This page features a video of the poem “ನನ ಕಂದ (Nana Kanda)”, prescribed under the Karnataka State Syllabus for 4th Standard Kannada Second Language. Along with its summary in three languages and transliterated songs. It serves as a valuable learning resource for students and parents, with each song accompanied by its respective lyrics for easy sing-along. The synchronized lyrics help learners follow and recite the song as it progresses, making memorization and learning by heart easier, more effective, and enjoyable.
Lyrics
Kannada
ನನ ಕಂದಾ ಮುದ್ದು, ಹೊನ್ನ ತಾವರಿ ಮುದ್ದು
ಹಣ್ಣುಳ್ಳ ಗಿಡಕ ಗಿಣಿ ಮುದ್ದು
ಕಂದವ್ವ ನೀ ಮುದ್ದು ನನ್ನ ಬಳಗಕ
ನಡೆದಾಡ ಕಂದನ ನಡಗೀಯ ನೋಡೀನ
ಸಡಗರದಿಂದ ತೊಡಸೀನ
ಕಂದಯ್ಯಗ ಆಯಿ ಮಾಡಿಸಿಕೊಟ್ಟ ಕಿರುಗೆಜ್ಜೆ
ತೊಟ್ಲಾನ ಕೂಸೀಗಿ ದಿಟ್ಟಿಯಾದಾವಂದ
ಕಟ್ಟೀದ ನವಿಲಗರಿಗೋಳ
ಬಾಳಾಗ ಕರಿಬೇವಿನ ದಿಟ್ಟಿ ತೆಗೆದೇನ
ಕಂಡದ್ದು ಕನಸಾಗಿ ಉಂಡದ್ದು ಸವಿಯಾಗಿ
ಕಂದ ನೀ ಕಾಡಬೇಡೆಂದು
ಬೇಡುವೆ ಕಂದಯ್ಯ ಮಾಡೋ ನಿನಿದ್ದೀಯ
ಹಣ್ಣುಳ್ಳ ಗಿಡಕ ಗಿಣಿ ಮುದ್ದು
ಕಂದವ್ವ ನೀ ಮುದ್ದು ನನ್ನ ಬಳಗಕ
ನಡೆದಾಡ ಕಂದನ ನಡಗೀಯ ನೋಡೀನ
ಸಡಗರದಿಂದ ತೊಡಸೀನ
ಕಂದಯ್ಯಗ ಆಯಿ ಮಾಡಿಸಿಕೊಟ್ಟ ಕಿರುಗೆಜ್ಜೆ
ತೊಟ್ಲಾನ ಕೂಸೀಗಿ ದಿಟ್ಟಿಯಾದಾವಂದ
ಕಟ್ಟೀದ ನವಿಲಗರಿಗೋಳ
ಬಾಳಾಗ ಕರಿಬೇವಿನ ದಿಟ್ಟಿ ತೆಗೆದೇನ
ಕಂಡದ್ದು ಕನಸಾಗಿ ಉಂಡದ್ದು ಸವಿಯಾಗಿ
ಕಂದ ನೀ ಕಾಡಬೇಡೆಂದು
ಬೇಡುವೆ ಕಂದಯ್ಯ ಮಾಡೋ ನಿನಿದ್ದೀಯ
Summary
ಈ ಪದ್ಯವು ಮಗುವಿನ ಮೇಲಿನ ತಾಯಿಯ ಮಮತೆಯನ್ನು ಮಧುರವಾಗಿ ವ್ಯಕ್ತಪಡಿಸುತ್ತದೆ. ಮಗು ತಾವರೆ, ಹಣ್ಣುಳ್ಳ ಗಿಡದ ಗಿಣಿ ಮುಂತಾದ ಸುಂದರ ವಸ್ತುಗಳಿಗೆ ಹೋಲಿಕೆಯಾಗಿ ಮುದ್ದಾಗಿ ಕಾಣುತ್ತದೆ. ಮಗು ನಡೆಯುವಾಗ ಅದರ ನಡಿಗೆಯನ್ನು ನೋಡಿ ತಾಯಿ ಸಂತೋಷಪಡುತ್ತಾಳೆ ಮತ್ತು ಕಿರುಗೆಜ್ಜೆ ತೊಡಿಸಿ ಅಲಂಕರಿಸುತ್ತಾಳೆ. ಮಗುವಿಗೆ ದೃಷ್ಟಿದೋಷ ಬಾರದಂತೆ ನವಿಲಗರಿ ಮತ್ತು ಕರಿಬೇವಿನ ದಿಟ್ಟಿಯನ್ನು ಕಟ್ಟುವ ಮಮತೆಯ ಸಂಪ್ರದಾಯವನ್ನು ಪದ್ಯವು ಹೇಳುತ್ತದೆ. ಮಗುವು ಚೆನ್ನಾಗಿ ನಿದ್ರೆ ಮಾಡಲಿ ಮತ್ತು ಯಾವುದೇ ತೊಂದರೆ ಕೊಡದೆ ಸುಖವಾಗಿರಲಿ ಎಂದು ತಾಯಿ ಪ್ರೀತಿಯಿಂದ ಹಾರೈಸುತ್ತಾಳೆ.
Author
ಜನಪದ