ಹಲ್ಲು ತಪಾಸಣೆ

This page features a video of the poem “ಹಲ್ಲು ತಪಾಸಣೆ (Hallu Tapasane)”, prescribed under the Karnataka State Syllabus for 4th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ವೈದ್ಯರು ಬಂದರು
ಶಾಲೆಯ ಒಳಗೆ
ಮಕ್ಕಳ ಹಲ್ಲು ತಪಾಸಣೆಗೆ

ಹಲ್ಲನು ನೋಡದೆ
ಮಕ್ಕಳ ಜೇಬಲಿ
ಏನುಂಟೆಂದು ಹುಡುಕಿದರೂ

ಒಬ್ಬನ ಜೇಬಲಿ
ಚಾಕಲೇಟ್ ಸಿಕ್ಕರೆ
ಪುಟಾಣಿ ಮಿಠಾಯಿ ಮತ್ತೊಬ್ಬನಲಿ

ಬೆಂಡು ಬತ್ತಾಸು
ಒಬ್ಬನದಾದರೆ
ಕಡಲೆ ಶೇಂಗಾ ಇನ್ನೊಬ್ಬನದು

ತಿನಿಸನು ತಿಂದ
ಎಲ್ಲರ ಹಲ್ಲನು
ವೈದ್ಯರು ತೆರೆದು ನೋಡಿದರು

ಹಲ್ಲಿಗೆ ಹುಳುಕು
ಒಸಡಿಗೆ ರಕ್ತ
ವಾಸನೆ ಇದ್ದವು ಅವುಗಳಲಿ

ಹುಳುಕೇ ಇಲ್ಲದ
ವೈದ್ಯರ ಹಲ್ಗಳು
ಹೊಳೆಯುತಲಿದ್ದವು ಲಕಲಕನೆ
Summary
ಈ ಪದ್ಯವು ಶಾಲೆಗೆ ಬಂದ ವೈದ್ಯರು ಮಕ್ಕಳ ಹಲ್ಲುಗಳನ್ನು ಪರೀಕ್ಷಿಸುವ ಹಾಸ್ಯಮಯ ಘಟನೆಯನ್ನು ಹೇಳುತ್ತದೆ. ವೈದ್ಯರು ಹಲ್ಲು ನೋಡುವುದರ ಜೊತೆಗೆ ಮಕ್ಕಳ ಜೇಬಿನಲ್ಲಿ ಏನೆಲ್ಲ ತಿನಿಸುಗಳಿವೆ ಎಂಬುದನ್ನೂ ಗಮನಿಸುತ್ತಾರೆ. ಕೆಲವರ ಜೇಬಿನಲ್ಲಿ ಚಾಕಲೇಟ್ ಮತ್ತು ಮಿಠಾಯಿ ಇದ್ದರೆ, ಇನ್ನೂ ಕೆಲವರ ಬಳಿ ಬೆಂಡುಬತ್ತಾಸು ಮತ್ತು ಕಡಲೆಶೇಂಗಾ ಇರುತ್ತವೆ. ಇಂತಹ ಸಿಹಿ ಮತ್ತು ತಿನಿಸುಗಳನ್ನು ತಿನ್ನುವುದರಿಂದ ಮಕ್ಕಳ ಹಲ್ಲುಗಳಲ್ಲಿ ಹುಳುಕು, ಒಸಡಿನಲ್ಲಿ ರಕ್ತ ಮತ್ತು ದುರ್ವಾಸನೆ ಕಾಣಿಸಿಕೊಳ್ಳುತ್ತದೆ. ಆದರೆ ವೈದ್ಯರ ಹಲ್ಲುಗಳು ಹುಳುಕಿಲ್ಲದೆ ಹೊಳೆಯುತ್ತಿರುವುದರಿಂದ ಸ್ವಚ್ಛ ಹಲ್ಲುಗಳಿಗೆ ಸರಿಯಾದ ಆಹಾರ ಮತ್ತು ಆರೈಕೆ ಅಗತ್ಯವೆಂಬ ಸಂದೇಶ ಸಿಗುತ್ತದೆ.
Author
ಕವಿ: ಹೆಚ್.ಕೆ.ಆವಟಿ