ಮಂಗನ ಮದುವೆ

This page features a video of the poem “ಮಂಗನ ಮದುವೆ (Mangana Maduve)”, prescribed under the Karnataka State Syllabus for 4th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics Kannada
ಬಿಸಿಲು ಮಳೆಯೂ ಕೂಡಿದವು
ಧಗೆಯನು ತಂಪು ಮಾಡಿದವು
ಕೋತಿಯು ಮಾಡಿತು ತುಂಟತನ
ಕೋಳಿಯು ಮಾಡಿತು ಮೂರ್ಖತನ

ಕೋತಿಗು ಕೋಳಿಗು ನೆಂಟತನ
ಮಾಡಲು ಬೇಕೆಂಬುವ ಹದನ
ಮೃಗಗಳು ಖಗಗಳು ಚರ್ಚಿಸುತ
ಮದುವೆಗೆ ಮಾಡಿದರಣಿ ನಗುತ

ಮಂಗಗೆ ಪಂಚೆಯನುಡಿಸಿದರು
ರಂಗಿನ ಅಂಗಿಯ ಹಾಕಿದರು
ಸಿಂಗರದೊಡವೆಯ ತೊಡಿಸಿದರು
“ಲಾಗಾ ಹಾಕೋ ಮಂಗಣ್ಣ!

ಥೈ ಥೈ ಕುಣಿಯೋ ತಿಮ್ಮಣ್ಣಾ!
ಮದುವಣಿಗನು ನೀ ಹೌದಣ್ಣಾ
ಮೃಗವದು ಹಕ್ಕಿಯ ವರಿಸುವುದು
ನಿನ್ನಿಂ ಮೊದಲಾದುದು ಇಂದು

ನೀನೇ ದಾರಿಯ ತೋರಿಸಿದೆ
ನೀನೆ ಸುಧಾರಕನೆನ್ನಿಸಿದೆ”
ಎಂದು ವಿನೋದದಿ ಆಡಿದರು
ಚಂದದ ಪದಗಳ ಹಾಡಿದರು

ಕೋಳಿಗೆ ಸೀರೆಯನ್ನುಡಿಸಿದರು
ಚಿನ್ನದೊಡವೆಗಳ ತೊಡಿಸಿದರು.
“ಕೊಕ್-ಕೊಕ್ ಕೋ ಕೋ
ಮಂಗನ ರಾಣಿಯು ನೀನಿನ್ನು

ಬಗ್ಗಿಸುವೇತಕೆ ತಲೆಯನ್ನು?
ಕೊಂಕಿಸುವೇತಕೆ ನಡೆಯನ್ನು?
ಬಿಡು ಬಿಡು ಲಜ್ಜೆಯ ಹೂಮಾಲೆ
ಕಪಿವರನಿಗೆ ಹಾಕಲೆ ಬಾಲೆ!”

ಎನ್ನುತ ಚೇಷ್ಟೆಯ ಮಾಡಿದರು
ಹಿಗ್ಗುತ್ತ ನಲಿನಲಿದಾಡಿದರು
ಸಂಭ್ರಮದೊಳಗಾಯಿತು ಮದುವೆ
ಮರ್ಕಟ ಕುಕ್ಕುಟರಾ ಮದುವೆ.
Summary
ಈ ಪದ್ಯವು ಕೋತಿ ಮತ್ತು ಕೋಳಿಯ ಕಲ್ಪಿತ ಮದುವೆಯನ್ನು ಹಾಸ್ಯಮಯವಾಗಿ ಚಿತ್ರಿಸುತ್ತದೆ. ಬಿಸಿಲು ಮತ್ತು ಮಳೆ ಸೇರಿ ವಾತಾವರಣ ತಂಪಾಗುವ ಸಂದರ್ಭದಲ್ಲಿ ಕೋತಿ ತುಂಟತನ ಮತ್ತು ಕೋಳಿ ಮೂರ್ಖತನ ಮಾಡುವುದರಿಂದ ಮದುವೆಯ ಕಲ್ಪನೆ ಮೂಡುತ್ತದೆ. ಪ್ರಾಣಿಗಳು ಮತ್ತು ಪಕ್ಷಿಗಳು ಸೇರಿ ಮದುವೆಗೆ ಸಿದ್ಧತೆ ಮಾಡಿ ಕೋತಿಗೆ ಪಂಚೆ, ಅಂಗಿ ಮತ್ತು ಆಭರಣಗಳನ್ನು ತೊಡಿಸುತ್ತವೆ. ಕೋಳಿಗೂ ಸೀರೆ ಮತ್ತು ಚಿನ್ನದ ಆಭರಣಗಳನ್ನು ತೊಡಿಸಿ ಅವಳನ್ನು ಕೋತಿಯ ರಾಣಿಯೆಂದು ಕರೆಯುತ್ತಾರೆ. ವಿನೋದ, ಹಾಡು ಮತ್ತು ನೃತ್ಯದ ನಡುವೆ ಮರ್ಕಟ ಮತ್ತು ಕುಕ್ಕುಟರ ಮದುವೆ ಸಂಭ್ರಮದಿಂದ ನಡೆಯುತ್ತದೆ.
Author
ಕವಿ: ಜಿ.ಎನ್. ಲಕ್ಷ್ಮಣ ಪೈ