ಪುಟ್ಟನ ಗಾಳಿಪಟ

This page features a video of the poem “ಪುಟ್ಟನ ಗಾಳಿಪಟ (Puttana Galipata)”, prescribed under the Karnataka State Syllabus for 4th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಹಸುರಿನ ಹಾಳೆಯ ಗಾಳಿಪಟ
ಕಾಸಿಗೆ ಕೊಂಡನು ನಮ್‌ ಪುಟ್ಟ

ನಡೆದನು ಪುಟ್ಟನು ಮನೆಯಾಚೆ
ಗೆಳೆಯರ ಬಳಗವ ಕರೆಯಲಿಕೆ

ಬಂದಿಹ ಗೆಳೆಯರ ನೋಡುತಲಿ
ಹಾಡಿದ ಪುಟ್ಟನು ಜಂಭದಲಿ

“ಉದ್ದದ ಬಾಲಂಗೋಚಿಯಿದೆ-
ಗಗನಕೆ ತಲುಪುವ ದಾರವಿದೆ

ನನ್ನಲ್ಲಿಹುದೂ ನಿಮ್ಮಲ್ಲಿಲ್ಲಾ-
ಖಂಡಿತ ನಿಮಗೆ ಕೊಡುವುದೆ ಇಲ್ಲಾ”

ಪುಟ್ಟನು ಓಡಿದ ಕುಣಿದಾಡಿ
ಗೆಳೆಯರು ಬಂದರು ಓಡೋಡಿ

ಪಟವದು ಮರಕ್ಕೆ ಸಿಲುಕಿತ್ತು
ಪುಟ್ಟಗೆ ಅಳುವೂ ಬಂದಿತ್ತು

ಪುಟ್ಟನ ಪಟವದು ಹಾಳಾಯ್ತು
ಜಂಭದ ಪುಟ್ಟಗೆ ಪೆಚ್ಚಾಯ್ತು

ಗೆಳೆಯರು ಪಟವನು ಬಿಡಿಸಿದರು
ಪುಟ್ಟಗೆ ಕೊಟ್ಟು ನಗಿಸಿದರು

ಪುಟ್ಟನ ಜಂಭವು ಕರಗಿತ್ತು
ಪಟವದು ಎಲ್ಲರ ಪಾಲಾಯ್ತು
Summary
ಈ ಪದ್ಯದಲ್ಲಿ ಪುಟ್ಟ ಎಂಬ ಬಾಲಕನು ಹಸಿರು ಗಾಳಿಪಟವನ್ನು ಕೊಂಡು ತನ್ನ ಗೆಳೆಯರ ಮುಂದೆ ಅದರ ಬಗ್ಗೆ ಜಂಭಪಡುತ್ತಾನೆ. ಗಾಳಿಪಟಕ್ಕೆ ಉದ್ದವಾದ ಬಾಲಂಗೋಚಿ ಮತ್ತು ಆಕಾಶ ತಲುಪುವಷ್ಟು ದಾರವಿದೆ ಎಂದು ಅವನು ಹೆಮ್ಮೆಯಿಂದ ಹೇಳುತ್ತಾನೆ. ತನ್ನ ಗಾಳಿಪಟವನ್ನು ಗೆಳೆಯರಿಗೆ ಕೊಡುವುದಿಲ್ಲ ಎಂದು ಹೇಳುವುದರಿಂದ ಅವನ ಅಹಂಕಾರ ಸ್ಪಷ್ಟವಾಗುತ್ತದೆ. ಆದರೆ ಗಾಳಿಪಟ ಮರಕ್ಕೆ ಸಿಲುಕಿದಾಗ ಪುಟ್ಟನಿಗೆ ದುಃಖವಾಗುತ್ತದೆ ಮತ್ತು ಅವನ ಜಂಭವು ಕಡಿಮೆಯಾಗುತ್ತದೆ. ಗೆಳೆಯರು ಸಹಾಯ ಮಾಡಿ ಗಾಳಿಪಟವನ್ನು ಬಿಡಿಸಿ ಅವನಿಗೆ ಕೊಟ್ಟಾಗ ಅವನು ತನ್ನ ಜಂಭವನ್ನು ಬಿಟ್ಟು ಗಾಳಿಪಟವನ್ನು ಎಲ್ಲರೊಂದಿಗೆ ಹಂಚಿಕೊಳ್ಳುತ್ತಾನೆ.
Author
ಕವಿ: ಡಾ. ವರದಾ ಶ್ರೀನಿವಾಸ