮ್ಯಾಲ
ಆಡತಾವ ಆಟ
ಮೂಡ್ಯಾವ | ತೊಗಲ ಗೊಂಬಿಯಾಟ
ಕರುಳ ಬಳ್ಳಿಯ ಕತೆಯ ಹೇಳತಾವ
ನೋಡ್ರಿ ಶಾಂತ ಚಿತ್ತ |
ನಾವೂನು ಅದರ ಭಾಗ ಮಾತ್ರ ॥
Summary
ಈ ಕವಿತೆ ಊರಿನ ಆಲದ ಮರವನ್ನು ಜೀವಜಗತ್ತಿನ ಆಶ್ರಯ ಮತ್ತು ಸಮುದಾಯದ ಕೇಂದ್ರವಾಗಿ ಚಿತ್ರಿಸುತ್ತದೆ. ಅದರ
ತಂಪಾದ ನೆರಳು, ಹರಡಿರುವ ಬೇರುಗಳು ಮತ್ತು ಜಟೆಗಳಂತಿರುವ ಕೊಂಬೆಗಳು ಪ್ರಕೃತಿಯ ವೈಭವವನ್ನು
ತೋರಿಸುತ್ತವೆ. ಅನೇಕ ಹಕ್ಕಿಗಳು, ಮರಿಹಕ್ಕಿಗಳು ಮತ್ತು ವಲಸೆ ಹಕ್ಕಿಗಳು ಅದರಲ್ಲೇ ಆಶ್ರಯ ಪಡೆಯುತ್ತವೆ. ಹಳೆಯ
ಬಾವಿ, ಹಸಿರು ಚಿಗುರುಗಳು, ಬಾವಲಿಗಳು, ಜನಪದ ನೃತ್ಯ ಮತ್ತು ಮನೆಯ ಗೋಡೆಗಳ ಮೇಲಿನ ಎಲೆಗಳ ನೆರಳು ಮರದ
ಸುತ್ತಲಿನ ಜೀವಂತ ಜಗತ್ತನ್ನು ರೂಪಿಸುತ್ತವೆ. ಮನುಷ್ಯರೂ ಈ ವಿಶಾಲ ಪ್ರಕೃತಿ ಜೀವನದ ಒಂದು ಭಾಗ ಮಾತ್ರ
ಎಂಬ ವಿನಯಪೂರ್ಣ ಅರಿವನ್ನು ಕವಿತೆ ನೀಡುತ್ತದೆ.
Author
ಕವಿ: ಚಂದ್ರಶೇಖರ ಕಂಬಾರ