ಮಗುವಿನ ಮೊರೆ

This page features a video of the poem “ಮಗುವಿನ ಮೊರೆ (Maguvina More)”, prescribed under the Karnataka State Syllabus for 5th Standard Kannada First Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಉರಿಯಲಿಲ್ಲ ಆರಲಿಲ್ಲ
ಬಾಳ ಹಣತೆ ಹೇ ಪ್ರಭೋ!

ಬತ್ತಲಿಲ್ಲ ತುಂಬಲಿಲ್ಲ
ಬಾಳ ಒರತೆ ಹೇ ವಿಭೋ !

ಅರಳಲಿಲ್ಲ ಉರುಳಲಿಲ್ಲ
ಬಾಳ ಹೂವು ಹೇ ಪ್ರಭೋ !

ಮುಳುಗಲಿಲ್ಲ ತೇಲಲಿಲ್ಲ
ಬಾಳ ನಾವೆ ಹೇ ವಿಭೋ !

ಏಳಲೇಕೆ ಬೀಳಲೇಕೆ
ಬಾಳಲೇಕೆ ಈ ತೆರ ?

ಗೊಳಮೊಟ್ಟೆಯಿಟ್ಟು ಬಂತು
ಬಾಳ ಮರಿಗೆ ಬೇಸರ !

ಇರವಿಗೊಂದು ಗುರಿಯ ತೋರು
ಇದನೆ ಬೇಡಿಕೊಳ್ಳುವೆ !

ಬದುಕಿಗೊಂದು ಅರ್ಥ ತೋರು
ಅದನೆ ಹಾಡಿಕೊಳ್ಳುವೆ !
Summary
ಈ ಕವಿತೆ ಜೀವನದ ಅರ್ಥ ಮತ್ತು ಗುರಿಯನ್ನು ಹುಡುಕುವ ವ್ಯಕ್ತಿಯ ಅಂತರಂಗದ ಪ್ರಶ್ನೆಗಳನ್ನು
ವ್ಯಕ್ತಪಡಿಸುತ್ತದೆ. ಜೀವನದ ದೀಪ ಉರಿಯದೆ, ಆರದೆ ಇರುವಂತೆ ಒಂದು ಸ್ಥಗಿತ ಸ್ಥಿತಿಯನ್ನು ಕವಿ
ಅನುಭವಿಸುತ್ತಾನೆ. ಜೀವನದ ಹೂವು ಅರಳದೆ ಅಥವಾ ಉದುರದೆ ಮತ್ತು ಬದುಕಿನ ದೋಣಿ ಮುಳುಗದೆ ಅಥವಾ ತೇಲದೆ
ಇರುವ ಚಿತ್ರಣವು ಗೊಂದಲವನ್ನು ಸೂಚಿಸುತ್ತದೆ. ಕವಿ ದೇವರಲ್ಲಿ ಬದುಕಿಗೆ ಒಂದು ಸ್ಪಷ್ಟ ಗುರಿ ಮತ್ತು
ಅರ್ಥವನ್ನು ತೋರಿಸಬೇಕೆಂದು ಪ್ರಾರ್ಥಿಸುತ್ತಾನೆ. ಗುರಿ ಮತ್ತು ಅರ್ಥ ದೊರೆತಾಗ ಅದನ್ನು ಜೀವನದ ಹಾಡಾಗಿ
ಸ್ವೀಕರಿಸುವ ಆಶಯವೇ ಕವಿತೆಯ ಮುಖ್ಯ ಭಾವವಾಗಿದೆ.
Author
ಕವಿ: ಕಾವ್ಯಾನಂದ (ಸಿದ್ಧಯ್ಯ ಪುರಾಣಿಕ)